ಸೋಮವಾರ, ಜೂನ್ 21, 2021
22 °C

ಬಜೆಟ್ ಮಂಡನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಪ್ರತಿಪಕ್ಷಗಳ ಸದಸ್ಯರ ಗದ್ದಲದ ಮಧ್ಯೆಯೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2012-13ನೇ ಸಾಲಿನ ಬಜೆಟ್‌ನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ.ಇದು ಅವರು ಮಂಡಿಸುತ್ತಿರುವ 7ನೇ ಬಜೆಟ್ ಆಗಿದೆ. ಜತೆಗೆ ಇದು ಸಂಸತ್ತಿನ ಇತಿಹಾಸದಲ್ಲಿ 81ನೇ  ಬಜೆಟ್ ಆಗಿ ದಾಖಲಾಗಲಿದೆ.ಇದಕ್ಕೂ ಮುನ್ನ ಅವರು ಪ್ರಧಾನಮಂತ್ರಿ ಮನಮೋಹನಸಿಂಗ್ ಹಾಗೂ ಸಂಪುಟದ ಹಿರಿಯ ಸದಸ್ಯರೊಂದಿಗೆ ಸಭೆ ನಡೆಸಿದರು. ಸಂಪುಟವು ಬಜೆಟ್‌ನಲ್ಲಿನ ಹಲವಾರು ಯೋಜನೆಗಳಿಗೆ ಒಪ್ಪಿಗೆ ನೀಡಿತು.ಸದನ ಆರಂಭವಾಗುತ್ತಿದಂತೆ ಬಜೆಟ್ ಮಂಡನೆಗೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿದ  ಪ್ರತಿಪಕ್ಷಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸಭಾದ್ಯಕ್ಷೆ ಮೀರಾಕುಮಾರ್ ಅವರು ಹಣಕಾಸು ಸಚಿವರು ಸಂವಿಧಾನಾತ್ಮಕ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಸುಮ್ಮನಿರಿ ಎಂದರು.ನಂತರ ಪ್ರಣವ್‌ಮುಖರ್ಜಿ ಬಜೆಟ್ ಓದಲು ಆರಂಭಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.