ಹುಬ್ಬಳ್ಳಿ: `ನಿರಂತರವಾಗಿ ಸುರಿಯುತ್ತಿರುವ ಮಳೆ. ಎಲ್ಲ ಸಂಪರ್ಕ ವ್ಯವಸ್ಥೆಗಳೂ ಸ್ಥಗಿತ. ಭಾರಿ ಮಳೆಯಿಂದಾಗಿ ಹೊರಗೆ ಬರಲು ಸಾಧ್ಯವಾಗದೆ ಒಂದು ರೀತಿಯಲ್ಲಿ ಮೂರು ದಿನದಿಂದಲೂ ಹೋಟೆಲ್ ಕೋಣೆಯಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮ ಕೂಡ ಸುರಿಯುತ್ತಿರುವುದು ಚಿಂತೆಯನ್ನು ಹೆಚ್ಚಿಸಿದೆ'.

`ಪ್ರತಿಕ್ಷಣವೂ ಆತಂಕ. ಏನೂ ತಿಳಿಯುತ್ತಿಲ್ಲ... ಎಲ್ಲಿ ನೋಡಿದರೂ ಬರೀ ನೀರು, ನದಿ ಅಷ್ಟೇ ಅಲ್ಲ, ನಾವಿರುವ ಹೋಟೆಲ್ ಸುತ್ತಲಿನ ರಸ್ತೆಗಳೂ ಜಲಾವೃತವಾಗಿವೆ' ಎಂದು ಬದರಿನಾಥ ಮತ್ತು ಕೇದಾರನಾಥಕ್ಕೆ ತೀರ್ಥಯಾತ್ರೆಗೆ ತೆರಳಿರುವ ಹುಬ್ಬಳ್ಳಿಯ ಹುಡಾದ ನಿವೃತ್ತ ಅಧಿಕಾರಿ ಶ್ಯಾಮಸುಂದರ್ ಜೋಶಿ ಮತ್ತು ಉಷಾ ಜೋಶಿ ಮೂರು ದಿನಗಳಿಂದ ತಾವು ಪಡುತ್ತಿರುವ ಯಾತನೆಯನ್ನು ಪ್ರಜಾವಾಣಿಯೊಂದಿಗೆ ಹಂಚಿಕೊಂಡರು.

ಬದರಿನಾಥನಲ್ಲಿರುವ ಹೋಟೆಲ್ ಅನಂತಮಠದಲ್ಲಿ ವಾಸ್ತವ್ಯ ಹೂಡಿರುವ ಜೋಶಿ ದಂಪತಿ, ಮಂಗಳವಾರ ಸೇನಾ ಪಡೆಯ ಸಿಬ್ಬಂದಿಯೊಬ್ಬರ ಫೋನ್ ಪಡೆದು ಕುಟುಂಬದ ಸದಸ್ಯರನ್ನು ಸಂಪರ್ಕಿಸಿ, ಉತ್ತರ ಭಾರತದ ಜಲಪ್ರಳಯದ ಚಿತ್ರಣವನ್ನು ನೀಡಿದರು.

ಅದೇ ಸಂದರ್ಭದಲ್ಲಿ ಪ್ರಜಾವಾಣಿಯೊಂದಿಗೂ ಮಾತನಾಡಿದ ಶ್ಯಾಮಸುಂದರ ಜೋಶಿ, 'ನಾವಿರುವುದು ಹೋಟೆಲಿನ ನಾಲ್ಕನೇ ಮಹಡಿಯಲ್ಲಿ. ಹೋಟೆಲ್ ಕಟ್ಟಡದ ಮೇಲಿನಿಂದ ನೋಡಿದರೆ ಇಡೀ ವಾತಾವರಣ ರುದ್ರಭಯಾನಕವಾಗಿ ಕಾಡುತ್ತದೆ. ರುದ್ರಪ್ರಯಾಗ ಹೆಸರು ಕೇಳಿದ್ದೆವು. ಇಲ್ಲಿ ರುದ್ರಪ್ರಳಯ ನೋಡುತ್ತಿದ್ದೇವೆ' ಎಂದರು.

`ಹೈದರಾಬಾದ್ನಿಂದ ಹೊರಟ ನಮ್ಮ ತಂಡದಲ್ಲಿ 70 ಜನರಿದ್ದಾರೆ. ಅವರಲ್ಲಿ ಒಬ್ಬರು ಹೊರಡುವುದಕ್ಕೆ ತಡ ಮಾಡಿದರು. ಅವರಿಗಾಗಿ ಕಾಯುತ್ತ ನಿಂತೆವು. ಅಷ್ಟರಲ್ಲಿಯೇ ಮಳೆ ಶುರುವಾಯ್ತು. ಅದು ಈಗಲೂ ಬಿಟ್ಟಿಲ್ಲ. ನಾವು ಹೊರಡಲೂ ಇಲ್ಲ. ಹೀಗಾಗಿ ಅಪಾಯದಿಂದ ಬಚಾವ್ ಆದೆವು. ಈಗ ಹೋಟೆಲ್ನಲ್ಲಿಯೇ ಇದ್ದೇವೆ. ಸೇನಾ ಸಿಬ್ಬಂದಿ ಆಹಾರ, ನೀರು ಪೂರೈಸಿದ್ದಾರೆ. ವೈದ್ಯರು ಬಂದಿದ್ದರು. ಎಲ್ಲರ ಆರೋಗ್ಯ ತಪಾಸಣೆ ಮಾಡಿ, ಔಷಧ ಕೊಟ್ಟಿದ್ದಾರೆ. ಎಲ್ಲ ರೀತಿಯಿಂದಲೂ ಅನುಕೂಲ ಮಾಡಿಕೊಟ್ಟಿದ್ದಾರೆ.

ಮಳೆ ಕಡಿಮೆಯಾಗುತ್ತಿದೆ. ವಾತಾವರಣ ತಿಳಿಯಾಗುತ್ತಿದೆ. ಮುಂದಿನ ಸೂಚನೆ ನೀಡುವವರೆಗೆ ಯಾರೂ ಹೊರಗೆ ಹೋಗಬಾರದು ಎಂದು ತಿಳಿಸಿದ್ದಾರೆ. ಇನ್ನೆರಡು ದಿನದಲ್ಲಿ ವಾತಾವರಣ ಮಾಮೂಲು ಸ್ಥಿತಿಗೆ ಬರುವ ನಿರೀಕ್ಷೆಯಲ್ಲಿದ್ದೇವೆ' ಎಂದು ತಿಳಿಸಿದರು.

ಯಾತ್ರಿಗಳು ಸುರಕ್ಷಿತ: ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಯಾತ್ರೆಗೆ ಹೋಗಿರುವ ವಿಜಾಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಹೆಬಸೂರ ಕುಟುಂಬದ ಎಂಟು ಜನ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು ಕುಟುಂಬದ ವಾಸುದೇವ ಹೆಬಸೂರ ತಿಳಿಸಿದ್ದಾರೆ.

ಇದಲ್ಲದೇ ಕೇದಾರನಾಥ ಯಾತ್ರೆಗೆ ಹೋಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 9 ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಈ ಕುರಿತು ಯಾತ್ರಾರ್ಥಿಗಳ ತಂಡದಲ್ಲಿರುವ ಭಟ್ಕಳ ತಾಲ್ಲೂಕು ಸಂಪನ್ಮೂಲ ಕೇಂದ್ರದ ಸಂಯೋಜಕ ವಿ.ಡಿ.ಮೊಗೇರ ಮಾಹಿತಿ ನೀಡಿದ್ದಾರೆ. ಕಟಿಯಾರ್ನಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಯಾತ್ರಿಗಳು ತೊಂದರೆಗೆ ಸಿಲುಕಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹೃಷಿಕೇಶದಲ್ಲೂ ಪ್ರವಾಹ ಬಂದಿದ್ದು ಭಟ್ಕಳದ ಗಣೇಶ ಸಿಂಗ್ ಸಹೋದರರು ಅಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದಾರೆ.ಹಿಮಾಲಯ ಪರ್ವತಕ್ಕೆ ತೆರಳಿರುವ ಧಾರವಾಡದ ಡಾ.ಸಂಜೀವ ಕುಲಕರ್ಣಿ ಅವರ ನೇತೃತ್ವದ 6 ಜನರ ತಂಡವು ಉತ್ತರಾಂಚಲದ ಲೋಹರ್ಗಂಜ್ ಬಳಿಯ ಗ್ರಾಮದಲ್ಲಿ ಸುರಕ್ಷಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.