ಭಾನುವಾರ, ಜೂನ್ 20, 2021
20 °C

ಬಣ್ಣದ ಎರಚಾಟ, ಸಂಭ್ರಮದ ಹೋಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಭಾತೃತ್ವ ಸಾರುವ ಹೋಳಿ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಕಬಾಡಗೇರಿಯ ನಾಗರಿಕರು ವಿಶಿಷ್ಟವಾಗಿ ಹೋಳಿ ಆಚರಿಸಿದರು. ಬೋವಿ ಮೋಹಲ್ಲಾದ ಯುವಕರು ಡಿ.ಜೆ. ಮೆರವಣಿಗೆ ನಡೆಸಿದರು. ಪರಸ್ಪರ ಬಣ್ಣದ ಎರಚಾಟ, ಲಬೋ ಲಬೋ, ಹೋಳಿ ಹಬ್ಬಕ್ಕೆ ಮೆರುಗು ನೀಡಿದ್ದವು.ಬೆಳಿಗ್ಗೆಯಿಂದಲೆ ಯುವಕರು ತಮ್ಮ ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿ ಓಕುಳಿಯಾಡಿದರು. ಅಲ್ಲಲ್ಲಿ ಮಹಿಳೆಯರು ರಂಗಿನಾಟದಲ್ಲಿ ತೊಡಗಿದ್ದು ಕಂಡು ಬಂತು. ಎಲ್ಲೆಂದರಲ್ಲಿ ಗುಲಾಬಿ, ಹಸಿರು, ಹಳದಿ ಬಣ್ಣ ಕಾಣುತಿತ್ತು. ಹೋಳಿ ಅಂಗವಾಗಿ ಅಂಗಡಿಗಳಲ್ಲಿ ಬಣ್ಣ ಖರೀದಿ ಜೋರಾಗಿತ್ತು. ಚಿಕ್ಕಮಕ್ಕಳು ಪಿಚಗಾರಿ ಖರೀದಿಸಿ ಬಣ್ಣ ಉಗ್ಗಿ ಸಂಭ್ರಮಿಸಿದರು.ಸಂಜೆ ಕಾಮದಹನ ಮಾಡಲಾಯಿತು. ಕಾಮ, ಮೋಹ, ಮದ, ಮತ್ಸರ, ದುರಾಸೆ, ಅಸೂಯೆ ಎಂಬ ಕೆಟ್ಟ ಚಟಗಳನ್ನು ಕಾಮನ ರೂಪದಲ್ಲಿ ಸುಡಲಾಗುತ್ತದೆ. ಮನೆ ಮನೆಗೆ ತೆರಳಿ ಕಟ್ಟಿಗೆ ಕುಳ್ಳು ಬೇಡಿ ಕಾಮನ ಚಿತ್ರಪಟ ಮೆರವಣಿಗೆ ಮಾಡಿ, ಕಾಮ ದಹನ ಮಾಡಲಾಯಿತು.ಕೆಲವರು ಕಾಮ ಸುಟ್ಟ ಬೆಂಕಿಯ ಕಿಡಿಯನ್ನು ಮನೆಗೆ ತೆಗೆದುಕೊಂಡು ಹೋದರು. ಈ ಬೆಂಕಿಯಿಂದ ಮನೆಯಲ್ಲಿ ದೀಪ ಉರಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಇಡೀ ದಿನ ಬಣ್ಣದಲ್ಲಿ ಮಿಂದೆದ್ದ ಯುವ ಪಡೆ ಪರಸ್ಪರ ಸ್ನೇಹ, ಸೌಹಾರ್ದ ಬೆಳೆಸಲು ನಾಂದಿ ಹಾಡಿತು.ಕಬಾಡಗೇರಾ ಬಡಾವಣೆಯ ನಾಗರಿಕರು ಮೈಸೂರು ರಾಜ, ಮನ್ಮಥ, ರತಿ, ರಮಣೀಯರು ಮತ್ತು ನಂದಿ ಮೂರ್ತಿಗಳ ಭವ್ಯ ಶೋಭಾಯಾತ್ರೆ ನಡೆಸಿದರು. ಇಲ್ಲಿನ ವಿಶೇಷ ದುಂದುಮೆ ಪದ ಹಾಡಿ ನಲಿದರು. ಬ್ಯಾಂಡ ಬಾಜಿ, ನೃತ್ಯ, ಬಣ್ಣ ಎರಚಾಟ ಮೆರವಣಿಗೆಗೆ ಮೆರಗು ನೀಡಿದ್ದವು.ದೇವಿಂದ್ರಪ್ಪ ಕಳ್ಳಿಮನಿ, ಶರಣಯ್ಯಸ್ವಾಮಿ ಮಠಪತಿ, ಚಂದ್ರಶೇಖರ ಪಂಚಾಂಗಮಠ, ನಾಗಭೂಷಣಸ್ವಾಮಿ, ಲಾಲಸಿಂಗ್, ಮಲ್ಲಿಕಾರ್ಜುನ ಲಕ್ಷ್ಮೀಪುರ, ಚಂದ್ರಹಾಸ ಹೂಗಾರ್, ಗೋಪಾಲ ಮೂಲಿಮನಿ, ಅರುಣಕುಮಾರ ಹೂಗಾರ್, ರಮೇಶ ಹೂಗಾರ್, ರಾಜಶೇಖರ ಹಳ್ಳದ, ಬಸಲಿಂಗಪ್ಪ ಸಾಹುಕಾರ್ ಬೋನಾಳ, ನಿಂಗಪ್ಪ ಏವೂರ, ರಂಗಪ್ಪ ಹೊಸಮನಿ, ಅಶೋಕ ಮಗಲಿ, ಭೀಮಾಶಂಕರ ಕಳ್ಳಿಮನಿ, ಬೂದೆಪ್ಪ (ಅಪ್ಪು) ಜಾಲಹಳ್ಳಿ, ಸಾಗರ ಏವೂರ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.