ಶನಿವಾರ, ಮೇ 15, 2021
24 °C

ಬರ ಪರಿಶೀಲನಾ ತಂಡ: ಹೀಗೆ ಬಂದು ಹಾಗೆ ಹೋದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಗೆ ಶುಕ್ರವಾರ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ನೇತೃತ್ವದಲ್ಲಿ ಭೇಟಿ ನೀಡಿದ ಸಚಿವರ ತಂಡ `ಬರ ಪರಿಹಾರ ಕಾಮಗಾರಿ~ಗಳನ್ನು ಮಾತ್ರ ಪರಿಶೀಲಿಸಿತು. ಬರದಲ್ಲಿ ನಲುಗಿದ್ದ ಜನರ ಭಾವನೆ ಅರಿಯುವಲ್ಲಿ ವಿಫಲವಾಯಿತು.ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ತುಂಬಾಡಿ, ವೀರನಗರ, ಬೆಲ್ಲದಮಡು, ದೊಡ್ಡೇರಿ ಗ್ರಾಮಗಳಲ್ಲಿ ಸಚಿವರನ್ನು ಭೇಟಿ ಮಾಡಲು ಜನತೆ ಕಾದು ನಿಂತಿದ್ದರು. ಆದರೆ ಜನಪ್ರತಿನಿಧಿಗಳು ಅವರ ಬಳಿ ಹೋಗಲೇ ಇಲ್ಲ.`ಇವತ್ತು ಮಿನಿಸ್ಟ್ರು ಬರ‌್ತಾರೆ ಅಂತ್ಲೇ ಇರ‌್ಬೇಕು, ಮೊನ್ನೆ ತಾನೆ ಡಿಸಿ- ಎಸಿ ಬಂದು ಪೈಪ್‌ಗಳು ಹಾಕಿಸಿದ್ರು. ಇವ್ರ ಕಣ್ಣಿಗೆ ದೂಳು ಬೀಳ್ಬಾರ‌್ದು ಅಂತ ರಸ್ತೆಗೆಲ್ಲಾ ನೀರು ಹಾಕಿಸಿದ್ದಾರೆ. ನಮ್ಮಂಥವ್ರ ಹತ್ರ ಹೋಗೋಕೂ ಬಿಡಲ್ಲ. ಬೆಂಗಳೂರಿಂದ ಇಲ್ಲೆತನ್ಕ ಎಸಿ ಕಾರಲ್ಲಿ ಬಂದು- ಹೋದ್ರೆ ಯಾರಿಗೇನು ಲಾಭ?~ ಎಂದು ವೀರನಗರದ ಪಿ.ಎನ್.ನಾರಾಯಣಪ್ಪ `ಪ್ರಜಾವಾಣಿ~ ಎದುರು ಅಳಲು ತೋಡಿಕೊಂಡರು.ಬೆಲ್ಲದಮಡು ಗ್ರಾಮದಲ್ಲಿ ಸಚಿವರಿಗಾಗಿ ಕಾದು ನಿಂತಿದ್ದ ಗ್ರಾಮಸ್ಥರು, ಮೇವಿನ ವ್ಯವಸ್ಥೆ ಮಾಡಿ ಜಾನುವಾರುಗಳನ್ನು ಉಳಿಸಿಕೊಡಬೇಕೆಂದು ಅಂಗಲಾಚಿದರು.ಅನೇಕ ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿ ಕೊರೆಸಿದ್ದ ಬೋರ್‌ವೆಲ್‌ಗೆ ಗುರುವಾರವಷ್ಟೇ ಗುತ್ತಿಗೆದಾರರು ರೂ. 1.5 ಲಕ್ಷ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂಬ ನಾಮಫಲಕ ಹಾಕಲಾಗಿದೆ.

ಜನರ ವಿರೋಧಕ್ಕೆ ಹೆದರಿ ರಾತ್ರೋರಾತ್ರಿ ನಾಮಫಲಕ ಕಿತ್ತು ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

 ಈ ಮಾತಿಗೆ ಕಿವಿಗೊಡಲು ಸಚಿವರು ಅಲ್ಲಿರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.