ಶುಕ್ರವಾರ, ಏಪ್ರಿಲ್ 23, 2021
23 °C

ಪ್ರಾಯೋಗಿಕ ಸಂಚಾರಕ್ಕೆ ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ದಶಕಗಳ ಕಾಲದ ಬೇಡಿಕೆಯಾಗಿದ್ದ ಕಡೂರು- ಚಿಕ್ಕಮಗಳೂರು ರೈಲು ಸೋಮವಾರ ನನಸಾಯಿತು. ಸಖರಾಯಪಟ್ಟಣದವರೆವಿಗೆ ಕಾಮಗಾರಿ ಸಂಪೂರ್ಣಗೊಂಡಿದ್ದು ಪ್ರಾಯೋಗಿಕವಾಗಿ ಎಂಜಿನ್ ಸಂಚಾರ ನಡೆಸಿತು. ಕಡೂರು ರೈಲು ನಿಲ್ದಾಣದಿಂದ ಚಿಕ್ಕಮಗಳೂರಿಗೆ ತೆರಳುವ ಕ್ರಾಸ್ ಬಳಿ ರೈಲ್ವೆ ಎಂಜಿನ್‌ಗೆ ಹೂವು, ತೋರಣ, ಬಾಳೆ ಕಂಬ, ಹೊಸಬಟ್ಟೆಯನ್ನು ತೊಡಿಸಿ ಅಲಂಕರಿಸಿದ ಎಂಜಿನ್ ಸೋಮವಾರ ಮಧ್ಯಾಹ್ನ 12.45ಕ್ಕೆ ಸರಿಯಾಗಿ ರೈಲ್ವೆ ಎಂಜಿನಿಯರ್ ಸಬಾಕರ್‌ಅವರ ಮಾರ್ಗದರ್ಶನದಲ್ಲಿ ಚಾಲಕರಾದ ಎಸ್.ಸಹಾ ಮತ್ತು ಭಲವಂತ ಕುಮಾರ್ ಎಂಜಿನ್ ಅನ್ನು ಹಳಿಗಳ ಮೇಲೆ ಓಡಿಸುತ್ತಿದ್ದಂತೆ ಸೇರಿದ್ದ ನೂರಾರು ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿತು. ದಶಕಗಳ ಕನಸು ನನಸಾಗುವ ಕಾಲ ಮೂಡಿ ಬಂದಿರುವುದಕ್ಕೆ ಸಂತಸಪಟ್ಟು ಸಿಹಿ ಹಂಚಿದರು. ಕಡೂರು ನಿಲ್ದಾಣದಿಂದ 16 ಕಿ.ಮೀ. ಮಾತ್ರ ಪ್ರಯಾಣಿಸಿದ ಎಂಜಿನ್ ಬಿಸಲೇಹಳ್ಳಿ, ಸಖರಾಯಪಟ್ಟಣ ನಿಲ್ದಾಣಗಳಲ್ಲಿ ನಿಲ್ಲಿಸುತ್ತಿದ್ದಂತೆ ಸೇರಿದ್ದ ಗ್ರಾಮೀಣ ಪ್ರದೇಶದ ಜನರು ಸಂತೋಷಪಟ್ಟರು. ಇನ್ನು ಒಂದು ತಿಂಗಳಲ್ಲಿ ಈ ಮಾರ್ಗವಾಗಿ ರೈಲು ಸಂಚರಿಸಲಿದೆ ಎಂದು ರೈಲ್ವೆ ಎಂಜಿನಿಯರ್ ಸಬಾಕರ್ ತಿಳಿಸಿದರು.  ಗುತ್ತಿಗೆದಾರ ವೆಂಕುರೆಡ್ಡಿ, ರೈಲ್ವೆ ನೌಕರರಾದ ಎ.ದಾಸ್, ಮಂಜುನಾಥ್ ಹಾಗೂ ನೂರಾರು ಗ್ರಾಮಸ್ಥರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.