ಬಳ್ಳಾರಿ: ಪ್ರೇಮಿಸಿ, ಅಂತರ್ಜಾತಿ ವಿವಾಹವಾದರೆ ಸಮಾಜ ಅದನ್ನು ಅನೈತಿಕ ಸಂಬಂಧ ಎಂಬಂತೆ ನೋಡುತ್ತಿರುವುದು ಬೇಸರದ ಸಂಗತಿ ಎಂದು ಸಾಹಿತಿ ಡಾ. ವಿನಯಾ ಒಕ್ಕುಂದ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ `ಸಾಹಿತಿ ದಂಪತಿಯೊಂದಿಗೆ ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`20 ವರ್ಷಗಳ ಹಿಂದೆ ಪ್ರೇಮ ವಿವಾಹವಾದ ನಾವು ಅನೈತಿಕ ಸಂಬಂಧ ಹೊಂದಿದವರು ಎಂಬ ರೀತಿ ನೋಡಲಾಗುತ್ತಿತ್ತು, ಅಂಥದ್ದೇ ಪರಿಸ್ಥಿತಿ ಈಗಲೂ ಮುಂದುವರಿದಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಜಾತಿ ಲೆಕ್ಕಾಚಾರ, ಅಹಂಕಾರದಿಂದಾಗಿ ಮರ್ಯಾದೆ ಹತ್ಯೆಗಳು ಹೆಚ್ಚಾಗುತ್ತಿವೆ. ಜಾತಿ ಬೇರೆ ಎಂಬ ಕಾರಣಕ್ಕೆ ಬೆಳೆಸಿದ ಮಕ್ಕಳನ್ನೇ ಕೊಲ್ಲುವ ಪರಿಸ್ಥಿತಿ ಇದೆ. ಪ್ರೀತಿಯ ಮೇಲೆ ಹಲ್ಲೆ ನಡೆಯುತ್ತಿರುವುದಕ್ಕೆ ಮೂಲಭೂತವಾದ ಕಾರಣ ಎಂದು ತಿಳಿಸಿದರು.

`ಜಾಗತೀಕರಣದಿಂದಾಗಿ ನಮ್ಮತನ, ವಿಶ್ವಾಸ ಕಾಣೆಯಾಗುತ್ತಿದೆ. ಪ್ರೀತಿ ಮಾರಾಟದ ವಸ್ತುವಾಗಿದ್ದು, ಸಿನಿಮಾ, ಧಾರವಾಹಿಗಳಲ್ಲಿ ಪ್ರೀತಿಯನ್ನು ಹಣ ಗಳಿಕೆಗಾಗಿ ಬಳಸಿಕೊಳ್ಳಲಾಗುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.

ಅಂತರ್ಜಾತಿ ವಿವಾಹವಾದಾಗ ಎದುರಿಸಿದ ಪರಿಸ್ಥಿತಿ ವಿವರಿಸಿದ ಸಾಹಿತಿ ಡಾ. ಎಂ.ಡಿ. ಒಕ್ಕುಂದ, ಜಾಗತೀಕರಣದ ಹೊಡೆತದಲ್ಲಿ ಸಂಬಂಧಗಳು ಕಳೆದುಹೋಗುತ್ತಿವೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಕೋ.ವೆಂ. ರಾಮಕೃಷ್ಣಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಬಾದಾಮಿ ಶಿವಲಿಂಗ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಯರಿಸ್ವಾಮಿ, ಕಲ್ಲಕಂಬ ಪಂಪಾಪತಿ ಉಪಸ್ಥಿತರಿದ್ದರು.
ಸಿದ್ದರಾಮ ಕಲ್ಮಠ ಸ್ವಾಗತಿಸಿದರು. ರೇವಣ್ಣ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯಶ್ರೀ ಹೂಗಾರ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.