ಭಾನುವಾರ, ಮೇ 16, 2021
24 °C

ಪ್ರಸಕ್ತ ಋತುವಿನಲ್ಲಿ ತಾಳೆ ಹಾಕಿ, ಲಾಭ ಗಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ತಾಲ್ಲೂಕಿನಲ್ಲಿ ತಾಳೆ ಬೆಳೆ ಬೆಳೆಯಲು ಪೂರಕ ವಾತಾವರಣವಿದ್ದು, ಜೂನ್-ಜುಲೈ ತಿಂಗಳು ಹೊಸದಾಗಿ ತಾಳೆ ಬೆಳೆ ಬೇಸಾಯ ಮಾಡಲು ಪ್ರಸಕ್ತ ಸಮಯವಾಗಿದೆ. ಈ ಬೆಳೆಯಿಂದ ರೈತರು ನಿರಂತರ ಲಾಭ ಪಡೆಯಬಹುದಾಗಿದ್ದು, ಇದರತ್ತ ತಮ್ಮ ಚಿತ್ತವನ್ನು ಹರಿಸಬೇಕು ಎಂದು ರುಚಿ ಸೋಯಾ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ಎ.ಎಸ್. ಪ್ರಸಾದ್‌ಬಾಬು ಸಲಹೆ ನೀಡಿದರು.ತೋಟಗಾರಿಕಾ ಇಲಾಖೆ, ತಾಳೆ ಅಭಿವೃದ್ಧಿ ಯೋಜನೆ ಹಾಗೂ ರುಚಿ ಸೋಯಾ ಇಂಡಸ್ಟ್ರೀಸ್ ಸಹಭಾಗಿತ್ವದಲ್ಲಿ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಯಿಂದ ಹೊರಟ ತಾಳೆ ಬೆಳೆಯ ಪ್ರಚಾರಾಂದೋಲನಕ್ಕೆ  ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.ಕಾವೇರಿ ಕಣಿವೆಯ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಹಾಸನ, ಮಡಿಕೇರಿ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ತಾಳೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಕಾರಣ, ಈ ಪ್ರದೇಶದಲ್ಲಿ ನೀರಾವರಿ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರಸ್ತುತ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗುತ್ತಿದೆ.ಚಾಮರಾಜನಗರ ಜಿಲ್ಲೆಯಲ್ಲಿ 225 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗುತ್ತಿದೆ. ಸರ್ಕಾರ ಟನ್‌ಗೆ 7 ಸಾವಿರ ರೂಪಾಯಿ ಬೆಂಬಲ ಬೆಲೆಯನ್ನೂ ಘೋಷಿಸಿದೆ. ಪ್ರತಿ ಎಕರೆಗೆ ಗಿಡ ನಾಟಿ ಮಾಡಿದ 6-7 ವರ್ಷಗಳ ನಂತರ ಸರಾಸರಿ 8 ರಿಂದ 10 ಟನ್ ತಾಳೆಹಣ್ಣು ಬೆಳೆಯಬಹುದು. ಕೆಲವರು 20 ಟನ್‌ಗೂ ಅಧಿಕ ಬೆಳೆದಿರುವ ಉದಾಹರಣೆಗಳೂ ಇವೆ ಎಂದು ಮಾಹಿತಿ ನೀಡಿದರು.ವಿಶ್ವದಲ್ಲಿ ಸೋಯಾ ಬಿಟ್ಟರೆ ತಾಳೆಎಣ್ಣೆಯೇ ಅಧಿಕವಾಗಿ ಮಾರಾಟವಾಗುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಲಿದೆ. ಇದಕ್ಕೆ ಬೇಕಾಗುವ ಔಷಧಿ, ಗೊಬ್ಬರ ಹಾಗೂ ಮಾರ್ಗದರ್ಶನವನ್ನು ಇಲಾಖೆಯ ಸಹಯೋಗದಲ್ಲಿ ರುಚಿ ಸೋಯಾ ಕಂಪೆನಿ ನೀಡಲಿದೆ. ಹೀಗಾಗಿ, ರೈತರು ತಾಳೆ ಬೆಳೆ ಬಗ್ಗೆ ಆಕರ್ಷಿತರಾಗಬೇಕು ಎಂದು ಸಲಹೆ ನೀಡಿದರು.ರುಚಿ ಸೋಯಾ ಇಂಡಸ್ಟ್ರೀಸ್‌ನ ಸಹಾಯಕ ಪಿ.ಸಿ. ಮೂರ್ತಿ, ಸಹಾಯಕ ತೋಟಗಾರಿಕಾ ಅಧಿಕಾರಿ ರಾಮಕೃಷ್ಣ ಹಾಗೂ ಹಲವು ರೈತರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.