ಗೋವಾ (ಪಿಟಿಐ): ತವರು ನೆಲದ ಪ್ರೇಕ್ಷಕರ ಬೆಂಬಲದೊಂದಿಗೆ ಆಡಲಿಳಿದ ಸಲಗಾಂವಕರ್ಗೆ ತಂಡದವರು ಐ-ಲೀಗ್ ಫುಟ್ಬಾಲ್ ಪಂದ್ಯದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್ಎಎಲ್) ಸ್ಪೋಟ್ಸ್ ಕ್ಲಬ್ ತಂಡದ ಎದುರು ಭರ್ಜರಿ ಗೆಲುವು ಸಾಧಿಸಿದರು.ಮಡಗಾಂವ್ನ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸಲಗಾಂವಕರ್ 3-0 ಗೋಲುಗಳಿಂದ ಎಚ್ಎಎಲ್ ಸ್ಪೋಟ್ಸ್ ಕ್ಲಬ್ ತಂಡವನ್ನು ಮಣಿಸಿತು.

ಸತತ ಗೆಲುವಿನಿಂದ ಬೀಗುತ್ತಿರುವ ಸಲಗಾಂವಕರ್ ತಂಡದ ಆಟಗಾರರಿಗೆ ಈ ಗೆಲುವು ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಪಂದ್ಯದ ಮೊದಲಾರ್ಧದಲ್ಲಿಯೇ ಉಭಯ ತಂಡಗಳಿಂದ ಯಾವುದೇ ಗೋಲು ಬರಲಿಲ್ಲ. ದ್ವಿತೀಯಾರ್ಧದಲ್ಲಿ ಪರಿಣಾಮಕಾರಿ ಆಟವಾಡಿದ ಸಲಗಾಂವಕರ್ ತಂಡದ ಯೂಸಿಫ್ ಯಾಕೊಬಾ 60ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಇದರಿಂದ ಒತ್ತಡಕ್ಕೆ ಒಳಗಾದ ಎಚ್ಎಎಲ್ ತಂಡದವರು ಹಲವು ಬಾರಿ ಗೋಲು ಗಳಿಸಲು ನಡೆಸಿದ ಯತ್ನ ವಿಫಲವಾಯಿತು.

ಗೋಲಿನ ದಾಳಿಯನ್ನು ಮುಂದುವರಿಸಿದ ಸಲಗಾಂವಕರ್ನ ಗಿಲ್ಬೇರ್ಟ್ ಒಲ್ವಿಯರಾ (70ನೇ ನಿಮಿಷ) ಹಾಗೂ ಈಕೇನ್. ಎಂ. ಇಕಾನ್ವಾ (90ನೇ ನಿಮಿಷ) ತಲಾ ಒಂದು ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಮಾತ್ರ ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.