ಬೆಂಗಳೂರು: ಫಲಾನುಭವಿಗಳು ಯಾರೆಂಬುದೇ ತಿಳಿಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ 18.39 ಲಕ್ಷ ರೂಪಾಯಿ ಮಂಜೂರು ಮಾಡಿರುವ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ ಹಕ್ಕು ಕಾಯ್ದೆಯಡಿ ಈ ಬಗ್ಗೆ ಕೇಳಲಾದ ವಿವರಗಳಲ್ಲಿ ಬಿಬಿಎಂಪಿ ಪೂರ್ವ ಮತ್ತು ದಕ್ಷಿಣ ವಲಯದಲ್ಲಿ ಈ ಹಣವನ್ನು ವ್ಯಯ ಮಾಡಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದರಲ್ಲಿ ಕೆಲ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗವು ಎರಡೂ ವಲಯಗಳ ಕಲ್ಯಾಣಾಧಿಕಾರಿಗಳ ವಿರುದ್ಧ ರೂ 25,000 ದಂಡ ವಿಧಿಸಿದ್ದಾರೆ. ಅಲ್ಲದೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೂ ನಿರ್ದೇಶನ ನೀಡಲಾಗಿದೆ.

ಬಿಬಿಎಂಪಿಯು ಸಮಾಜ ಕಲ್ಯಾಣ ಯೋಜನೆಗಳಿಗಾಗಿ 2009-10ನೇ ಸಾಲಿನಲ್ಲಿ ರೂ 4.23 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಅದರಲ್ಲಿ ರೂ 65.34 ಲಕ್ಷ ಹಣವನ್ನು ಎಲ್ಲಾ ವಲಯಗಳಲ್ಲಿ ವಿನಿಯೋಗಿಸಲಾಗಿತ್ತು. ಅದರಂತೆ ಪೂರ್ವ ಮತ್ತು ದಕ್ಷಿಣ ವಲಯಗಳಲ್ಲಿ ಕ್ರಮವಾಗಿ ರೂ 1.8 ಲಕ್ಷ ಮತ್ತು ರೂ 16.59 ಲಕ್ಷ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗಿತ್ತು. ವರ್ಷದ ಹಿಂದೆ ಮಾಹಿತಿ ಹಕ್ಕು ಕಾರ್ಯಕರ್ತ ಕಾಳಿದಾಸ ರೆಡ್ಡಿ ಎಂಬುವವರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆಯು ಮೀಸಲಿಟ್ಟ ಹಣ ಹಾಗೂ ಫಲಾನುಭವಿ ವಿದ್ಯಾರ್ಥಿಗಳ ಹೆಸರುಗಳ ಮಾಹಿತಿ ನೀಡಬೇಕು ಎಂದು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು.

ಉಳಿದ ಆರು ವಲಯಗಳು ಈ ಬಗ್ಗೆ ವಿವರ ನೀಡಿದರೂ ಸಹ ಪೂರ್ವ ಮತ್ತು ದಕ್ಷಿಣ ವಲಯಗಳು ವಿವರ ನೀಡಲೇ ಇಲ್ಲ! ಆದರೆ ಸಾಕಷ್ಟು ಒತ್ತಾಯದ ಬಳಿಕ ದಕ್ಷಿಣ ವಲಯ ಕಲ್ಯಾಣಾಧಿಕಾರಿ ದಯಾನಂದ ಅವರು ವಿದ್ಯಾರ್ಥಿಗಳ ಸಂಖ್ಯೆಯನ್ನು ಮಾತ್ರ ನೀಡಿದರು. ಪೂರ್ವ ವಲಯ ಕಲ್ಯಾಣಾಧಿಕಾರಿ ಸೋಹೈಲ್ ಅಹ್ಮದ್ ಅವರು ರೆಡ್ಡಿ ಅವರ ಅರ್ಜಿಗೆ ಪ್ರತಿಕ್ರಿಯೆ ನೀಡಿ 2009-10ನೇ ಸಾಲಿನಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿಲ್ಲ ಎಂದು ಉತ್ತರಿಸಿದರು. ಆದರೆ ಅರ್ಜಿದಾರ ರೆಡ್ಡಿ ಅವರು ಈ ವಲಯದಲ್ಲಿ ಎಂಟು ಮಂದಿ ಫಲಾನುಭವಿಗಳಿಗೆ ರೂ 1.8 ಲಕ್ಷ ಅನುದಾನವನ್ನು ವಿತರಿಸಲಾಗಿದೆ ಎಂಬ ದಾಖಲೆಗಳನ್ನು ಹೊಂದಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರ್ಜಿದಾರರು, ಈ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ಈ ಕುರಿತು ಆಯೋಗದ ಆಯುಕ್ತ ಎಚ್.ಎನ್.ಕೃಷ್ಣ ಅವರಿಗೆ ವಿವರ ನೀಡಿದ ಅಧಿಕಾರಿ ಸೋಹೈಲ್ ಅಹ್ಮದ್ ಅವರು ತಾವು ಕಳೆದ ಸಾಲಿನಲ್ಲಿ ಯಾರಿಗೂ ಶಿಷ್ಯವೇತನ ನೀಡಿಲ್ಲ ಎಂದೇ ಉತ್ತರಿಸಿದರು. ರೆಡ್ಡಿ ಅವರು ತಮ್ಮಲ್ಲಿದ್ದ ದಾಖಲೆಗಳನ್ನು (ರೂ 1.8 ಲಕ್ಷ ಖರ್ಚು ಮಾಡಿದ ಕುರಿತು) ಕೃಷ್ಣ ಅವರಿಗೆ ಸಲ್ಲಿಸಿದರು. ಇಬ್ಬರೂ ಅಧಿಕಾರಿಗಳ ವಾದ ಆಲಿಸಿದ ನಂತರ ಇಬ್ಬರಿಗೂ ತಲಾ ರೂ 25,000 ದಂಡ ವಿಧಿಸಿದ್ದಲ್ಲದೇ ಅಪೂರ್ಣ ಮತ್ತು ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ.

‘ಸತ್ಯಾನಂದ’ ಚಿತ್ರಕ್ಕೆ ಕೋರ್ಟ್ ತಡೆ
ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಜೀವನಚರಿತ್ರೆಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ‘ಸತ್ಯಾನಂದ’ ಚಿತ್ರಕ್ಕೆ ನಗರದ 15ನೇ ಸಿವಿಲ್ ನ್ಯಾಯಾಲಯ ತಡೆ ನೀಡಿ ಮಂಗಳವಾರ ಆದೇಶಿಸಿದೆ. ಸ್ವಾಮಿಯ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಯಾವುದೇ ಚಿತ್ರವನ್ನು ನಿರ್ಮಾಣ ಮಾಡದಂತೆ ನಿರ್ಮಾಪಕ ಮದನ್ ಪಟೇಲ್ ಅವರಿಗೆ ಕೋರ್ಟ್ ನಿರ್ದೇಶಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಪಟೇಲ್ ಹಾಗೂ ಚಿತ್ರದ ನಾಯಕ (ಸತ್ಯಾನಂದ ಪಾತ್ರಧಾರಿ) ರವಿ ಚೇತನ್ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಲಾಗಿದೆ. ಈ ಚಿತ್ರವು ನಿತ್ಯಾನಂದ ಅವರ ಜೀವನ ಆಧಾರಿತವಾಗಿದೆ ಎಂಬ ಬಗ್ಗೆ ಪಟೇಲ್ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆ ಆಧಾರದ ಮೇಲೆ, ಚಿತ್ರ ನಿರ್ಮಾಣದ ರದ್ದತಿಗೆ ಕೋರಿ ನಿತ್ಯಾನಂದ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಡೆಸಿತು.

ಈ ಚಿತ್ರದಿಂದ ತಮ್ಮ ಘನತೆಗೆ ಕುಂದು ತರುವ, ತಮ್ಮನ್ನು ತೇಜೋವಧೆ ಮಾಡುವಂತಹ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುವ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣವನ್ನು ರದ್ದು ಮಾಡುವಂತೆ ಆದೇಶಿಸಬೇಕು ಎಂದು ಸ್ವಾಮಿ ಕೋರಿದ್ದಾರೆ. ವಿಚಾರಣೆಯನ್ನು ಏ.23ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.