ಶನಿವಾರ, ಮಾರ್ಚ್ 6, 2021
18 °C
ರಾಮಗೊಂಡನಹಳ್ಳಿಯ ಟಿಜೆಡ್‌ ಅಪಾರ್ಟ್‌ಮೆಂಟ್‌

ಬಳಸಿದ ನೀರನ್ನೇ ಶುದ್ಧೀಕರಿಸಿ ಮರುಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳಸಿದ ನೀರನ್ನೇ ಶುದ್ಧೀಕರಿಸಿ ಮರುಬಳಕೆ

ಬೆಂಗಳೂರು: ರಾಮಗೊಂಡನಹಳ್ಳಿಯ ಟಿಜೆಡ್‌ ಅಪಾರ್ಟ್‌ಮೆಂಟ್‌ನ ನಿವಾಸಿ ಗಳು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಹನಿ ನೀರನ್ನು ಸಹ ವ್ಯರ್ಥ ಗೊಳಿಸದೆ ಮರು ಬಳಕೆ ಮಾಡಿ ಮಾದರಿಯಾಗಿದ್ದಾರೆ. ತಾವು ಬಳಸಿದ ನೀರನ್ನೇ ಶುದ್ಧೀಕರಿಸಿ ಕುಡಿಯಲು, ಅಡುಗೆಗೆ, ಸ್ನಾನಕ್ಕೆ ಬಳಸುತ್ತಿದ್ದಾರೆ.೨೦೦೬ ರಲ್ಲಿ ಸ್ಥಾಪನೆ ಗೊಂಡ ಟಿಜೆಡ್‌ ನ ೭೬ ಅಪಾರ್ಟ್‌ ಮೆಂಟ್‌ಗಳ ೫೦೦ಕ್ಕೂ ಹೆಚ್ಚು ನಿವಾಸಿ ಗಳು ಇಂಥ ಪರಿಸರ ಸ್ನೇಹಿ ಬದುಕನ್ನು ಪಾಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಅವರು ಶುಕ್ರವಾರ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ, ‘ನಗರದಲ್ಲಿ ನೂರಾರು ವಸತಿ ಸಮುಚ್ಚಯಗಳಿವೆ.ಎಲ್ಲ ಕಡೆಗಳಲ್ಲೂ ಇಂಥ ಅತ್ಯುತ್ತಮ ವಿಧಾನಗಳನ್ನು ಅಳವಡಿಸಿಕೊಂಡರೆ ನಗರದ ನೀರಿನ ಸಮಸ್ಯೆಗೂ ಪರಿಹಾರ ದೊರಕಲಿದೆ. ತ್ಯಾಜ್ಯವೂ ಇಳಿಕೆಯಾಗುತ್ತದೆ’ ಎಂದರು.ನಾಲ್ಕು ಹಂತಗಳಲ್ಲಿ ಶುದ್ಧೀಕರಣ:

ಟಿಜೆಡ್‌ನ ವ್ಯವಸ್ಥಾಪಕ ನಾರಾಯ ಣಸ್ವಾಮಿ, ‘ಮನೆಗಳಿಂದ ಪ್ರತಿದಿನ ೩೫ ಲೀಟರ್‌ ತ್ಯಾಜ್ಯದ ನೀರು ಸಂಗ್ರಹವಾ ಗುತ್ತಿದೆ. ತ್ಯಾಜ್ಯದ ನೀರನ್ನು ಸಂಸ್ಕರಿಸುವ  ಸಾಂಪ್ರದಾಯಿಕ ವಿಧಾನ ಇಲ್ಲಿ ಮೊದಲೇ ಇತ್ತು. ಈಗ ಅದರೊಂದಿಗೆ ಮರಳು ಮತ್ತು ಇಂಗಾಲದ ಸೋಸುವಿಕೆ ಇರುವ ಓಝೋನೈಸೇಶನ್‌ ಘಟಕವನ್ನು ಸ್ಥಾಪಿಸಲಾಗಿದೆ’ ಎಂದರು.‘ಮರಳು,- ಇಂಗಾಲದ ನ್ಯಾನೋ ಫಿಲ್ಟರ್‌ ಪಾಸ್‌ ಮತ್ತು ಎರಡು ಹಂತ ಗಳ ರಿವರ್ಸ್‌ ಆಸ್ಮೋಸಿಸ್‌ ವಿಧಾನ - ಹೀಗೆ ಒಟ್ಟು ನಾಲ್ಕು ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಇಲ್ಲಿನ ೪ ಲಕ್ಷ ಲೀಟರ್‌ ಸಾಮರ್ಥ್ಯದ ಜಲಸಂಗ್ರಹಾ ಗಾರಕ್ಕೆ ಹರಿಸಲಾಗುತ್ತಿದೆ. ಈ ಜಲಸಂಗ್ರಹಾಗಾರದಲ್ಲಿ ಚಾವಣಿ ನೀರು ಮತ್ತು ಕೊಳವೆ ಬಾವಿ ನೀರು  ಸೇರಿಕೊಳ್ಳುತ್ತದೆ’ ಎಂದು ವಿವರಿಸಿದರು.‘ಪ್ರಯೋಗಗಳ ಮೂಲಕ ನೀರಿನ ಗುಣಮಟ್ಟವನ್ನು ಪರೀಕ್ಷಿಸಿಯೇ ಇಲ್ಲಿ ಅದನ್ನು ಕುಡಿಯಲು ಬಳಸುತ್ತೇವೆ. ಒಂದೂವರೆ ವರ್ಷದಿಂದ ಇಲ್ಲಿನ ನಿವಾಸಿಗಳು ತಾವು ಬಳಸಿದ ನೀರನ್ನೇ ಶುದ್ಧೀಕರಿಸಿ ಕುಡಿಯುವ ಮೂಲಕ ಪರಿಸರ ಪ್ರೀತಿ ಮೆರೆದಿದ್ದಾರೆ. ಈ ಸಂಸ್ಕರಣೆಯಲ್ಲಿ ಹೊರಬರುವ ಶೇ ೨೦ ರಷ್ಟು ತ್ಯಾಜ್ಯ ನೀರನ್ನೂ ಕೊಳವೆಬಾವಿ ಮರುಪೂರಣಕ್ಕೆ ಇಂಗುಗುಂಡಿಗಳಿಗೆ ಹಾಯಿಸಲಾಗುತ್ತದೆ’ ಎಂದರು.‘ಎಲ್ಲ ಮನೆಗಳ ಚಾವಣಿಗಳ ಮೇಲೆ ಶೇ ೭೭ ರಷ್ಟು ಪ್ರದೇಶದಲ್ಲಿ ಹಸಿರು ಬೆಳೆಸಬಹುದು. ಇಡೀ ಪ್ರದೇಶದಲ್ಲಿ ಶೇ ೪೦ರಷ್ಟು ಜಾಗದಲ್ಲಿ ನಿಸರ್ಗದತ್ತ ಭೂಗುಣವನ್ನೇ ಉಳಿಸಿಕೊಳ್ಳಲಾಗಿದೆ. ಲೋ ಫ್ಲಶ್‌ ಶೌಚಾಲಯಗಳು, ಸಂವೇ ದಕಗಳಿರುವ  ಮೂತ್ರಾಲಯಗಳ ಬಳಕೆ ಯಿದೆ. ಹೀಗೆ ಇಲ್ಲಿ ನೀರಿನ ಬಳಕೆಯು ಮೂಲದಲ್ಲಿಯೇ ಶೇ ೨೦ರಷ್ಟು ಕಡಿಮೆ ಯಾಗಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.