ಭಾನುವಾರ, ಮೇ 16, 2021
22 °C

ಫುಟ್‌ಬಾಲ್: ಅಗ್ರಸ್ಥಾನದಲ್ಲಿ ತಿಲಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಿಲಕ್ ಮೆಮೋರಿಯಲ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ 5-3 ಗೋಲುಗಳಿಂದ ಸದರ್ನ್ ಬ್ಲೂಸ್ ಎದುರು ಗೆಲುವು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಬಿನಯ್ 23ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರದ ಗೋಲುಗಳನ್ನು ಅಭಿಲಾಷ್ (29, 45ನೇ ನಿಮಿಷ), ಅಖಿಲೇಶ್ (58 ಹಾಗೂ 65ನೇ ನಿಮಿಷ) ಗೋಲು ಗಳಿಸಿ ತಿಲಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ದಿನದ ಇನ್ನೊಂದು ಪಂದ್ಯದಲ್ಲಿ ಸರ್ಕಾರಿ ಮುದ್ರಣಾಲಯ 3-0 ಗೋಲುಗಳಿಂದ ರಾಯಲ್ಸ್ ಎದುರು ಗೆಲುವು ಪಡೆಯಿತು. ಮುದ್ರಣಾಲಯದ ತಂಡದ ನರೇಂದ್ರ 31ನೇ ನಿಮಿಷ, ರಾಜು 37 ಮತ್ತು 57ನೇ ಗಳಿಸಿ ಗಮನ ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.