ಕೆಂಭಾವಿ: ಪ್ರಾದೇಶಿಕ ಪಕ್ಷಗಳನ್ನು ಕಿತ್ತಿ ಹಾಕಬೇಕು ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇದೀಗ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಶಾಸಕ ಬಂಡೆಪ್ಪ ಕಾಶೇಂಪುರ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷಗಳನ್ನು ಬೇರು ಸಮೇತ ಕಿತ್ತಬೇಕು ಎಂದವರು, ಇದೀಗ ಪ್ರಾದೇಶಿಕ ಪಕ್ಷವನ್ನು ಕಟ್ಟುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂರುವರೆ ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ಬಡವ, ದೀನ ದಲಿತರು, ತುಳಿತಕ್ಕೆ ಒಳಗಾದವರು, ರಾಜ್ಯದ ರೈತರಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಆಮೇಲೆ ಹೊಸ ಪಕ್ಷದ ಪ್ರಣಾಳಿಕೆ ಮಾಡಲಿ. ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಮಾಡುತ್ತಾ ನಾಲ್ಕು ವರ್ಷ ಕಾಲ ಕಳೆದಿದ್ದಾರೆ. ರಾಜ್ಯದ ಜನತೆ ಇದನ್ನು ನೋಡುತ್ತಿದ್ದಾರೆ ಎಂಬ ಭಯವಿಲ್ಲದೇ ಲೂಟಿ ನಡೆಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ಕೇವಲ ಹೇಳಿಕೆ ನೀಡಲಾಗುತ್ತಿದೆ. ಸರ್ಕಾರದ ಅವಧಿ ಮುಗಿಯುತ್ತ ಬಂದರೂ ಇನ್ನೂ ಯಾವ ರೈತರ ಸಾಲ ಮನ್ನಾ ಆಗಿಲ್ಲ ಎಂದು ಕಿಡಿ ಕಾರಿದರು.

ಸರ್ಕಾರ ದಿನಗೂಲಿಯಂತೆ ನಡೆಯುತ್ತಿದ್ದು, ಇಂದು ಎಷ್ಟು ಲಾಭವಾಗುತ್ತೋ ಅಷ್ಟು ಮಾಡಿಕೋಳ್ಳೋಣ. ಯಾವಾಗ ನಮ್ಮ ಸರ್ಕಾರ ಬೀಳುತ್ತದೆಯೋ ಗೊತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಕ್ಕಷ್ಟು ಬಾಚಿಕೊಳ್ಳುವ ತರಾತುರಿಯಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಲೇವಡಿ ಮಾಡಿದರು.

ಸ್ವಾರ್ಥ ಸಾಧನೆಗಾಗಿ ಕೆಲವರು ಪಕ್ಷವನ್ನು ಬಿಟ್ಟು, ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಸರ್ಕಾರದ ಕಚ್ಚಾಟ ನೋಡಿ ಜನ ಬೇಸತ್ತಿದ್ದಾರೆ. ಹಿಂದೆ ಕುಮಾರಣ್ಣನವರು 20 ತಿಂಗಳು ಕೊಟ್ಟ ಆಡಳಿತ ರಾಜ್ಯದ ಜನತೆ ಮರೆತಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶರಣಪ್ಪ ಸಲದಾಪುರ, ಶಹಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಇಬ್ರಾಹಿಂ ಶಿರವಾಳ, ಅಶೋಕ ಕರಿಗಾರ, ಮಲ್ಲಿನಾಥಗೌಡ ಪೊಲೀಸ್ಪಾಟೀಲ, ಶಿವು ಮೋಟಗಿ, ನಿಂಗಣ್ಣ ಹೂಗಾರ, ಸುಭಾಷ ಯಂಕಂಚಿ, ರಾಯಣ್ಣ ಕನ್ಯಾಕೋಳೂರ, ಮಹ್ಮದ್ಗೌಸ್, ಮಲ್ಲನಗೌಡ ಒಂದಗನೂರ, ಎಂ.ಎ. ಸಾಸನೂರ, ವಿರುಪಾಕ್ಷಿ ಕರಡಕಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.