ಉಡುಪಿ: ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ವಿವಾಹ ಆಗಲು ನಿರಾಕರಿಸಿದ ಆರೋಪದ ಮೇಲೆ ಶ್ರೀಕಾಂತ್ ಎಂಬಾತನ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಕಾಂತ್ ವಿರುದ್ಧ ಶೀರೂರು ಗ್ರಾಮದ ಯುವತಿ ದೂರು ನೀಡಿದ್ದಾರೆ. ಆರೋಪಿ 2008ರಲ್ಲಿ ಪರಿಚಿತನಾದ. ಶ್ರೀಕಾಂತ್ ಪ್ರೀತಿಸುವುದಾಗಿ ಹೇಳಿದ. ವಸತಿ ಗೃಹಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ.

ಆ ನಂತರ ವಿವಾಹ ಆಗುವುದಿಲ್ಲ ಎಂದು ಹೇಳಿದ. ಆ ನಂತರ ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಂಬಂಧಿಗಳಾದ ಶ್ರೀಧರ ಪೂಜಾರಿ, ಅಮ್ಮಣ್ಣಿ, ದೀಪಾ, ಸಹನಾ, ಕಿರಣ, ಸುರೇಂದ್ರ ಬೋಂಟ್ರ, ಕೌಶಿಕ್, ಲಲಿತಾ, ಶೇಖರ್, ಶುಭ, ಪೂಜಾ, ಇಂದಿರಾ, ಸುನಂದ, ಪದ್ದು, ಸಂದೀಪ, ಪ್ರಮೀಳಾ, ಹರೀಶ, ಶ್ವೇತಾ, ಸುಪ್ರಿತಾ, ಸಂಗೀತಾ, ಅರುಣ, ವಿನೋದಾ, ಪ್ರಕಾಶ, ಶಶಿಕಲಾ, ವಿದ್ಯಾ, ದಿವ್ಯಾ, ಅಜಿತ್, ಕರ್ಗಿ ಪೂಜಾರ್ತಿ, ಲೋಕು ಪೂಜಾರಿ, ವಿನೋದ, ಪವನ್, ಪವಿತ್ರ, ಅರುಣ್, ಪ್ರವೀಣ್, ಪ್ರಸನ್ನ, ಪ್ರಮೋದ್ ಮತ್ತು ನವೀನ್ ಅವರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ ಮದುವೆಯಾಗಲು ನಿರಾಕರಿಸಿದ ಅಲ್ಲದೆ ಬೇರೆಯವರನ್ನು ಮದುವೆಯಾದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.