ಶನಿವಾರ, ಮಾರ್ಚ್ 6, 2021
19 °C

ಫಲಪುಷ್ಪ ಪ್ರದರ್ಶನಕ್ಕೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಲಪುಷ್ಪ ಪ್ರದರ್ಶನಕ್ಕೆ ಮುಗಿಬಿದ್ದ ಜನ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿ ಸಿರುವ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಜನರು ಮುಗಿಬಿದ್ದರು.ಭಾನುವಾರ 85 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ₹ 46 ಲಕ್ಷ ಸಂಗ್ರಹವಾಗಿದೆ. ಕಳೆದ ಎಂಟು ದಿನಗಳಿಗೆ ಹೋಲಿ ಸಿದರೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿ ದ್ದಾರೆ. ಆಗಸ್ಟ್‌ 7ರಂದು 40 ಸಾವಿರ, 13ರಂದು 49 ಸಾವಿರ ಮಂದಿ ಭೇಟಿ ನೀಡಿದ್ದರು. ಬೆಳಿಗ್ಗೆ 12ರವರೆಗೆ ವಿರಳವಾಗಿದ್ದ ಜನರು ಬಳಿಕ ಹೆಚ್ಚಾದರು. ಸಂಜೆ 4 ಗಂಟೆಯವರೆಗೆ ಜನದಟ್ಟಣೆ ಕಂಡು ಬಂದಿತು. ಗಾಜಿನ ಮನೆಯಲ್ಲಿ ನಿರ್ಮಿ ಸಿದ್ದ ‘ಸಂಸತ್‌ ಭವನ’ವನ್ನು ನೋಡಲು ಜನರು ಮುಗಿಬಿದ್ದರು. ಇದ ರಿಂದ ನೂಕುನುಗ್ಗಲು ಉಂಟಾಗಿತ್ತು.ಸಂಸತ್‌ ಭವನದ ಸೌಂದರ್ಯಕ್ಕೆ ಮನಸೋತ ಜನರು ಅದರ ಜತೆ ನಿಂತು ಫೋಟೋ ತೆಗೆಸಿಕೊಳ್ಳಲು ದುಂಬಾಲು ಬಿದ್ದರು. ಯುವಕ, ಯುವತಿಯರು, ಹಿರಿಯರೆನ್ನದೆ ಎಲ್ಲರೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.‘ಸಂಜೆ 4ರ ಬಳಿಕ ಎರಡು ಬಾರಿ ಮಳೆ ಬಂದಿದ್ದರಿಂದ ಜನರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಯಿತು. ಆದರೂ, ಕಳೆದ ಎಂಟು ದಿನಗಳಿಗೆ ಹೋಲಿಸಿದರೆ ಭಾನುವಾರ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರ ಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಲಾಲ್‌ಬಾಗ್‌ ಆವರಣದಲ್ಲಿ ನಿರ್ಮಿಸಿ ರುವ ಮಳಿಗೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ತಿಂಡಿ–ತಿನಿಸುಗಳ ಮಳಿಗೆ ಗಳ ಮುಂದೆ ಜನರು ಜಮಾಯಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.