ಶುಕ್ರವಾರ, ಮೇ 20, 2022
25 °C

ಫೋರಂನಲ್ಲಿ ಶಾಪಿಂಗ್ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೋರಂನಲ್ಲಿ ಶಾಪಿಂಗ್ ಮೇಳ

ಅಕ್ಟೋಬರ್ ತಿಂಗಳಿನಲ್ಲಿ ಮನಸ್ಸಿಗೆ ಮುದನೀಡುವ ಮಳೆ ಒಂದೆಡೆಯಾದರೆ, ಮತ್ತೊಂದೆಡೆ ಸಾಲು ಸಾಲಾಗಿ ಬರುವ ಹಬ್ಬಗಳು. ಈ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಕೋರಮಂಗಲದ ಫೋರಂ ಮಾಲ್‌ನಲ್ಲಿ ನಡೆಯುತ್ತಿರುವ ಶಾಪಿಂಗ್ ಫೆಸ್ಟಿವಲ್.ಈ ತಿಂಗಳಿಡೀ ಮೇಳದಲ್ಲಿ ಗ್ರಾಹಕರು ಮನರಂಜನೆ ಜತೆಗೆ ಆಕರ್ಷಕ ಬಹುಮಾನಗಳನ್ನು ಸಹ ಗೆಲ್ಲಬಹುದು. ಇದಕ್ಕೆ ಪೂರಕವಾಗಿ ಮಾಲ್ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ.

 

ದೇಶದ ವಿವಿಧೆಡೆಯ ಖ್ಯಾತ ನೃತ್ಯಪಟುಗಳ ತಂಡ ಭರತನಾಟ್ಯ, ಕೂಚಿಪುಡಿ, ಮಣಿಪುರಿ, ಹುಲಿಯಾಟ, ಯಕ್ಷಗಾನ, ತಂಜಾವೂರು ಬೊಂಬೆ ನೃತ್ಯ, ಕಂಸಾಳೆ, ಶಿವತಾಂಡವ, ಡೊಳ್ಳು ಕುಣಿತ, ಪೂಜಾ ಕುಣಿತ, ದಾಂಡಿಯಾ, ಬುಡಕಟ್ಟು ನೃತ್ಯದಿಂದ ಸಂಚಲನ ಉಂಟುಮಾಡಲಿವೆ.ಇದರ ಜತೆಗೆ ಈಚೆಗೆ ನಡೆದ ಮ್ಯೂಸಿಕ್ ಫೆಸ್ಟ್‌ನಲ್ಲಿ ಜಯ ಗಳಿಸಿದ ಬ್ರೇಕ್ ಫ್ರೀ, ಹಂಗ್ರಿ, ರಿದಮಿಕ್ ಎನರ್ಜಿ ಹಾಗೂ ಕ್ಲಾಸಿಕಲ್‌ನಲ್ಲಿ ಮೋಡಿಮಾಡಿದ ಕೃಷ್ಣಪ್ರಸಾದ್ ಅವರು ಸಹ ಈ ಸಂದರ್ಭದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.ಅಲ್ಲದೆ ಮಾಲ್‌ನ ಅಂಗಡಿಗಳಲ್ಲಿ ಖರೀದಿಸುವ ಗ್ರಾಹಕರು ಐಪಾಡ್, ಎಲ್‌ಸಿಡಿ ಟಿವಿ, ಬೈಕ್ ಮೊದಲಾದ ಆಕರ್ಷಕ ಬಹುಮಾನ ಗೆಲ್ಲಬಹುದು. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಿಯಾಯ್ತಿ ದರದಲ್ಲಿ ಕೊಳ್ಳಬಹುದು. ಒಬ್ಬ ಅದೃಷ್ಟಶಾಲಿ ಗ್ರಾಹಕನಿಗೆ  35 ಲಕ್ಷ ರೂಪಾಯಿ ಮೌಲ್ಯದ 2 ಬೆಡ್‌ರೂಂನ ಒಂದು ಫ್ಲಾಟ್ ಗೆಲ್ಲುವ ಅವಕಾಶ ಇಲ್ಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.