ಸೋಮವಾರ, ಮೇ 17, 2021
31 °C

`ಬತ್ತ ಬಿತ್ತನೆಗೆ ಉಪಚಾರ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೃಂಗೇರಿ: ಬತ್ತದ ಬೀಜ ಬಿತ್ತನೆಗೂ ಮುನ್ನ ಅಗತ್ಯ ಬೀಜೋಪಚಾರ ಮಾಡುವುದರಿಂದ ಆರಂಭಿಕ ಹಂತದಲ್ಲಿ ಭತ್ತದ ಬೆಳೆಯನ್ನು ಕಾಡುವ ರೋಗ ಬಾಧೆಯನ್ನು ಅಲ್ಪ ವೆಚ್ಚದಲ್ಲಿ ತಡೆಗಟ್ಟಬಹುದಾಗಿದೆ ಎಂದು ಕೃಷಿ ಇಲಾಖೆಯ ಶಿವಮೂರ್ತಿ ಹೇಳಿದರು.ಕೆರೆಮನೆಯಲ್ಲಿ ಇತ್ತೀಚೆಗೆ ಕೃಷಿ ಇಲಾಖೆ ಮತ್ತು ಆದರ್ಶ ರೈತ ಮಿತ್ರ ಕೂಟ ಆಯೋಜಿಸಿದ್ದ ಭೂಚೇತನ ಕಾರ್ಯಕ್ರಮದಲ್ಲಿ ಭತ್ತದ ಬೀಜೋಪಚಾರದ ಕುರಿತು ಅವರು ಮಾಹಿತಿ ನೀಡಿದರು.ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವುದರಿಂದ ಕನಿಷ್ಠ 60 ದಿನಗಳವರೆಗೂ ಸಾಮಾನ್ಯವಾಗಿ ಬರುವ ರೋಗ ಬಾಧೆಗಳನ್ನು ತಡೆಗಟ್ಟಬಹುದಾಗಿದೆ. ಯೋಗ್ಯ ಬೀಜವನ್ನು ಆಯ್ಕೆ ಮಾಡಿಕೊಂಡು ಪ್ರತಿ ಕೆಜಿ ಬೀಜಕ್ಕೆ ನಾಲ್ಕು ಗ್ರಾಂ ಕಾರ್ಬನ್‌ಡೈಜಿಯಂ ಶಿಲೀಂದ್ರನಾಶಕವನ್ನು ಮಿಶ್ರ ಮಾಡಬೇಕು. ನಂತರ 20 ನಿಮಿಷ ನೆರಳಲ್ಲಿ ಒಣಗಿಸಿ ನಂತರ ನೇರವಾಗಿ ಅಥವಾ ಮೊಳಕೆ ಕಟ್ಟಿ ಬಿತ್ತನೆ ಮಾಡಬಹುದಾಗಿದೆ ಎಂದರು.ಕೃಷಿ ಇಲಾಖೆಯ ಮಂಜುನಾಥ್ ಮಾತನಾಡಿ, ಬತ್ತದ ಬೆಳೆಯಲ್ಲಿ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಎಕರೆಗೆ ಬೇಕಾಗುವ ಬಿತ್ತನೆ ಬೀಜವನ್ನು ಒಂದು ಕೆಜಿ ಟ್ರೈಕೊಡರ್ಮದಿಂದ ಉಪಚರಿಸಿದ ನಂತರ 20 ನಿಮಿಷ ಒಣಗಿಸಿ ಬಿತ್ತನೆ ಮಾಡಬಹುದಾಗಿದೆ.ಬಿತ್ತನೆ ಬೀಜಗಳನ್ನು ಸಿದ್ದಪಡಿಸಕೊಳ್ಳುವಾಗ ಕೀಟಗಳಿಂದ ಹಾನಿಯಾಗಿರುವ, ಮೊಳಕೆ ಕಣ್ಣು ನಾಶವಾದ ಬೀಜಗಳನ್ನು ತೆಗೆದು ಸಿಹಿ ನೀರಿನಲ್ಲಿ ನೆನಸಿ ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು. ಇದರೊಂದಿಗೆ ಶಿಪಾರಸು ಮಾಡಿದ ಉಪ್ಪಿನ ದ್ರಾವಣದಲ್ಲಿ ಬೀಜವನ್ನು ನೆನಸಿ ನಂತರ ಸಿಹಿ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸುವ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದರು.ಮೆಣಸೆ ಗ್ರಾಮಪಂಚಾಯತಿ ಸದಸ್ಯ ಸಸಿಮನೆ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್.ರಮೇಶ್ ಉದ್ಘಾಟಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.