ಹುಬ್ಬಳ್ಳಿ: `ಉದ್ಯೋಗ ಖಾತರಿಯಂಥ ಯೋಜನೆಗಳು ಬಸವತತ್ವಗಳಿಗೆ ಮಾರಕವಾಗಿ ಪರಿಣಿಮಿಸುತ್ತಿವೆ. ಹೀಗಾಗಿ ಆಳುವವರು ಹಾಗೂ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ~ ಎಂದು ಸಚಿವ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಬಸವ ಜಯಂತಿ ಶತಮಾನೋತ್ಸವ ಸಮಿತಿ, ನಗರದ ಹದಿನೇಳು ಬಸವ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಅನುಭಾವ ಹಾಗೂ ಮೈಸೂರಿನ ನಿರಂತರ ಫೌಂಡೇಷನ್ನ ಕೂಡಲಸಂಗಮ ನೃತ್ಯ ರೂಪಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

`ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದ ನಂತರ ಕೆಲವರು ಕಾಯಕ ಸಂಸ್ಕೃತಿಗೆ ತಿಲಾಂಜಲಿ ಇಟ್ಟಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ನೋಡಿದರೆ ಇದರ ಅರಿವಾಗುತ್ತದೆ. ಕಾಯಕವೇ ಕೈಲಾಸ ಎಂಬ ಮಾತಿಗೆ ವಿರುದ್ಧವಾದ ನಡೆ ಇದು~ ಎಂದು ಅವರು ಹೇಳಿದರು.

`ಕಾಯಕ ಸಂಸ್ಕೃತಿಯನ್ನು ಸಾರಿದ ಬಸವಣ್ಣನ ಜಯಂತಿ ದಿನದಂದು ಸರ್ಕಾರಿ ರಜೆ ಇರುವುದರಿಂದ ಕೆಲಸ ಮಾಡದೆ ಮನೆಯೊಳಗೆ ಕುಳಿತುಕೊಳ್ಳಲು ಅವಕಾಶವಾಗಿದೆ. ಇದನ್ನು ವಿರೋಧಿಸುವವರು ದನಿಯೆತ್ತಿದ ಕೂಡಲೇ ಅನೇಕರು ರಜೆಗೆ ಪೂರಕವಾದ ಹೇಳಿಕೆಗಳನ್ನು ನೀಡಲು ಶುರು ಮಾಡಿದರು. ಇದೆಲ್ಲದರ ಹಿನ್ನೆಲೆಯಲ್ಲಿ ಚಿಂತನೆ ನಡೆಯಬೇಕಾಗಿದೆ~ ಎಂದು ಅವರು ಹೇಳಿದರು.

`ಮೌಢ್ಯವನ್ನು ಬಿಡಬೇಕೆಂದು ಹೇಳಿದ ಬಸವಣ್ಣನ ನಾಡಿನಲ್ಲಿ ಬದುಕುತ್ತಿರುವ ಮಂತ್ರಿಗಳಲ್ಲಿ ಕೆಲವರು ಚಾಮರಾಜನಗರ, ಕಿತ್ತೂರು ಮುಂತಾದ ಪ್ರದೇಶಗಳಿಗೆ ಹೋಗಲು ಹೆದರುತ್ತಾರೆ. ಆ ಮೂಲಕ ಮೌಢ್ಯಕ್ಕೆ ಶರಣಾಗಿದ್ದಾರೆ. ಪ್ರತಿಯೊಂದು ಪ್ರದೇಶಕ್ಕೆ ಹೋದರೆ ಅಲ್ಲಿನ ನಿಜ ಸ್ಥಿತಿ ಗೊತ್ತಾಗುತ್ತದೆ. ನಾನು ಚಾಮರಾಜನಗರಕ್ಕೆ ಹೋದ ಕಾರಣ ಅಲ್ಲಿ ನೀರಿಗೆ ಎಷ್ಟು ತೊಂದರೆ ಇದೆ ಎಂಬುದು ತಿಳಿಯಿತು. ಹೀಗಾಗಿ ಕುಡಿಯುವ ನೀರು ಒದಗಿಸಲು ಯೋಜನೆಯನ್ನು ಹಾಕಿಕೊಂಡಿದ್ದೇನೆ~ ಎಂದು ಅವರು ಹೇಳಿದರು.

`ಬಸವಣ್ಣ ಯಾವ ಜಾತಿಗೂ ಸೇರಿದವರಲ್ಲ. ನಮ್ಮಿಂದಾಗಿ ಅವರು ಜಾತಿಗೆ ಸೀಮಿತಗೊಂಡಿದ್ದಾರೆ. ಬಸವ ಜಯಂತಿ ಆಚರಣೆಗೆ ಸರ್ಕಾರವೇ ಸಮಿತಿಯೊಂದನ್ನು ರಚಿಸಿ ಪ್ರತಿ ಜಿಲ್ಲೆಯಲ್ಲಿ ಜಯಂತಿ ಆಚರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು~ ಎಂದು ಅವರು ಹೇಳಿದರು.

`ಹುಬ್ಬಳ್ಳಿಯ ಬಸವ ಕೇಂದ್ರಕ್ಕೆ ನಿವೇಶನ ನೀಡುವುದಕ್ಕೆ ಬೇಕಾದ ಪ್ರಸ್ತಾವವನ್ನು ಕಳುಹಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ಇದಕ್ಕೆ ಸಂಬಂಧಿಸಿ ಮುಂದಿನ ಕಾರ್ಯವನ್ನು ಕೈಗೊಳ್ಳಬೇಕು~ ಎಂದು ಅವರು ಸೂಚಿಸಿದರು.

ಕರ್ನಾಟಕ ವಿವಿ ಪ್ರಾಧ್ಯಾಪಕಿ ಶಾಂತಾ ಇಮ್ರಾಪುರ ಅನುಭಾವ ಪ್ರಸ್ತುತ ಪಡಿಸಿದರು. ಮೇಯರ್ ಡಾ. ಪಾಂಡುರಂಗ ಪಾಟೀಲ, ಉಪಮೇಯರ್ ಭಾರತಿ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಬಸವ ಜಯಂತಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ಬಿ.ವಿ. ಶಿರೂರ, ರಾಷ್ಟ್ರೀಯ ಬಸವ ದಳದ ಬಸವರಾಜ ಲಿಂಗಶೆಟ್ಟರ, ಬಿ.ಜಿ. ಹೊಸಗೌಡರ, ಪಾಲಿಕೆ ಮಾಜಿ ಸದಸ್ಯ ವೀರಣ್ಣ ಹಂಜಿ ಮತ್ತಿತರರು ಉಪಸ್ಥಿತರಿದ್ದರು.

`ಮಹಿಳೆಯರು `ಅಣ್ಣ~ನಿಗೆ ಋಣಿಯಾಗಿರಬೇಕು~
ಹುಬ್ಬಳ್ಳಿ:`ಅವಕಾಶ ವಂಚಿತ ಮಹಿಳೆಯರಿಗೆ ಹಾಗೂ ಕೆಳವರ್ಗದವರಿಗೆ ಗೌರವ ತಂದುಕೊಟ್ಟ ಬಸವಣ್ಣನಿಗೆ ಮಹಿಳೆಯರು ಋಣಿಯಾಗಿರಬೇಕು~ ಎಂದು ಕರ್ನಾಟಕ ವಿವಿಯ ಪ್ರಾಧ್ಯಾಪಕಿ ಶಾಂತಾ ಇಮ್ರಾಪುರ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಬಸವಜಯಂತಿ ಅನುಭಾವ ಹಾಗೂ ಮೈಸೂರಿನ ನಿರಂತರ ಫೌಂಡೇಷನ್ನ ಕೂಡಲಸಂಗಮ ನೃತ್ಯ ರೂಪಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಅನುಭಾವದ ಕುರಿತು ಮಾತನಾಡಿದರು.

`ಪಟ್ಟಭದ್ರ ಹಿತಾಸಕ್ತಿಗಳು ಮಹಿಳೆಯನ್ನು ದಾಸ್ಯದ ಸ್ಥಿತಿಯಲ್ಲಿರಿಸಿದ್ದರು. ಆಕೆಗೆ ಯಾವುದೇ ಗೌರವವಿರಲಿಲ್ಲ. ಇಂಥ ಸಂದರ್ಭದಲ್ಲಿ ಸಾಮಾಜಿಕ ಕ್ರಾಂತಿಯಲ್ಲಿ ಮಹಿಳೆಯ ವಿಚಾರವನ್ನು ಕೂಡ ಕೈಗೆತ್ತಿಕೊಂಡ ಬಸವಣ್ಣ, ಜಗತ್ತಿನ ಮೊದಲ ಮಹಿಳಾವಾದಿ~ ಎಂದು ಇಮ್ರಾಪುರ ಹೇಳಿದರು.

`ಅರಿವು ಗಳಿಸುವುದು ಹಾಗೂ ಅದರ ಅನುಸಂಧಾನ ಮಾಡುವುದು ಬಸವಣ್ಣನ ದೊಡ್ಡ ತತ್ವ. ಮೌಢ್ಯ ತುಂಬಿದ ಸಮಾಜದಲ್ಲಿ ಮಾನವೀಯತೆ ದೂರವಾಗಿದ್ದ ಸಂದರ್ಭದಲ್ಲಿ ಪ್ರೇಮದ ಸಂದೇಶ ನೀಡಿದ ಬಸವಣ್ಣ ಎಲ್ಲ ಶಕ್ತಿ ಹಾಗೂ ಚೈತನ್ಯಗಳ ಕೂಡಲಸಂಗಮ. ಅಣ್ಣನ ತತ್ವಗಳಿಗೆ ಬದ್ಧವಾಗಿ ಗುಣ ಹಾಗೂ ಸಾಧನೆಯಿಂದ ವ್ಯಕ್ತಿಯನ್ನು ಅಳೆಯುವ ಸಮಾಜ ಇಂದು ಅಗತ್ಯ~ ಎಂದು ಅವರು ಹೇಳಿದರು.

`ಬಸವಣ್ಣ ಸಮಾಜ ಸುಧಾರಕ. ಉತ್ತಮ ಚಿಂತಕ, ಆರ್ಥಿಕ ತಜ್ಞ, ಸ್ತ್ರೀಪರ ಹಾಗೂ ಜೀವಪರ ವ್ಯಕ್ತಿಯಾಗಿದ್ದರು, ದೊಡ್ಡ ಮಾನವತಾವಾದಿಯಾಗಿ ಬೆಳಗಿದರು. ಆ ಮೂಲಕ ಪ್ರೀತಿಯ ಸುಭದ್ರ ಸೇತುವೆಯನ್ನು ನಿರ್ಮಿಸಿದರು~ ಎಂದು ಅವರು ಹೇಳಿದರು.

`ದುಡಿಯಲು ಹಚ್ಚದ ಸರ್ಕಾರ~
ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರನ್ನು ದುಡಿಮೆಯಿಂದ ದೂರ ಮಾಡುತ್ತಿದೆ. ದುಡಿಯಲು ಕಲಿಸದ, ಕೆಲಸಕ್ಕೆ ಹಚ್ಚದ ಸರ್ಕಾರಗಳಿಂದಾಗಿ ಜನರು ಸೋಮಾರಿಗಳಾ ಗುತ್ತಿದ್ದಾರೆ ಎಂದು ಹೇಳಿದ ಇಮ್ರಾಪುರ, ಸರ್ಕಾರದ ದಾನ-ದಯೆ ಇಲ್ಲದಾಗ ರೈತರು ಕೆಲಸ ಮಾಡುತ್ತ ಅಭಿಮಾನದಿಂದ ಬಾಳುತ್ತಿದ್ದರು. ಈಗ ಅವರನ್ನು ಶ್ರಮ ಸಂಸ್ಕೃತಿಯಿಂದ ದೂರ ಮಾಡಲಾಗುತ್ತದೆ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಡಾ. ಪಾಂಡುರಂಗ ಪಾಟೀಲ, ಬಸವನ ದಾರ್ಶನಿಕತೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ, ಬಸವಣ್ಣನನ್ನು ದೇವರಾಗಿ ಪೂಜಿಸುವವರು ಅವರ ತತ್ವ ಪಾಲನೆಗೆ ಮುಂದಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.