ಗುರುವಾರ , ಮೇ 13, 2021
39 °C

ಬಡ್ಡಿ ದರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಗೃಹ ಸಾಲ ಬಡ್ಡಿ ದರವನ್ನು ಶೇ 0.5ರಷ್ಟು ಇಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) ಹೇಳಿದೆ.  `ಗೃಹ ಮತ್ತು ಮೂಲಸೌಕರ್ಯ ಯೋಜನೆಗಳ ಮತ್ತು `ಹುಡ್ಕೊ ನಿವಾಸ್~ ಯೋಜನೆಯಡಿ ವೈಯಕ್ತಿಕ ಗೃಹ ಸಾಲಗಳ ದರವನ್ನು ಶೇ 0.5ರಷ್ಟು ಇಳಿಸಲಾಗಿದೆ~ ಎಂದು  ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿರುವ ಗೃಹ ಯೋಜನೆಗಳ ಬದಲಾಗುವ ಬಡ್ಡಿದರ ಇನ್ನು ಮುಂದೆ ಶೇ 8.50 ಮತ್ತು ಶೇ 8.75 ಆಗಲಿದೆ. ಈ ಮೊದಲು ಈ ಬಡ್ಡಿ ದರವು ಶೇ 9 ಮತ್ತು ಶೇ 9.25ರಷ್ಟಿತ್ತು.

ಕಡಿಮೆ ಆದಾಯ ಹೊಂದಿರುವ ವರ್ಗಗಳ ಗೃಹ ಸಾಲಗಳ ಬಡ್ಡಿದರ ಶೇ 9.50ರ ಬದಲಾಗಿ ಇನ್ನು ಮುಂದೆ 9ರಷ್ಟು ಆಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.