ಎಡರು ತೊಡರುಗಳ ನಡುವೆಯೇ ಬಣ್ಣದ ಬದುಕಿನಲ್ಲಿ ನೆಲೆಕಾಣುವ ಹಂಬಲಕ್ಕೆ ಅಂಟಿಕೊಂಡವರು ಜನಾರ್ದನ್. ದಶಕಗಳ ಅನುಭವದ ಪಾಠ ಕಲಿಸಿದ್ದು ಅಪಾರ. ಸೋಲು ಗೆಲುವು ಎರಡರ ರುಚಿ ಕಂಡ ಅವರು ಮತ್ತೆ ಅದೃಷ್ಟಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಗೆದ್ದು ಚಿತ್ರರಂಗದಲ್ಲಿನ ತಮ್ಮ ನಡಿಗೆಯನ್ನು ಗಟ್ಟಿಗೊಳಿಸಿಕೊಳ್ಳುವ ತುಡಿತ ಅವರದು.

`ಅಂಜದಿರು~ ಮತ್ತು `ಬಾಯ್ಫ್ರೆಂಡ್~ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಜನಾರ್ದನ್ ಈಗ ನಾಯಕನಾಗಿ ಬಣ್ಣಹಚ್ಚಲು ಮುಂದಾಗಿದ್ದಾರೆ. ಅಭಿನಯ ಅವರಿಗೆ ಹೊಸತಲ್ಲ. ಹಲವು ನಾಟಕಗಳಲ್ಲಿ ನಟಿಸಿದ್ದ ಜನಾರ್ದನ್ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದು `ಸ್ವಯಂಕೃಷಿ~ ಚಿತ್ರದಲ್ಲಿ. ಚಿತ್ರರಂಗದ ಈ ನಂಟಿನಲ್ಲಿ ಅವರಿಗೆ ಗೆಲುವಿನ ಸವಿ ಸಿಕ್ಕಿಲ್ಲ. ಹೀಗಾಗಿ ತಮಗಾಗಿಯೇ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದಾರೆ. ಚಿತ್ರಕಥೆ ಹೆಣೆದು, ಸಂಭಾಷಣೆ ರಚಿಸಿ ಸ್ವತಃ ಆ್ಯಕ್ಷನ್ ಕಟ್ ಹೇಳುತ್ತಿರುವ ಅವರು ನಾಯಕರಾಗಿ ಯಶಸ್ಸು ಕಾಣುವ ವಿಶ್ವಾಸದಲ್ಲಿದ್ದಾರೆ. ಜನಾರ್ದನ್ ಎಂಬುದು ಹಳೆಯ ಹೆಸರಂತೆ ಕಾಣುತ್ತದೆ ಎಂಬ ಕಾರಣಕ್ಕೆ ಅವರು `ಸ್ವಯಂಕೃಷಿ~ ಬಳಿಕ ಅಮೋಘ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಅಂದಹಾಗೆ ಅವರ ಚಿತ್ರದ ಹೆಸರು `ಪೋರ~. ಇತ್ತೀಚಿನ ಸೂಪರ್ ಹಿಟ್ ಗೀತೆಯ `ಪ್ಯಾರ್ಗೆ ಆಗ್ಬುಟ್ಟೈತೆ~ ಎಂಬ ಸಾಲು ಚಿತ್ರದ ಅಡಿಶೀರ್ಷಿಕೆ. ವಿಶೇಷವೆಂದರೆ, `ಗೋವಿಂದಾಯ ನಮಃ~ ಚಿತ್ರದಲ್ಲಿ ಆ ಹಾಡಿಗೆ ಹೆಜ್ಜೆ ಹಾಕಿರುವ ನಟಿ ಪರೂಲ್ `ಪೋರ~ನಿಗೆ ಜೊತೆಯಾಗುವ ಪೋರಿ. ಇದು ಸ್ಟಿಂಗ್ ಆಪರೇಷನ್ನಂತಹ ಸಾಹಸಮಯ ವರದಿಗಳನ್ನು ಮಾಡುವ ಪತ್ರಕರ್ತನ ಕಥೆಯಂತೆ. ಕಥಾ ನಾಯಕಿ ರಾಜಕಾರಣಿಯ ಮಗಳು. ತಂದೆಯ ನೆರಳಿನಿಂದಾಚೆ ತನ್ನದೇ ಐಡೆಂಟಿಟಿ ಹುಡುಕಿಕೊಳ್ಳುವ ಸ್ವಾಭಿಮಾನಿ. ಇವರಿಬ್ಬರ ಪ್ರೇಮಪಯಣವೇ ಚಿತ್ರದ ತಿರುಳು.

ಜನಾರ್ದನ್ ಮೂಲತಃ ದೇವನಹಳ್ಳಿ ತಾಲ್ಲೂಕಿನ ದೇವನಾಯ್ಕನಹಳ್ಳಿಯವರು. ಕಾಲೇಜು ಮೆಟ್ಟಿಲು ಹತ್ತುವಾಗಲೇ ಅಂಟಿಕೊಂಡ ಸಿನಿಮಾ ಪ್ರೀತಿ ಬೆಂಗಳೂರಿಗೆ ಕರೆತಂದಿತು.

ನಟನಾಗಬೇಕೆಂಬ ಆಸೆ ಮನದಲ್ಲಿತ್ತು. ಮೈಸೂರು ರಮಾನಂದ್ ಅವರ ಬೀದಿ ನಾಟಕದ ತಂಡದಲ್ಲಿ, ಪ್ರಯೋಗರಂಗ ತಂಡದಲ್ಲಿ ಸಕ್ರಿಯರಾಗಿದ್ದರು. ಕಿರಿಯ ಕಲಾವಿದರಾಗಿ ಕೆಲವು ಚಿತ್ರಗಳಲ್ಲಿ ಅವಕಾಶ ಸಿಕ್ಕಿತು. ನಟನೆಗೆ ಮೊದಲು ನಿರ್ದೇಶನಕ್ಕಿಳಿ ಎಂದು ಸಲಹೆ ನೀಡಿದ ರವಿಕಿರಣ್ ಅವರ ಸಹೋದರ ಭಾಸ್ಕರ್ ಸಹಾಯಕ ನಿರ್ದೇಶಕರಾಗಿ ಸೇರಿಸಿದರು.

ರವಿಕಿರಣ್ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದ ಜನಾರ್ದನ್ ಅವರ ಮನೆ ಮಗನಂತೆ ಬೆಳೆದರು. ಸುನೀಲ್ ಪುರಾಣಿಕ್ ಜೊತೆಗೆ ಎರಡು ವರ್ಷ ಕೆಲಸ ಮಾಡುವಾಗ ನಿರ್ದೇಶಕನಾಗುವ ಕನಸಿಗೆ ವೇದಿಕೆ ಸಿಕ್ಕಿತು. ದೂರದರ್ಶನಕ್ಕಾಗಿ `ಮುಗಿಲ ಮಲ್ಲಿಗೆ~ ಧಾರಾವಾಹಿಯನ್ನು ಸ್ವತಂತ್ರವಾಗಿ ನಿರ್ದೇಶಿಸಿದರು. ಬಳಿಕ `ನಾನು ಓದಬೇಕು~, `ಸಂಜೀವಿನಿ~ ಮುಂತಾದ ಸುಮಾರು ಆರು ಧಾರಾವಾಹಿಗಳನ್ನು ನಿರ್ದೇಶಿಸಿದರು.

ಸಿನಿಮಾ ಹಂಬಲ ಹೆಮ್ಮರವಾಗಿ ಬೆಳೆದಿತ್ತು. ಹೀಗಾಗಿ ಕಿರುತೆರೆಯಿಂದ ಮೆಲ್ಲನೆ ಬೆಳ್ಳಿತೆರೆಯತ್ತ ಕಣ್ಣು ಹಾಯಿಸತೊಡಗಿದರು. `ರಕ್ತಕಣ್ಣೀರು~ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. `ಅಂಜದಿರು~, `ಬಾಯ್ಫ್ರೆಂಡ್~ ಚಿತ್ರ ನಿರ್ದೇಶಿಸಿದರು. ಯಶಸ್ಸು ಬಾಗಿಲು ತಟ್ಟಲಿಲ್ಲ.

`ಪೋರ~ ಹಿಂದಿನ ಎಲ್ಲಾ ಸೋಲುಗಳನ್ನು ಮರೆಮಾಚಿಸುತ್ತದೆ ಎಂಬ ನಂಬಿಕೆ ಅವರದು. ಚಿತ್ರದಲ್ಲಿ ಆರು ಹಾಡು, ಐದು ಹೊಡೆದಾಟದ ಸನ್ನಿವೇಶಗಳಿವೆ. ಇಂದ್ರ ಹಾಡುಗಳಿಗೆ ಸಂಗೀತ ಹೊಸೆಯುತ್ತಿದ್ದಾರೆ. ಶೈಲೇಂದ್ರ ಬೆಲ್ದಾಳ್ ಮತ್ತು ದೇವರಾಜ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಂಗಾಯಣ ರಘು, ಅನಂತ್ನಾಗ್, ರವಿಕಾಳೆ, ತಬಲಾನಾಣಿ, ರಾಜು ತಾಳೀಕೋಟೆ, ಶೃತಿ ಮುಂತಾದ ಕಲಾವಿದರ ದಂಡು ಇದೆ. ನಿರ್ದೇಶಕನಾಗಿ ಮತ್ತು ನಟನಾಗಿ ಹೆಸರು ಮಾಡುವ ಭರವಸೆ ಇದೆ ಎನ್ನುತ್ತಾರೆ ಜನಾರ್ದನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.