ಸೋಮವಾರ, ಜೂನ್ 21, 2021
23 °C

ಪ್ರಸಕ್ತ ಸಾಲಿನ ಪರಿಸರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಗುರುತಿಸಲು 2011-12ನೇ ಸಾಲಿನ `ರಾಜ್ಯ ಪರಿಸರ ಪ್ರಶಸ್ತಿ~ ಗಾಗಿ ಅರ್ಜಿ ಹಾಗೂ ನಾಮ ನಿರ್ದೇಶನಗಳನ್ನು ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆ ಆಹ್ವಾನಿಸಿದೆ.ರಾಜ್ಯದ ಮೂರು ವಲಯಗಳ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.ಪ್ರಶಸ್ತಿಯನ್ನು ವ್ಯಕ್ತಿಗಳು ಹಾಗೂ ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆಗಳು, ಕಂಪನಿಗಳು ಮತ್ತು ಟ್ರಸ್ಟ್‌ಗಳಿಗೆ, ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ನೀಡಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳ ಪೈಕಿ ಮಲೆನಾಡು - ಕರಾವಳಿ ವಲಯ, ದಕ್ಷಿಣ ವಲಯ ಮತ್ತು ಉತ್ತರ ವಲಯಗಳಾಗಿ ವಿಗಂಡಿಸಲಾಗಿದ್ದು, ವಲಯ ಮಟ್ಟದಲ್ಲಿ ತಲಾ ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆಗೆ ಪ್ರಶಸ್ತಿ ನೀಡಲಾಗುವುದು.ಪರಿಸರ ಸಂರಕ್ಷಣೆ, ಜೈವಿಕ ವೈವಿಧ್ಯತೆ, ಜೈವಿಕ ವ್ಯವಸ್ಥೆ, ವಾಯು, ಜಲ, ಮಣ್ಣು, ನೈಸರ್ಗಿಕ ಸಸ್ಯರಾಶಿ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ವ್ಯವಸ್ಥಾಪನೆಯ ಕ್ಷೇತ್ರಗಳಲ್ಲಿನ ಸೇವೆಯನ್ನು ಪ್ರಶಸ್ತಿ ಅರ್ಹತೆಯಾಗಿ ಪರಿಗಣಿಸಲಾಗುದು.ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಅಥವಾ ಹೆಸರು ಸೂಚಿಸುವವರು ವ್ಯಕ್ತಿ ಹಾಗೂ ಸಂಸ್ಥೆಯ ಹೆಸರು, ಪತ್ರ ವಿಳಾಸ, ನಿರ್ವಹಿಸಲಾದ ಯೋಜನೆಗಳು, ಆರ್ಥಿಕ ಸಹಾಯದ ಮೂಲಗಳು, ಪಡೆದಿರುವ ಪ್ರಶಸ್ತಿ ಪುರಸ್ಕಾರಗಳ ದಾಖಲೆಗಳನ್ನು ಲಗತ್ತಿಸಿದ ವಿವರಗಳನ್ನು, ಸರ್ಕಾರದ ಕಾರ್ಯದರ್ಶಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ (ಜೀವಿಶಾಸ್ತ್ರ ಮತ್ತು ಪರಿಸರ) ಕೊಠಡಿ ಸಂಖ್ಯೆ  708, 7ನೇ ಮಹಡಿ, ಬಹು ಮಹಡಿಗಳ ಕಟ್ಟಡ, 4ನೇ ಹಂತ, ಬೆಂಗಳೂರು-560001, ಇವರಿಗೆ ಕಳುಹಿಸಲು ಕೋರಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.