ಸೋಮವಾರ, ಮೇ 23, 2022
30 °C

ಪ್ರತಿವರ್ಷ ಶಂಕರ ಮಹಾರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ :ವೈಶಾಖ ಶುಕ್ಲ ಪಂಚಮಿ ಶಂಕರರ ಜಯಂತಿಯ ಮಾರನೇ ದಿನವಾದ ವೈಶಾಖ ಶುಕ್ಲ ಷಷ್ಠಿಯಂದು ಪ್ರತೀ ವರ್ಷ ಶೃಂಗೇರಿಯಲ್ಲಿ ಆದಿ ಶಂಕರರ ಮಹಾರಥೋತ್ಸವ ನಡೆಯಲಿ ರುವುದಾಗಿ ಭಾರತಿ ತೀರ್ಥ ಸ್ವಾಮೀಜಿ ಘೋಷಿಸಿದರು.ಶ್ರೀಗಳು ಬುಧವಾರ  ಶಾರದಾ ಪೀಠದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ಆದಿ ಶಂಕರರ ಆಲಯದ ಪ್ರತಿಷ್ಠಾಪನಾ ಕುಂಭಾಭಿಷೇಕ ನೆರವೇರಿಸಿ ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು.ಆದಿ ಶಂಕರ ಜೀವನ ಹಾಗೂ ಸಂದೇ ಶವನ್ನು ವಿವರಿಸಿದ ಶ್ರೀಗಳು ಆದಿ ಶಂಕ ರರು, ಕೇವಲ 32 ವರ್ಷಗಳ ಅಲ್ಪಾ ವಧಿಯಲ್ಲಿ ಮಹತ್ ಸಾಧನೆಗೈದು ಜಗತ್ತಿಗೆ ಹೊಸ ಬೆಳಕನ್ನು ತೋರಿಸಿದರು ಎಂದರು.ಇದೇ ಸಂದರ್ಭದಲ್ಲಿ ಆದಿ ಶಂಕರರ ಆಲಯದ ನಿಮಾತೃ ಶಂಕರ ಸ್ಥಪತಿ ಗಳನ್ನು ಸನ್ಮಾನಿಸಿ ಶ್ರೀಮಠದ ಆಸ್ಥಾನ ವಿದ್ವಾನ್ ಗೌರವ ಪದವಿ ನೀಡಿದರು.ಉದ್ಯಮಿ ಆದಿಕೇಶವಲು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಕೆ. ದಿವಾಕರ್, ಶಾಸಕ ಡಿ.ಎನ್. ಜೀವರಾಜ್, ಸಂಸದ ವಿಶ್ವನಾಥ್, ಐಎಎಸ್ ಅಧಿಕಾರಿ ರಾಮಸ್ವಾಮಿ, ಶಿವಗಂಗಾ, ಎಡೆತೊರೆ ಹಳದೀಪುರ ಮಠ ಸ್ವಾಮೀಜಿ ಇದ್ದರು.ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್ ಪ್ರಾಸ್ತಾವಿಕ ನುಡಿಗಳನ್ನಾ ಡಿದರು.  ಸಾವಿರಾರು ಭಕ್ತರ ಸಮ್ಮುಖ ದಲ್ಲಿ ಮಹಾಕುಂಭಾಭಿಷೇಕ ನೆರವೇರಿಸಿ ದ ಶ್ರೀಗಳು ಶಂಕರರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುರುವಾರ ಶ್ರೀಮಠದ ಆವರಣದಲ್ಲಿ ಪ್ರತಿಷ್ಠಾಪನಾ ಕುಂಭಾಭಿಷೇಕದ ಅಂಗವಾಗಿ ನಡೆಯು ತ್ತಿರುವ ಅತಿರುದ್ರಮಹಾಯಾಗದ ಪುರ್ಣಾಹುತಿ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.