ಬುಧವಾರ, ಜೂನ್ 23, 2021
30 °C

ಪ್ರತ್ಯೇಕ ವಿ.ವಿ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿಶ್ವವಿದ್ಯಾಲಯಗಳು ಕೇವಲ ಕೆಲವೇ ವಿಷಯಗಳಿಗೆ ಪ್ರತ್ಯೇಕವಾಗುತ್ತಿರುವ ಕ್ರಮ ಸರಿಯಲ್ಲ~ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ವೇದ ಪ್ರಕಾಶ್ ಅಭಿಪ್ರಾಯಪಟ್ಟರು.ನಾಗರಬಾವಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ವಿಶ್ವವಿದ್ಯಾಲಯಗಳು ಎಲ್ಲ ಜ್ಞಾನಗಳನ್ನು ಒಳಗೊಳ್ಳಬೇಕು. ಎಲ್ಲ ವಿಷಯಗಳಲ್ಲಿಯೂ ಅಭ್ಯಾಸ ಹಾಗೂ ಸಂಶೋಧನೆಗೆ ಎಲ್ಲ ವಿಶ್ವವಿದ್ಯಾಲಯಗಳೂ ಮುಕ್ತವಾಗಿರಬೇಕು.ಆದರೆ ಇಂದು ವಿಷಯವಾರು ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿವೆ.  ಕೃಷಿ ವಿಶ್ವವಿದ್ಯಾಲಯಗಳು ಕೃಷಿ ವಿಷಯದಲ್ಲಿಯೇ ಅಧ್ಯಯನ ನಡೆಸುವುದರಿಂದ ವಿಜ್ಞಾನದ ಇತರೆ ವಿಷಯ ಅವಗಣನೆಯಾಗುತ್ತಿದೆ. ಒಂದೊಂದು ವಿಷಯಗಳ ಬಗ್ಗೆ ಪ್ರತ್ಯೇಕಗೊಳ್ಳುವುದರಿಂದ ವಿ.ವಿಗಳಲ್ಲಿ ಸಮಗ್ರ ಅಧ್ಯಯನ ಸಾಧ್ಯವಿಲ್ಲ~ ಎಂದರು.`ಇಂದಿಗೂ ಭಾರತವು ಶೈಕ್ಷಣಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಮುಖ್ಯ ಸ್ಥಾನದಲ್ಲಿದೆ. ರಾಷ್ಟ್ರದ ವಿಶ್ವವಿದ್ಯಾಲಯಗಳು ಜ್ಞಾನಮೂಲವಾದ, ಮೌಲ್ಯಯುತ ಶಿಕ್ಷಣವನ್ನು ಹಂಚಲು ಹೆಚ್ಚು ಗಮನ ನೀಡಬೇಕು. ಜ್ಞಾನದ ಸಮರ್ಪಕ ಪ್ರಸಾರ ಎಲ್ಲ ವಿಶ್ವವಿದ್ಯಾಲಯಗಳ ಧ್ಯೇಯವಾಗಬೇಕು~ ಎಂದರು.`12ನೇ ಪಂಚ ವಾರ್ಷಿಕ ಯೋಜನೆಯಲ್ಲಿ 1.84 ಲಕ್ಷ ಕೋಟಿ ರೂಪಾಯಿಗಳನ್ನು ಉನ್ನತ ಶಿಕ್ಷಣಕ್ಕಾಗಿ ಮೀಸಲಿಡಲು ವಿಶ್ವವಿದ್ಯಾಲಯ ಧನಸಹಾಯ ಆಯೋ ಸರ್ಕಾರಕ್ಕೆ ಮನವಿ ಮಾಡಿದೆ. ಪ್ರತಿ ವರ್ಷ 40 ಲಕ್ಷ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದ ವ್ಯಾಪ್ತಿಗೆ ತರುವ ಗುರಿ ಇದೆ~ ಎಂದರು.`ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತ್ಯೇಕಿಸಬೇಕು ಎಂಬ ಪ್ರಸ್ತಾವ ಕೇಳಿ ಬರುತ್ತಿದೆ. ವಿಶ್ವವಿದ್ಯಾಲಯವನ್ನು ಪ್ರತ್ಯೇಕಗೊಳಿಸುವುದು ಕಾಲೇಜುಗಳ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಲಿದೆ~ ಎಂದರು.

28 ರಾಜ್ಯಗಳ 350 ವಿದ್ಯಾಸಂಸ್ಥೆಗಳಿಗೆ  ನ್ಯಾಕ್ ಮಾನ್ಯತಾ ಪ್ರಮಾಣ ಪತ್ರ ವಿತರಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.