ಮಂಗಳವಾರ, ಮೇ 11, 2021
28 °C

ಬಸವಣ್ಣ ಧ್ವನಿ ಇಲ್ಲದವರ ಧ್ವನಿ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣ ಧ್ವನಿ ಇಲ್ಲದವರಿಗೆ ಧ್ವನಿ ನೀಡಿ, ಪರವಾಗಿ ನಿಂತು ಮಾತನಾಡಿದ ಈ ಸಮಾಜದ ಮೊದಲ ಮೂಕನಾಯಕ ಎಂದು ತುಮಕೂರು ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ನಿಯಮಿತ ಸಿಬ್ಬಂದಿ ವರ್ಗ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಮ್ಮಗಳ ಮಧ್ಯೆ ಬದುಕಿದ ಡಾ.ಬಿ.ಆರ್.ಅಂಬೇಡ್ಕರ್ ಸಹ ಕೆಳವರ್ಗದವರ ಧ್ವನಿಯಾಗುವ ಮೂಲಕ ಮೂಕನಾಯಕರಾಗಿದ್ದರು ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಷತ್ ಅಧ್ಯಕ್ಷ ಡಾ.ಡಿ.ಎನ್.ಯೋಗೀಶ್ ಮಾತನಾಡಿ, ಬಸವಣ್ಣ ಸ್ವರ್ಗ- ನರಕಗಳನ್ನು ಅಲ್ಲಗಳೆದು ಬಹುದೈವತ್ವ ಮೂರ್ತಿ ಪೂಜೆ ತಿರಸ್ಕರಿಸಿದ ಆಚಾರಕ್ಕೆ ಪ್ರಾಧಾನ್ಯತೆ ನೀಡಿದರು. ಲಿಂಗಬೇಧ, ವರ್ಣ ಬೇಧ, ವರ್ಗ ಬೇಧಗಳನ್ನು ತಿರಸ್ಕರಿಸದ ಬಸವಣ್ಣ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆ ಮೇಲೆ ಹೊಸ ಸಮಾಜವನ್ನು ಕಟ್ಟಬಯಸಿದರು. ಆದರೆ ಬಸವ ತತ್ವಗಳು ಮಾರ್ಟಿನ್ ಲೂಥರನ ವಿಚಾರಗಳಂತೆ ಅಥವಾ ಫ್ರೆಂಚ್ ಕ್ರಾಂತಿಯ ತತ್ವಗಳಂತೆ ವಿಶ್ವವ್ಯಾಪಿಯಾಗಿ ಹರಡಲಿಲ್ಲ ಎಂದು ವಿಷಾದಿಸಿದರು.ಬೆಸ್ಕಾಂ ಮುಖ್ಯ ಎಂಜಿನಿಯರ್ ಜಿ.ಆರ್.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಸ್ಕಾಂ ಲೆಕ್ಕ ನಿಯಂತ್ರಣಾಧಿಕಾರಿ ಎಚ್.ಓ.ದೇವೇಂದ್ರಪ್ಪ, ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ನಟರಾಜು, ಚನ್ನವೀರಯ್ಯ ಇತರರು ಉಪಸ್ಥಿತರಿದ್ದರು. ಎಂಜಿನಿಯರ್ ಉಮೇಶ್ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.