ಗುರುವಾರ , ಮಾರ್ಚ್ 4, 2021
29 °C

ಬಜೆಟ್‌ ಸುಳ್ಳಿನ ಕಂತೆ: ಎಚ್‌ಡಿಕೆ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಜೆಟ್‌ ಸುಳ್ಳಿನ ಕಂತೆ: ಎಚ್‌ಡಿಕೆ ಟೀಕೆ

ಬೆಂಗಳೂರು: ಸಿದ್ದರಾಮಯ್ಯನವರ ಬಜೆಟ್‌ ‘ಸುಳ್ಳುಗಳ ಸರಮಾಲೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ  ಟೀಕಿಸಿದರು.ಬುಧವಾರ ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತ­ನಾ­ಡಿದ ಅವರು, ‘ಲೋಕಸಭಾ ಚುನಾ­ವ­ಣೆಯನ್ನು ಗಮನದಲ್ಲಿಟ್ಟು ಕೊಂಡು ₨ 18,500 ಕೋಟಿ ಸಬ್ಸಿಡಿ ನೀಡಲಾಗಿದೆ. ಈ ರೀತಿ ಮಾಡಿದರೆ ಆರ್ಥಿಕ ಶಿಸ್ತು ತರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಅನುತ್ಪಾದಕ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ನೀರಾವರಿ, ಕೃಷಿ, ವಿದ್ಯುತ್‌ ವಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.‘ಅನ್ನಭಾಗ್ಯ’ ಒಳ್ಳೆಯ ಯೋಜನೆ. ಆದರೆ, ಕುಟುಂಬವೊಂದಕ್ಕೆ 30 ಕೆ.ಜಿ. ಅಕ್ಕಿ ಕೊಡುವಂತೆ ಯಾರೂ ಕೇಳಿರಲಿಲ್ಲ. ಬೇಕು– ಬೇಡ ಎನ್ನುವುದನ್ನು ಗಮನಿಸದೆ ಅಕ್ಕಿ ಕೊಟ್ಟ ಪರಿಣಾಮ ಸರ್ಕಾರದ ಮೇಲೆ ಹೊರೆ ಹೆಚ್ಚಾಗಿದೆ. ಇದನ್ನು ವಾಸ್ತ­­ವಾಂಶದ ಮೇಲೆ ಪರಿಶೀಲಿಸಿ ಅಕ್ಕಿ ಪ್ರಮಾಣ ಕಡಿಮೆ ಮಾಡಿ, ನೀರಾವರಿ, ಕೃಷಿಗೆ ಹೆಚ್ಚಿನ ಹಣ  ಮೀಸಲಿಡಬೇಕು. ಇದಕ್ಕೆ ತಾವು ಬೆಂಬಲ ನೀಡುವುದಾಗಿ ಹೇಳಿದರು.ಮಾಧ್ಯಮಗಳಲ್ಲಿ ಬಣ್ಣ ಬಣ್ಣದ ಜಾಹೀರಾತುಗಳನ್ನು ನೀಡುವುದರಿಂದ ರಾಜ್ಯಕ್ಕೆ ಬಂಡವಾಳ ಬರುವುದಿಲ್ಲ. ಕೈಗಾರಿಕೆ­ಗಳಿಗೆ ಅಗತ್ಯವಿರುವ ವಿದ್ಯುತ್‌, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಿ ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.