ಶನಿವಾರ, ಆಗಸ್ಟ್ 15, 2020
21 °C

ಫುಟ್‌ಬಾಲ್: ಸರ್ಕಾರಿ ಮುದ್ರಣಾಲಯ ತಂಡಕ್ಕೆ ಪ್ರಯಾಸದ ಗೆಲುವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಬಾಲ್: ಸರ್ಕಾರಿ ಮುದ್ರಣಾಲಯ ತಂಡಕ್ಕೆ ಪ್ರಯಾಸದ ಗೆಲುವು...

ಬೆಂಗಳೂರು: ಲೋಕೇಶ್ವರ್ ಸಿಂಗ್ ಮತ್ತು ಶಿಯಾದ್ ಅವರು ತಂದಿತ್ತ ತಲಾ ಎರಡು ಗೋಲುಗಳ ನೆರವಿನಿಂದ ಎಂಇಜಿ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭರ್ಜರಿ ಜಯ ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚುರುಕಿನ ಆಟವಾಡಿದ ಎಂಇಜಿ ತಂಡ 5-0 ಗೋಲುಗಳಿಂದ ಎಸ್‌ಎಐ ವಿರುದ್ಧ ಗೆಲುವು ಸಾಧಿಸಿತು. ಎಂಇಜಿ ಆಟಗಾರರು ಆರಂಭದಿಂದ ಕೊನೆಯವರೆಗೂ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದರು. ಲೋಕೇಶ್ವರ್ ಸಿಂಗ್ ಅವರು ಏಳನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದಿತ್ತರು. ಇದಾದ ಎರಡು ನಿಮಿಷಗಳ ಬಳಿಕ ಸೂರಜ್ ಸಿಂಗ್ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಕಾರಣ ಎಸ್‌ಎಐ ತಂಡ ಒತ್ತಡಕ್ಕೆ ಒಳಗಾಯಿತು. ಎಂಇಜಿ ಇದರ ಲಾಭ ಎತ್ತಿಕೊಂಡಿತು. ಶಿಯಾದ್ (25 ಮತ್ತು 42ನೇ ನಿಮಿಷ) ತಂಡಕ್ಕೆ ಮತ್ತೆರಡು ಗೋಲುಗಳನ್ನು ತಂದುಕೊಟ್ಟರು. ವಿರಾಮದ ಬಳಿಕ ಎಂಇಜಿ ಒಂದು ಗೋಲು ಗಳಿಸಿತು. ಪಂದ್ಯದ 69ನೇ ನಿಮಿಷದಲ್ಲಿ ಲೋಕೇಶ್ವರ್ ತಮ್ಮ ಎರಡನೇ ಹಾಗೂ ತಂಡದ ಐದನೇ ಗೋಲು ಗಳಿಸಿದರು.ಸರ್ಕಾರಿ ಮುದ್ರಣಾಲಯಕ್ಕೆ ಜಯ: `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸರ್ಕಾರಿ ಮುದ್ರಣಾಲಯ ತಂಡ 2-1 ಗೋಲುಗಳಿಂದ ಎಜಿಒಆರ್‌ಸಿ ತಂಡವನ್ನು ಮಣಿಸಿತು.ಈ ಪಂದ್ಯ ರೋಚಕತೆಯಿಂದ ಕೂಡಿತ್ತು. ಸಿ. ಲಿಯೋ ಅವರು 34ನೇ ನಿಮಿಷದಲ್ಲಿ ಗೋಲು ಗಳಿಸಿ ಎಜಿಒಆರ್‌ಸಿಗೆ ಮುನ್ನಡೆ ತಂದಿತ್ತರು. ಮಾತ್ರವಲ್ಲ ತಂಡ ಈ ಮುನ್ನಡೆಯನ್ನು 64ನೇ ನಿಮಿಷದವರೆಗೂ ಕಾಪಾಡಿಕೊಂಡಿತು. ಬಳಿಕ ಸರ್ಕಾರಿ ಮುದ್ರಣಾಲಯ ಪುಟಿದೆದ್ದು ನಿಂತಿತು.ಕುಪ್ಪರಾಜ್ 64ನೇ ನಿಮಿಷದಲ್ಲಿ ಮುದ್ರಣಾಲಯ ತಂಡಕ್ಕೆ ಮೊದಲ ಗೋಲು ತಂದಿತ್ತರು. ಪ್ರೇಮ್‌ಕುಮಾರ್ ಅವರು `ಇಂಜುರಿ ಅವಧಿ~ಯಲ್ಲಿ ಚೆಂಡನ್ನು ಗುರಿ ಸೇರಿಸಿದರಲ್ಲದೆ, ಮುದ್ರಣಾಲಯ ತಂಡದ ರೋಚಕ ಗೆಲುವಿಗೆ ಕಾರಣರಾದರು. ಭಾನುವಾರ ನಡೆಯುವ ಪಂದ್ಯಗಳಲ್ಲಿ ಓರಿಯಂಟಲ್- ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಎಚ್‌ಎಎಲ್- ಬಿಇಎಲ್ ತಂಡಗಳು ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.