ಸುರತ್ಕಲ್: ಬಂದರು ಖಾಸಗಿಕರಣ ವಿರೋಧಿಸಿ ಎನ್ಎಂಪಿಟಿ ಕಾರ್ಮಿಕರು ಎಚ್ಎಂಎಸ್, ಇಂಟಕ್, ಬಿಎಂಎಸ್ ಸಂಘಟನೆಗಳ ಬೆಂಬಲದೊಂದಿಗೆ ಶುಕ್ರವಾರ ಧಿಡೀರ್ ಪ್ರತಿಭಟನೆ ನಡೆಸಿದರು.

ಲಾಭದಲ್ಲಿರುವ ಬಂದರನ್ನು ಖಾಸಗಿಯವರಿಗೆ ಹಸ್ತಾಂತರಿಸುವುದನ್ನು ಕಾರ್ಮಿಕರು ವಿರೋಧಿಸಿದರು. ಇದರಿಂದ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯುಂಟಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಕಾರ್ಮಿಕ ಸಂಘಟನೆಗಳು ವಿರೋಧಿಸಿದರೂ ಸರ್ಕಾರ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿವೆ ಎಂದು ಅವರು ದೂರಿದ್ದಾರೆ

ಎನ್ಎಂಪಿಟಿ, ತೂತುಕುಡಿ, ಗೋವಾ ಸೇರಿದಂತೆ ಪ್ರಮುಖ ಬಂದರುಗಳ ಕಾರ್ಮಿಕರು ಖಾಸಗಿಕರಣಕ್ಕೆ ಬಲವಾಗಿ ವಿರೋಧಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ನಡೆದ ನೌಕಾಯಾನ ಇಲಾಖೆ ಸಭೆಯಲ್ಲೂ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಆದರೂ ಸರ್ಕಾರ ಕಾರ್ಮಿಕರ ವಿರೋಧದ ನಡುವೆಯೂ ಖಾಸಗಿರಕರಣಕ್ಕೆ ಮುಂದಾಗಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಶುಕ್ರವಾರ ಕೇಂದ್ರ ನೌಕಾಯಾನ ಕಾರ್ಯದರ್ಶಿ ಕೆ.ಮೋಹನದಾಸ್ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತಾ ದರೂ ಕೊನೆ ಕ್ಷಣದಲ್ಲಿ ರದ್ದು ಗೊಂಡಿರು ವುದರಿಂದ ಕಾರ್ಮಿಕ ಸಂಘಟನೆಗಳು ಮನವಿ ನೀಡುವ ನಿರ್ಧಾರದಿಂದ ಹಿಂದೆ ಸರಿಯ ಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.