ಬೆಂಗಳೂರು (ಪಿಟಿಐ): ಮ್ಯಾಂಚೆಸ್ಟರ್ ಯುನೈಟೆಡ್ ಅಕಾಡೆಮಿಯ ಮಾಜಿ ಆಟಗಾರ ಅಶ್ಲೇಯ್ ವೆಸ್ಟ್ವುಡ್ ಅವರು ಮುಂಬರುವ ಐ-ಲೀಗ್ ಟೂರ್ನಿಗೆ ಜಿಂದಾಲ್ ಸ್ಪೋರ್ಟ್ಸ್ (ಜೆಎಸ್ಡಬ್ಲ್ಯು ಸ್ಪೋರ್ಟ್ಸ್) ಒಡೆತನದ ಫುಟ್ಬಾಲ್ ಕ್ಲಬ್ನ ತರಬೇತುದಾರ ಆಗಿ ನೇಮಕಗೊಂಡಿದ್ದಾರೆ.

ಈವರೆಗೂ ಸುಮಾರು 15 ಕ್ಲಬ್ಗಳ ಪರ ಆಡಿರುವ ಇಂಗ್ಲೆಂಡ್ನ 35 ವರ್ಷದ ಮಾಜಿ ಫುಟ್ಬಾಲ್ ಆಟಗಾರ, ಪೋರ್ಟ್ಸ್ ಮೌತ್ನಲ್ಲಿ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

`ಮುಂಬರುವ ಐ-ಲೀಗ್ ಋತುವಿಗೆ ಕ್ಲಬ್ನ ತರಬೇತುದಾರ ಆಗಿ ವೆಸ್ಟ್ವುಡ್ ಅವರನ್ನು ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ನೇಮಿಸಿದೆ' ಎಂದು ಪ್ರಕಟಣೆಯಲ್ಲಿ ಕ್ಲಬ್ ತಿಳಿಸಿದೆ. `ಜೆಎಸ್ಡಬ್ಲ್ಯು ಕಂಪೆನಿ ಹಾಗೂ ಅದರ ಮಾಲೀಕರು ದೂರದೃಷ್ಟಿ ಹೊಂದಿದ್ದಾರೆ. ಅದರ ಬಗ್ಗೆ ಸಂದೇಹಗಳಿಲ್ಲ. ಇಡೀ ಯೋಜನೆಗೆ ಸೂಕ್ತ ಮಹತ್ವಾಕಾಂಕ್ಷೆ ಇದ್ದು, ಅದರಲ್ಲಿ ನನ್ನ ಛಾಪು ಮೂಡಿಸಲು ಇಷ್ಟಪಡುತ್ತೇನೆ' ಎಂದು ವೆಸ್ಟ್ಪುಡ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.