ಬರ್ಲಿನ್ ಒಲಿಂಪಿಕ್ಸ್ (1936)

7

ಬರ್ಲಿನ್ ಒಲಿಂಪಿಕ್ಸ್ (1936)

Published:
Updated:
ಬರ್ಲಿನ್ ಒಲಿಂಪಿಕ್ಸ್ (1936)

ಸರ್ವಾಧಿಕಾರಿ ಹಿಟ್ಲರ್‌ನ ಆಶ್ರಯದಲ್ಲಿ ಈ ಒಲಿಂಪಿಕ್ಸ್ ಕೂಟ ನಡೆಯಿತು. `ಈ ಒಲಿಂಪಿಕ್ಸ್‌ನಲ್ಲಿ ಕಪ್ಪುವರ್ಣೀಯರು ಮತ್ತು ಯಹೂದಿಗಳಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ~ ಎಂದು ಹಿಟ್ಲರ್ ಹೇಳಿದ್ದ. ಆದರೆ ಒಲಿಂಪಿಕ್ ಸಮಿತಿಯು ಕೂಟವನ್ನೇ ರದ್ದುಗೊಳಿಸುವ ಎಚ್ಚರಿಕೆ ನೀಡಿದ ಕಾರಣ ಹಿಟ್ಲರ್ ಸುಮ್ಮನಾಗಿದ್ದ.ಅಮೆರಿಕದ ಕಪ್ಪು ವರ್ಣೀಯ ಅಥ್ಲೀಟ್ ಜೆಸ್ಸಿ ಓವನ್ಸ್ ನಾಲ್ಕು ಚಿನ್ನ ಗೆಲ್ಲುವ ಮೂಲಕ ಬರ್ಲಿನ್‌ನಲ್ಲಿ `ಹೀರೊ~ ಆಗಿ ಮೆರೆದರು. ಈ ಕೂಟದ ಸ್ಪರ್ಧೆಗಳನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಗಿತ್ತು.

 

ಅದೇ ರೀತಿ ಒಲಿಂಪಿಕ್ `ಜ್ಯೋತಿಯ ರಿಲೇ~ ಕೂಡಾ ಮೊದಲ ಬಾರಿಗೆ ನಡೆಯಿತು. ಆತಿಥೇಯ ಜರ್ಮನಿ 33 ಚಿನ್ನಗಳೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 49 ರಾಷ್ಟ್ರಗಳ 3963 ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry