ನವದೆಹಲಿ (ಪಿಟಿಐ): ಮತ್ತೆ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗುವ ಇಂಗಿತವನ್ನು ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ವ್ಯಕ್ತಪಡಿಸಿದ್ದಾರೆ.

‘ಅವಕಾಶ ಸಿಕ್ಕರೆ ಮತ್ತೆ ಕೋಚ್ ಆಗಿ ಕಾರ್ಯನಿರ್ವಹಿಸಲು ಇಷ್ಟಪಡುತ್ತೇನೆ. ಇದೊಂದು ದೊಡ್ಡ ಗೌರವ’ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಬೌಲಿಂಗ್ ಕೋಚ್ ಆಗಿದ್ದ ಅವರನ್ನು 2009ರಲ್ಲಿ ವಜಾ ಮಾಡಲಾಗಿತ್ತು.

ಮುಖ್ಯ ಕೋಚ್ ಡಂಕನ್ ಫ್ಲೆಚರ್ ಅವರನ್ನು ಕೆಳಗಿಳಿಸಿ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಿಸಬೇಕು ಎಂಬ ಸುನಿಲ್ ಗಾವಸ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಗಾವಸ್ಕರ್ ಕ್ರಿಕೆಟ್ನ ದಂತಕತೆ. ಅವರ ಅಭಿಪ್ರಾಯದ ಬಗ್ಗೆ ನಾನು ಮಾತನಾಡಲಾರೆ. ಆದರೆ ನಾನು ಬೌಲಿಂಗ್ ಕೋಚ್ ಆಗಿದ್ದಾಗ ದ್ರಾವಿಡ್ ನಾಯಕರಾಗಿದ್ದರು. ಕ್ರಿಕೆಟ್ ಬಗ್ಗೆ ಅವರಿಗೆ ಅದ್ಭುತ ಜ್ಞಾನವಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.