ಬುಧವಾರ, ಮೇ 25, 2022
29 °C

ಫುಟ್‌ಬಾಲ್ ಟೂರ್ನಿ: ಮುಂಡಗೋಡು ಸೆಂಟ್ರಲ್ ಸ್ಕೂಲ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಮೀಪದ ತೊಳಹುಣಸೆಯ ಶಿವಗಂಗೋತ್ರಿಯ ಎಸ್‌ಪಿಎಸ್‌ಎಸ್‌ಇಎಂಆರ್ ಸ್ಕೂಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿಬಿಎಸ್‌ಇ ಕ್ಲಸ್ಟರ್ 7ರ ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.ಅತ್ಯಂತ ರೋಚಕ ಕಾದಾಟ ಕಂಡ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡ ವಿಜಾಪುರದ ಸೈನಿಕ್ ಸ್ಕೂಲ್ ತಂಡವನ್ನು 3-0 ಅಂತರದಲ್ಲಿ ಸೋಲಿಸಿತು.ಸೆಮಿಫೈನಲ್ ಪಂದ್ಯದಲ್ಲಿ ವಿಜಾಪುರದ ಸೈನಿಕ್ ಸ್ಕೂಲ್ ತಂಡ ಬೆಂಗಳೂರಿನ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್ ತಂಡವನ್ನು 3-1 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೆಶಿಸಿತು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಂಡಗೋಡಿನ ಸೆಂಟ್ರಲ್ ಸ್ಕೂಲ್ ತಂಡವು ದಕ್ಷಿಣ ಬೆಂಗಳೂರಿನ ಡಿಪಿಎಸ್ ತಂಡದ ವಿರುದ್ಧ 8-0 ಅಂತರದ ಭರ್ಜರಿ ಜಯದೊಂದಿಗೆ ಫೈನಲ್‌ಗೆ ಪ್ರವೇಶ ಪಡೆಯಿತು.ಈ ಟೂರ್ನಿಯಲ್ಲಿ ಬೆಂಗಳೂರಿನ ಜೈನ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಕ್ರೀಡಾಪಟು ಕ್ಯಾಮಿಲೊ ಆ್ಯಂಡ್ರೆಸ್ ಉತ್ತಮ ಕ್ರೀಡಾಪಟು ಆಗಿ ಆಯ್ಕೆಯಾದರು. ಮುಂಡಗೋಡಿನ ಸೆಂಟ್ರಲ್ ಸ್ಕೂಲ್‌ನ ಕರ್ಮಾ ಲೆಂಗ್ಡೆನ್ ಟೂರ್ನಿಯಲ್ಲಿ 8 ಗೋಲುಗಳನ್ನು ಬಾರಿಸುವ ಮೂಲಕ ಹೆಚ್ಚಿನ ಗೋಲುಗಳ ಸರದಾರರಾಗಿ ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.