ನವದೆಹಲಿ: ಭಾರತದ ಬಾಲಕಿಯರು ಕೊಲಂಬೊದಲ್ಲಿ ನಡೆದ ಎಎಫ್ಸಿ ಕಪ್ 13 ವರ್ಷದೊಳಗಿನವರ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಮಾರ್ಚ್ 9ರಿಂದ 14ರವರೆಗೆ ನಡೆದ ಈ ಟೂರ್ನಿಯಲ್ಲಿ ಭಾರತ ತಂಡ 1-0 ಗೋಲಿನಿಂದ ಇರಾನ್ ಎದುರೂ, 13-0 ಗೋಲುಗಳಿಂದ ಭೂತಾನ್ ವಿರುದ್ಧವೂ, 7-0 ಗೋಲುಗಳಿಂದ ಶ್ರೀಲಂಕಾ ಮೇಲೂ, 7-1 ಗೋಲುಗಳಿಂದ ಜೋರ್ಡಾನ್ ಎದುರೂ ಹಾಗೂ 9-0 ಗೋಲುಗಳಿಂದ ಪ್ಯಾಲೆಸ್ತೀನ್ ವಿರುದ್ಧವೂ ಗೆಲುವು ಸಾಧಿಸಿತು.

`ನಾವು ಬುಧವಾರ ಸಂಜೆ ಆಗಮಿಸಿದೆವು. ಎಲ್ಲರೂ ಉತ್ತಮ ಪ್ರದರ್ಶನ ತೋರಿದರು. ಈ ಸಾಧನೆ ಖುಷಿ ಉಂಟು ಮಾಡಿದೆ. ಇದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವಿದೆ~ ಎಂದು ತಂಡದ ಮುಖ್ಯ ಕೋಚ್ ಪ್ರಿಯಾ ನುಡಿದಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ತಂಡವನ್ನು ಅಭಿನಂದಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಆಟಗಾರ್ತಿಯರಿಗೆ ತಲಾ ಐದು ಸಾವಿರ ರೂ. ಬಹುಮಾನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.