ಮಂಗಳವಾರ, ಮೇ 11, 2021
21 °C

ಬನಹಟ್ಟಿ ಯಾತ್ರಿಕರೂ ಕಷ್ಟದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ (ಬಾಗಲಕೋಟೆ ಜಿಲ್ಲೆ):  ಉತ್ತರ ಭಾರತ ಪ್ರವಾಸಕ್ಕೆಂದು ತೆರಳಿದ್ದ ಬನಹಟ್ಟಿಯ ಮಾಹೇಶ್ವರಿ ಸಮಾಜದ ಐವರು ಮತ್ತು ಅವರ ಸಂಬಂಧಿಕರು ಹಾಗೂ ಪ್ರಭು ಕರಲಟ್ಟಿ ದಂಪತಿ ಸೇರಿದಂತೆ ಒಟ್ಟು 17 ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಲಡ್ಡಾ ಕುಟುಂಬ ಹಾಗೂ ಪ್ರಭು ಕರಲಟ್ಟಿ ಕುಟುಂಬದ ಸದಸ್ಯರು ಜೂನ್ 15 ರಂದು ದೆಹಲಿಯಿಂದ ಉತ್ತರಾಖಂಡದ ಬದರಿನಾಥ ಮತ್ತು ಯಮುನೋತ್ರಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಪ್ರವಾಹದಿಂದಾಗಿ ರಸ್ತೆ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.ಬದರಿನಾಥದಿಂದ ಸುಮಾರು 20 ಕಿ.ಮೀ. ದೂರದ ಪಾಂಡೇಶ್ವರ ಎಂಬ ಪ್ರದೇಶದಲ್ಲಿ ನಂದಲಾಲ ಲಡ್ಡಾ ಮತ್ತು ಅವರ ಕುಟುಂಬದ ಏಳು ಸದಸ್ಯರು, ಪ್ರಭು ಕರಲಟ್ಟಿ ಕುಟುಂಬದ ಮೂವರು ಸದಸ್ಯರು ಉತ್ತರ ಕಾಶಿಯಲ್ಲಿ ಹಾಗೂ ಯಮುನೋತ್ರಿಯಲ್ಲಿ ಭಗವಾನದಾಸ ಲಡ್ಡಾ ಕುಟುಂಬದ ಸದಸ್ಯರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.