ಭಾನುವಾರ, ಏಪ್ರಿಲ್ 18, 2021
30 °C

ಫೇಸ್‌ಬುಕ್‌ನಲ್ಲಿ ಅಬ್ದುಲ್ ಕಲಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಇನ್ನು ಮುಂದೆ ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ನಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.ದೇಶದ ಅಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳನ್ನು ಅವರು ಇಲ್ಲಿ ಚರ್ಚಿಸಲಿದ್ದಾರೆ. ಅಲ್ಲದೇ ವಿವಿಧ ವರ್ಗಗಳ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.ಈಗಾಗಲೇ ಯು ಟ್ಯೂಬ್‌ನಲ್ಲಿ ಕಾಣಿಸಿಕೊಂಡಿರುವ ಕಲಾಂ , ಇನ್ನು ಮುಂದೆ ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಬರೆಯುತ್ತಾರೆ. ತಮ್ಮ ಮೊದಲ ಅನಿಸಿಕೆಯಾಗಿ ಅವರು ಪುದುಚೇರಿಯ ಮೇಡಂ ಮೆಡ್ಲೀನ್ ಡಿ ಬ್ಲಿಕ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.`ಮೆಡ್ಲೀನ್ ಅವರಲ್ಲಿ ನಾನು ಮದರ್ ತೆರೇಸಾ ಅವರ ಸೇವಾ ಮನೋಭಾವನೆಯನ್ನು ಕಂಡಿದ್ದೇನೆ. ಎಂದು ಕಲಾಂ ಬರೆದಿದ್ದಾರೆ.ಕಲಾಂ ಫೇಸ್‌ಬುಕ್ ವಿಳಾಸ: www.facebook.com/kalambillionbeats

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.