ಮಂಗಳವಾರ, ಮೇ 24, 2022
27 °C
ಬೆನನ್‌ಸ್ಮಿಥ್ ಫೈನ್‌ಆರ್ಟ್ಸ್ ಕಾಲೇಜು ಸ್ಥಳಾಂತರ

ಪ್ರಾಧ್ಯಾಪಕರು, ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶ ದಲ್ಲಿರುವ ಬೆನನ್‌ಸ್ಮಿಥ್ ಫೈನ್ ಆರ್ಟ್ಸ್ ಕಾಲೇಜನ್ನು ಬೇರೆ ಕಡೆಗೆ ಸ್ಥಳಾಂತರ ಗೊಳಿಸುತ್ತಿರುವುದನ್ನು ವಿರೋಧಿಸಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.ಕಾಲೇಜಿನ ಪ್ರಾಚಾರ್ಯ ಅನಿಲ್ ಪ್ರಕಾಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಎದುರು ಧರಣಿ ನಡೆಸಿ, ಆಡಳಿತ ಮಂಡಳಿಯ ಕಿರುಕುಳದ ವಿರುದ್ಧ ಘೋಷಣೆಗಳನ್ನು ಕೂಗಿದರು.ಸಂಸ್ಥೆಯು ನಡೆಸುತ್ತಿರುವ ಪ್ರೌಢ ಶಾಲೆಯಲ್ಲಿ ಹೆಚ್ಚುವರಿ ತರಗತಿಗಳನ್ನು ತೆರೆಯುವ ಸಲುವಾಗಿ ಕಾಲೇಜನ್ನು ಆಡಳಿತ ಮಂಡಳಿಯು ಸ್ಥಳಾಂತರಿಸಲು ಮುಂದಾಗಿದೆ. ಇದರಿಂದ ಕಾಲೇಜಿಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.`ಫೈನ್ ಆರ್ಟ್ಸ್ ಕಾಲೇಜು ಈ ಸ್ಥಳದಲ್ಲಿ ಕಳೆದ 4 ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಡಳಿತ ಮಂಡಳಿಯು ಇದೀಗ ಕಾಲೇಜನ್ನು ಸ್ಥಳಾಂತರಿಸಲು ಮುಂದಾ ಗಿದ್ದು, ವಿದ್ಯಾರ್ಥಿಗಳು ಇದನ್ನು ವಿರೋಧಿಸುತ್ತಿದ್ದಾರೆ. ಆಡಳಿತ ಮಂಡಳಿಯು ಕ್ರಮೇಣ ಕಾಲೇಜಿನ ಸ್ಥಳವನ್ನು ಅತಿಕ್ರಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ.ಮಿಷನ್ ಕಂಪೌಂಡ್‌ನ ಬಾಲಕರ ಹಾಸ್ಟೇಲ್‌ನಲ್ಲಿ ಕಾಲೇಜಿಗೆ ಸ್ಥಳವನ್ನು ನಿಗದಿ ಪಡಿಸಲಾಗಿದೆ. ಆದರೆ, ಇಲ್ಲಿ ಅತಿ ಕಡಿಮೆ ಸ್ಥಳಾವಕಾಶ ಇದೆ. ಮೂಲ ಸೌಲಭ್ಯದ ಕೊರತೆ ಇದೆ. ಅಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲ. ಅಲ್ಲದೇ ಆ ಸ್ಥಳದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದೆ' ಎಂದು ಕಾಲೇಜಿನ ಉಪನ್ಯಾಸಕ ಅರೊನ್ ಅನಿಲ್ ಪ್ರಕಾಶ ತಿಳಿಸಿದರು.ಆಡಳಿತ ಮಂಡಳಿಯ ಸದಸ್ಯ ರೆವರೆಂಡ್ ಎಚ್.ಎಸ್. ಸೊಲೊಮನ್ ಹಾಗೂ ಪೊಲೀಸರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.ಕಾಲೇಜನ್ನು ಸ್ಥಳಾಂತರಗೊಳಿಸುವ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.ಸಮಾವೇಶ 7ರಂದು

ಕೊಪ್ಪಳ: ಚೇತನಾ ಅಸೋಸಿಯೇಟ್ಸ್‌ನ ಆಶ್ರಯದಲ್ಲಿ ಜು. 7ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ಲಿಂಗಾಯತ ವಧು- ವರರ ಮತ್ತು ಪಾಲಕರ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.ಮಹಾರಾಷ್ಟ್ರ ಮಂಡಳ, ಎನ್.ಎಂ.ಆರ್.ಸ್ಕ್ಯಾನ್ ಸೆಂಟರ್ ಹತ್ತಿರ, ಕೋರ್ಟ್ ಸರ್ಕಲ್, ಕ್ಲಬ್ ರಸ್ತೆ, ಹುಬ್ಬಳ್ಳಿ- ಈ ವಿಳಾಸದಲ್ಲಿ ಸಮಾವೇಶ ನಡೆಯುವುದು. ಸಮಾವೇಶ ಕುರಿತ ಹೆಚ್ಚಿನ ಮಾಹಿತಿಗೆ ಮೊ: 98451- 57329 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.