ಹಿಂದಿ ಹಾಡುಗಳನ್ನೇ ನೆಚ್ಚಿಕೊಂಡು ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ `ಅಖ್ಸ್'ನಲ್ಲಿ ಅಕೂಸ್ಟಿಕ್ ಗಿಟಾರ್ (ಕ್ಸೇವಿಯರ್ ವಿಶಾಲ್), ಎಲೆಕ್ಟ್ರಿಕ್ ಗಿಟಾರ್ (ಶ್ರೀಧರ್ ವರದರಾಜನ್), ಬಾಸ್ ಗಿಟಾರ್ (ರವೀಶ್ ಟಿರ್ಕೆ), ಡ್ರಮ್ಸ (ಯದುನಂದನ್ ನಾಗರಾಜ್) ಹಾಗೂ ಕೊಳಲು (ಅರ್ಜುನ್ ಎಂ.ಪಿ.ಎನ್.) ಬಳಕೆಯಾಗುತ್ತಿದೆ. ಇದೀಗ ಅವರ ತುಡಿತವಿರುವುದು ಗ್ರೀಕ್ನಲ್ಲಿ ಮನೆಮಾತಾಗಿರುವ ವಾದ್ಯ `ಬುಝುಕಿ'ಯನ್ನು ನಗರಕ್ಕೆ ಪರಿಚಯಿಸಬೇಕು ಎಂದು.

`ಬುಝುಕಿ' ಗ್ರೀಕ್ನ ಜನಪದದಲ್ಲಿ ಸ್ಥಾನ ಪಡೆದು ಹೆಚ್ಚಾಗಿ ಅಥೆನ್ಸ್ನಲ್ಲಿ ಬಳಕೆಯಾಗುತ್ತಿದ್ದ ವಾದ್ಯ. ಮೇಲ್ನೋಟಕ್ಕೆ ತಂಬೂರಿಯಂತೆ ಕಾಣುವ `ಬುಝುಕಿ' ತೀಕ್ಷ್ಣವಾದ ನಾದ ಹೊಮ್ಮಿಸುತ್ತದೆ. ಟರ್ಕಿಯಲ್ಲಿ ಬುಝುಕ್ ಎಂದರೆ `ಮುರಿದ' ಅಥವಾ `ಪರಿಷ್ಕೃತ' ಎಂದರ್ಥ. ಅಸಲಿಗೆ `ಬುಝುಕಿ' ಗ್ರೀಸ್ನ ಮೂಲ ಸಂಗೀತವಾದ್ಯವಲ್ಲ. 1900ರಲ್ಲಿ ಅಲ್ಲಿಗೆ ಏಷ್ಯಾ ಖಂಡದಿಂದ ವಲಸೆ ಹೋದವರು ಅಲ್ಲಿಗೆ ಪರಿಚಯಿಸಿದ ವಾದ್ಯ ಪರಿಕರವದು. ಅಲ್ಲಿಂದೀಚೆ ಅದು ಗ್ರೀಕ್ ಜನರ ಸಂಗೀತಕ್ಕೆ ಪ್ರಮುಖ ವಾದ್ಯವಾಗಿಬಿಟ್ಟಿದೆ.

`ಬುಝುಕಿ' ಮೂಲ ಯಾವುದು ಮತ್ತು ಯಾವಾಗ ಅದು ವಾದ್ಯರೂಪದಲ್ಲಿ ಎಲ್ಲಿ ಬಳಕೆಯಾಯಿತು ಎಂಬುದನ್ನು ಹುಡುಕಲು ಹೊರಟರೆ ಗೊಂದಲವೇ ಎದುರಾಗುತ್ತದೆ. ಆದರೆ ಅದು ಪರಿಷ್ಕರಣೆಯಾಗುತ್ತಾ ಪ್ರಸಕ್ತ ರೂಪ ಪಡೆದ ವಾದ್ಯವೆಂಬುದು ಗೊತ್ತಾಗುತ್ತದೆ. ತಂಬೂರ ಕುಟುಂಬದಲ್ಲೇ ಗುರುತಿಸಿಕೊಳ್ಳುವ ಇದು `ಪಂಡೋರಾ' ಎಂದೂ ಕರೆಸಿಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗುತ್ತದೆ.

ಗ್ರೀಸ್ನಲ್ಲಿರುವ ರಾಷ್ಟ್ರೀಯ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿರುವ ಆಧುನಿಕ `ಬುಝುಕಿ'ಯನ್ನು ಹೋಲುವ ವಾದ್ಯಪರಿಕರವೊಂದು ಇದ್ದು, ಅದರಲ್ಲಿ ಕ್ರಿಸ್ತಪೂರ್ವ 330-320 ನಡುವಿನ ಕಾಲಘಟ್ಟವನ್ನು ಬರೆಯಲಾಗಿದೆ.
ಅಂತೂ, ಪುರಾತನ ವಾದ್ಯವೊಂದನ್ನು ಆಧುನಿಕ ಬ್ಯಾಂಡ್ ಸಂಗೀತಕ್ಕೆ ಒಗ್ಗಿಸಿಕೊಳ್ಳುವ ಪ್ರಯತ್ನ `ಅಖ್ಸ್' ತರುಣರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.