ಭಾನುವಾರ, ಮೇ 9, 2021
20 °C

ಬನವಾಸಿ ಮಧುಕೇಶ್ವರನಿಗೆ 33 ಅಡಿ ರುದ್ರಾಕ್ಷಿ ಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಪುಣ್ಯ ಕ್ಷೇತ್ರ ಬನವಾಸಿಯ ಮಧುಕೇಶ್ವರ ದೇವರಿಗೆ ಅನಿವಾಸಿ ಬನವಾಸಿ ಬಳಗ 33 ಅಡಿ ಉದ್ದದ ಬೃಹತ್ ಗಾತ್ರದ ರುದ್ರಾಕ್ಷಿ ಮಾಲೆಯನ್ನು ಅರ್ಪಿಸಿದೆ.70 ಸಾವಿರ ರುದ್ರಾಕ್ಷಿ ಮಣಿ ಹೊಂದಿರುವ ಒಂದೂವರೆ ಕ್ವಿಂಟಾಲ್ ಭಾರದ ರುದ್ರಾಕ್ಷಿ ಮಾಲೆಯನ್ನು ಮೆರವಣಿಗೆಯಲ್ಲಿ ತಂದು ರಥೋತ್ಸವದ ದಿನ ಮಂಗಳವಾರ ದೇವರಿಗೆ ಅರ್ಪಿಸಲಾಯಿತು. 45 ಎಳೆಗಳಿರುವ ರುದ್ರಾಕ್ಷಿ ಮಾಲೆಯ ಅಂದಾಜು ಮೊತ್ತ ರೂ. 50,000 ದಷ್ಟಾಗಿದೆ. ಬನವಾಸಿ ಮೂಲದ ಅನೇಕರು ಹೊರ ಊರುಗಳಲ್ಲಿ ವೃತ್ತಿ ಜೀವನ ನಡೆಸುತ್ತಿದ್ದು, ಅಂಥವರು ಮತ್ತು ಊರಿನ ಯುವಕರು ಸೇರಿ ಈ ಹಾರ ಅರ್ಪಣೆ ಮಾಡಿದ್ದಾರೆ. ಬೃಹತ್ ರುದ್ರಾಕ್ಷಿ ಹಾರ ನೋಡಲು ಅತ್ಯಂತ ಆಕರ್ಷಕವಾಗಿದೆ. ಬನವಾಸಿ ಜಾತ್ರೆಗೆ ಆಗಮಿಸಿದ ಸಹಸ್ರಾರು ಜನರು ಮಧುಕೇಶ್ವರ ದೇವರು ಆಸೀನಾಗಿದ್ದ ರಥಕ್ಕೆ ಅಲಂಕರಿಸಿದ ಮಾಲೆ ವೀಕ್ಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.