ಶಿರಾ: ಪೂರ್ವಿಕರಿಗೆ ಕೆರೆಗಳು ಕೇವಲ ಪ್ರಾಪಂಚಿಕ ಸಾಧನ ಮಾತ್ರವ್ಲ್ಲಲ; ಮುಕ್ತಿಗೂ- ಪಾರಮಾರ್ಥಿಕ ಸಿದ್ದಿಗೂ ಮಾರ್ಗವಾಗಿದ್ದವು ಎಂಬುದನ್ನು ಶಿರಾ ತಾಲ್ಲೂಕಿನಲ್ಲಿ ಕೆರೆ ಕುರಿತು ಲಭ್ಯವಾಗಿರುವ ಕೆಲ ಪ್ರಾಚೀನ ಶಾಸನಗಳು ಸಾರುತ್ತವೆ.

ಇಲ್ಲಿಯ ಕೆರೆಗಳ ಇತಿಹಾಸ ಹಿರಿದು. ದೊರೆಗಳಿಂದ ಹಿಡಿದು ವೇಶ್ಯೆಯರು ಸೇರಿದಂತೆ ಸಮಾಜದ ಹಲವು ಸ್ತರದ ಪೂರ್ವಿಕರು ಕಟ್ಟಿಸಿರುವ ಕೆರೆಗಳು ಇಲ್ಲಿವೆ. ಇಂಥ ಕೆಲ ಕೆರೆಗಳ ಶಾಸನಗಳು ಪತ್ತೆಯಾಗಿವೆ.

ಸದಾ ಸಂಚುಗಾರಿಕೆ, ಯುದ್ಧ, ಹತ್ಯೆಗಳಿಂದ ಜರ್ಜರಿತರಾಗುತ್ತಿದ್ದ ಅಂದಿನ ರಾಜರು-ದಂಡನಾಯಕರು, ಪಾಳೇಗಾರರರು ತಮ್ಮ ಪಾಪಪ್ರಜ್ಞೆಯ ವಿಮೋಚನೆಗಾಗಿ ಕೆರೆಗಳನ್ನು ಕಟ್ಟಿಸಿದ್ದರೆ; ವೇಶ್ಯೆಯರು ಕೂಡ ತಮ್ಮ ವೃತ್ತಿಯ ಪಾಪಪ್ರಜ್ಞೆ ಕಳೆದುಕೊಳ್ಳಲು ಕೆರೆ ಕಟ್ಟಿಸಿದ್ದರಿಂದ ಅವು ಸೂಳೆಕೆರೆ ಎಂದೇ ಹೆಸರುವಾಸಿಯಾಗಿವೆ.

ಇತಿಹಾಸ ಸಂಶೋದಕ ಡಾ.ಎನ್.ನಂದೀಶ್ವರ್ ಈಚೆಗೆ ನಡೆದ ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಕೆರೆಗಳ ಕುರಿತ ಪ್ರಬಂಧದಲ್ಲಿ ಮೆಕಂಜಿ ಅವರ ಮೈಸೂರು ಭೂ ವೈಜ್ಞಾನಿಕ ಹಾಗೂ ಸಂಖ್ಯಾ ಪರಿಶೀಲನಾ ಸಮೀಕ್ಷೆ ವರದಿಯಂತೆ 1799-1806ರಲ್ಲಿ 36 ದೊಡ್ಡಕೆರೆಗಳು, 172 ಚಿಕ್ಕ ಕೆರೆಗಳು ಹಾಗೂ ಹಾಳಾದ ಕೆರೆಗಳಿದ್ದವೆಂದು ತಿಳಿದು ಬರುತ್ತದೆ. ಇಂದು ಶಿರಾ ತಾಲ್ಲೂಕಿನಲ್ಲಿ 195ಕೆರೆಗಳಿದ್ದು, ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಕೆರೆಗಳನ್ನು ಹೊಂದಿದ ತಾಲ್ಲೂಕಾಗಿದೆ ಎಂದು ದಾಖಲಿಸಿದ್ದಾರೆ.

ಈ ತಾಲ್ಲೂಕಿನ ಅತಿ ಪ್ರಾಚೀನ ಶಾಸನ ಕ್ರಿ.ಶ. 788ರ ಗಂಗರ ಅರಸ ಶ್ರೀಪುರುಷನಿಗೆ ಸೇರಿದ್ದಾಗಿದ್ದು, ಈ ಶಾಸನ ಕೂಡ ಕೆರೆ ನಿರ್ಮಾಣ ಕುರಿತೆ ಇದೆ. ಹಲ್ಕೂರು ಕೆರೆಯಲ್ಲಿ ಇಂದಿಗೂ ಅನಾಥವಾಗಿರುವ ಈ ಶಾಸನದಲ್ಲಿ ಶ್ರೀಪುರುಷ ಈ ಕೆರೆ ಕಟ್ಟಿಸಿ ಗ್ರಾಮದ ಕಿರು ತೆರಿಗೆ ಮನ್ನಾ ಮಾಡಿದ್ದಾಗಿ ತಿಳಿದು ಬರುತ್ತದೆ.

ಗ್ರಾಮ ನಿರ್ಮಿಸುವ ಮುನ್ನ ಕೆರೆ ನಿರ್ಮಿಸುವುದು ಮುಖ್ಯ ಎಂಬುದನ್ನು ಸಾರುವ ಲಭ್ಯ ತಾಮ್ರ ಶಾಸನವೊಂದು ವಿಜಯನಗರ ಕಾಲಕ್ಕೆ ಸೇರಿದ್ದು, ದಂಡನಾಯಕನೊಬ್ಬ ಮೊದಲು ಕೆರೆ ನಿರ್ಮಿಸಿ ನಂತರ ತನ್ನ ಒಡೆಯ ಹರಿಹರನ ಹೆಸರಿನಲ್ಲಿ ಹರಿಹರಪುರ ಗ್ರಾಮ ನಿರ್ಮಿಸಿದ್ದಾಗಿ ಹೇಳುತ್ತದೆ.

ಬರಗೂರು ಕೆರೆ ಕುರಿತು ಲಭ್ಯ ಶಾಸನಗಳು ಸ್ವಾರಸ್ಯವಾಗಿದ್ದು, ಈ ಶಾಸನಗಳು ಕೆರೆ ಮುಂದಿನ ಭೂ ಹಂಚಿಕೆ ಮತ್ತು ಕೆರೆ ನಿರ್ವಹಣೆ ಕುರಿತು ತಿಳಿಸುತ್ತವೆ. ಕೆರೆ ಕಟ್ಟಿಸಿದ ನಂತರದ ರಚನೆಯಾದ ಈ ಶಾಸನದಲ್ಲಿ ಕೆರೆ ದುರಸ್ತಿಗೊಳಿಸಿದ ತಿಮ್ಮೇಗೌಡ ಎಂಬುವರಿಗೆ ಭೂಮಿ ಮಾನ್ಯ ಮಾಡಿದ ವಿಷಯ ಇದೆ. ಮುಂದೆಯೂ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಶಿಶುಹತ್ಯೆ ಮಾಡಿದ ಪಾಪಕ್ಕೆ ತುತ್ತಾಗಿ ಮುಂದಿನ ಜನ್ಮದಲ್ಲಿ ಅನಾಮಿಕರ ಮಕ್ಕಳಾಗಿ ಹುಟ್ಟುವೆ ಎಂದು ಶಾಸನದಲ್ಲಿ ಗೌಡನಿಗೆ ಎಚ್ಚರಿಸಲಾಗಿದೆ.

ಅಂದರೆ ಕೆರೆಗಳಿಂದ ಕೇವಲ ಪ್ರಾಪಂಚಿಕ ಸುಖ ಮಾತ್ರವಲ್ಲ. ಸತ್ತ ನಂತರದ ಮುಕ್ತಿಗೂ, ಜನ್ಮಾಂತರಕ್ಕೂ, ಪಾಪ-ಪುಣ್ಯಕ್ಕೂ, ಸ್ವರ್ಗ-ನರಕಕ್ಕೂ ಕೆರೆಗಳ ಜತೆ ನಂಟು ಬೆಸೆದಿದ್ದರು ನಮ್ಮ ಪೂರ್ವಿಕರು. ಅಂಥ ನಂಬಿಕೆಗಳು ಹಿಂದಿನ ಸಮಾಜದಲ್ಲಿ ಬಲವಾಗಿದ್ದರಿಂದಲೇ ಇಂದಿಗೂ ಕೆರೆಗಳು ಉಳಿದು ಬರಲು ಸಾಧ್ಯವಾಗಿದೆ ಅನ್ನಿಸುತ್ತದೆ.

ಪ್ರಸ್ತುತ: ಇಂದು ಕೆರೆಗಳಿಗೆ ಮಹತ್ವ ಇದೆ. ಆದರೆ ಕಾರಣ ಮಾತ್ರ ನೀರಿನ ರಾಜಕಾರಣ- ಮರಳು ಮಾಫಿಯಾ. ಕಳೆದ ಎರಡು ವಿಧಾನಸಭೆ ಚುನಾವಣೆಗೂ ಮದಲೂರು ಕೆರೆಗೆ ನೀರು ಹರಿಸುವ ವಿಷಯವೇ ನಿರ್ಣಾಯಕ. ಆದರೆ ನೀರು ಮಾತ್ರ ಈವರೆಗೂ ಬರಲಿಲ್ಲ. ಅದೇ ಕೆರೆ ನಾಳೆ ಕಾಮಗಾರಿ ಹೆಸರಿನಲ್ಲೇ ಕೆರೆಯಲ್ಲಿದ್ದ ನೂರಾರು ಕೋಟಿ ರೂಪಾಯಿ ಮರಳು ಲೂಟಿ ಆಯಿತು. ಅದಕ್ಕಾಗಿ ಬಡ ಕೂಲಿ ಕಾರ್ಮಿಕನೊಬ್ಬ ಕೆರೆಯಲ್ಲೇ ಬಲಿಯಾದ.

ದಾಖಲೆ ಇಲ್ಲದೆ ಸತ್ತವರು, ಕಾಲು-ಕೈ-ಸೊಂಟ ಮುರಿದು ಅಂಗವಿಕಲರಾದವರು ಇದ್ದಾರೆ ಎಂಬ ವದಂತಿಗಳೂ ಕೆರೆಯ ಸುತ್ತಲಿನ ಗ್ರಾಮಗಳಲ್ಲಿ ಕೇಳಿ ಬರುತ್ತಲೇ ಇವೆ. ಆದರೂ ಇಡೀ ತಾಲ್ಲೂಕಿನಲ್ಲೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯ ಮದಲೂರು ಕೆರೆಯಲ್ಲಿ ಇಂದಿಗೂ ಮರಳು ದಂಧೆ ನಿಂತಿಲ್ಲ.

ಸುವರ್ಣಮುಖಿ: ತಾಲ್ಲೂಕಿನ ಭೂಪಟದಲ್ಲಿ ಸುವರ್ಣಮುಖಿ ನದಿ ಎಂಬ ಗುರುತಿದೆ. ಈಗ ಆ ನದಿ (ತೊರೆ) ಹರಿಯುತ್ತಿದ್ದ ಗುರುತು ಸಿಗಲಾರದು. ಏಕೆಂದರೆ ನದಿ ಪಾತ್ರದ ಉದ್ದಕ್ಕೂ ಮರಳು ಲೂಟಿಯಾಗಿ ಅಲ್ಲಿದ್ದ ನೂರಾರು ತೆರೆದ ಬಾವಿ, ಕಡಿಮೆ ಅಡಿಯಲ್ಲೇ ನೀರು ಒದಗಿಸುತ್ತಿದ್ದ ಕುಟ್ಟೋ ಅಥವಾ ಮುದ್ದೆ ಬೋರ್ಗಳ ಅವಶೇಷವೂ ಇಲ್ಲವಾಗಿವೆ.

ಈಗ ಅಲ್ಲಿ ಐನೂರು ಅಡಿ ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ತೊರೆ ಗಡ್ಡೆಯ ತೆಂಗು-ಅಡಿಕೆ ತೋಟ ಒಣಗಿವೆ. ಅವುಗಳ ಚಿಂತೆ ಕೈಬಿಟ್ಟ ತೊರೆ ಗಡ್ಡೆಯ ಕೆಲ ರೈತರು ಮರಳು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ.

ಹಳ್ಳ: ತಾಲ್ಲೂಕಿಗೆ ನದಿ ಎನ್ನಿಸಿಕೊಂಡ ಸುವರ್ಣಮುಖಿ ಒಂದೆಯಾದರೂ ಮಳೆಗಾಲದಲ್ಲಿ ಭೋರ್ಗರೆಯುತ್ತ ಹರಿಯುತ್ತಿದ್ದ ದೊಡ್ಡ ಹಳ್ಳಗಳಿಗೆ ಲೆಕ್ಕವಿರಲಿಲ್ಲ. ಬಹುಶಃ ಎಲ್ಲ ಹಳ್ಳಿಗಳ ಸಮೀಪದಲ್ಲೂ ಒಂದೊಂದು ದೊಡ್ಡ ಹಳ್ಳಗಳು ಮಳೆಗಾಲದಲ್ಲಿ ಮರ್ ಎನ್ನುತ್ತಾ ಹರಿಯುತ್ತಿದ್ದವು. ಇಂಥ ಹಳ್ಳಗಳೇ ಬರದ ನಾಡಿಗೆ ಜೀವದ್ರವ್ಯವಾಗಿದ್ದವು. ಅಂದರೆ ತನ್ನ ಒಡಲಲ್ಲಿ ಅಗಾಧ ಮರಳು ತುಂಬಿಕೊಂಡು ಅಂತರ್ಜಲ ಹಿಡಿದಿಟ್ಟಿದ್ದವು. ಆದರೆ ಇಂದು ಮರಳು ದಂಧೆಯಿಂದ ಹಳ್ಳಗಳ ಗುರುತು ಸಿಗದಂತೆ ಅಳಿಸಿ ಹೋಗಿವೆ.

ಜಲಾಶಯ: ಇಡೀ ತಾಲ್ಲೂಕಿನಲ್ಲಿ ಕೆರೆಗಳ ಹೊರತಾಗಿ ಯಾವುದೇ ಕಿರು ಜಲಾಶಯ ಇಲ್ಲ. ಆದರೆ ಇನ್ನೊಂದು ದಿಕ್ಕಿನಿಂದ ಹರಿದು ಬರುವ ಸುವರ್ಣಮುಖಿ ನದಿಗೆ ಅಡ್ಡಲಾಗಿ ಹಿರಿಯೂರು ತಾಲ್ಲೂಕಿನ ಕರಿಯಾಲದ ಬಳಿ ಗಾಯತ್ರಿ ಜಲಾಶಯ ನಿರ್ಮಿಸಲಾಗಿದ್ದು, ಆ ಜಲಾಶಯದ ನೀರು ಶಿರಾ ತಾಲ್ಲೂಕಿನ ಗಡಿಗ್ರಾಮಗಳಾದ ಮೆಳೆಕೋಟೆ, ಉಜ್ಜನಕುಂಟೆ, ಹುಣಸೇಹಳ್ಳಿ, ನಾರಾಯಣಪುರ ಗ್ರಾಮಗಳ ಸುತ್ತಮುತ್ತ ಬರುತ್ತಿತ್ತು. ಆದರೆ ಆ ಜಲಾಶಯ ತುಂಬಿ ದಶಕಗಳೇ ಗತಿಸಿರುವುದರಿಂದ ಇದ್ದ ಅದರ ಕಾಲುವೆಗಳ ಅವಶೇಷವೂ ತಾಲ್ಲೂಕಿನಲ್ಲಿ ಉಳಿದಿಲ್ಲ.

ಆಂಧ್ರ ಗಡಿ: ನೆರೆಯ ಆಂಧ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಗಡಿಯಲ್ಲಿ ಫೀಡರ್ ಚಾನೆಲ್ ನಿರ್ಮಾಣದ ನೆಪದಲ್ಲಿ ಗಡಿಭಾಗದ ಕೆರೆಗಳಿಗೆ ಹರಿದು ಬರುತ್ತಿದ್ದ ಮಳೆ ನೀರಿನ ಪಥಗಳನ್ನು ಬದಲಾಯಿಸಿತು. ಇದರಿಂದ ಮದಲೂರು ಕೆರೆ ಸೇರಿದಂತೆ ಗಡಿ ಗ್ರಾಮದ ಕೆರೆಗಳಿಗೆ ಅನ್ಯಾಯವಾಗಿ ನೀರಿಲ್ಲದಂತಾಯಿತು.

ಮೊದಲಿಗೆ ಕಳ್ಳಂಬೆಳ್ಳ, ನಂತರ ಶಿರಾ ಕೆರೆಗೆ ಹೇಮಾವತಿ ನೀರು ನೈಸರ್ಗಿಕ ಕಾಲುವೆ ಮೂಲಕ ಈಚಿನ ವರ್ಷಗಳಲ್ಲಿ ಹರಿದು ಬರುತ್ತಿದ್ದು, ಸದ್ಯ ನೋಡಲು ಈ ಎರಡು ಕೆರೆಗಳಲ್ಲಿ ಆಗಾಗ್ಗೆ ನೀರು ಕಂಡುಬರುತ್ತದೆ.

ಇದೇ ರೀತಿ ನೈಸರ್ಗಿಕ ಕಾಲುವೆ ಮೂಲಕ ಮದಲೂರು ಕೆರೆಗೂ ಹೇಮಾವತಿ ನೀರು ಹರಿಸಲಾಗುವುದು ಎಂಬ ರಾಜಕಾರಣಿಗಳ ಆಶ್ವಾಸನೆ ಇನ್ನೂ ಈಡೇರಿಲ್ಲ.

ಮದಲೂರು ಕೆರೆ ತುಂಬಿ ವರ್ಷಗಳೇ ಗತಿಸಿವೆ. ಸರ್ಕಾರದ ಹೆಸರಲ್ಲೇ ನಡೆದ ಮರಳು ದಂಧೆಗೆ ಕೆರೆ ಬಲಿಯಾಗಿದೆ. ಕೆರೆ ತುಂಬಿ ಮೊದಲಿನ ವೈಭೋಗ ಯಾವಾಗ ಮರಳುತ್ತದೆ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.