ಮಂಗಳವಾರ, ಮೇ 11, 2021
25 °C

ಬಸವ ಪಥದಿಂದ ಮಠಾಧೀಶರ ವಿಮುಖ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಲಿಂಗಾಯತರು ಎನಿಸಿಕೊಳ್ಳುವ ಮಠಾಧೀಶರು ಸಹ ಬಸವಪಥದಿಂದ ವಿಮುಖರಾಗುತ್ತಿರುವುದು ವಿಷಾದ ನೀಯ ಎಂದು ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಆತಂಕ ವ್ಯಕ್ತಪಡಿ ಸಿದರು.



ಗದುಗಿನ ತೋಂಟದಾರ್ಯ ಮಠ ದಲ್ಲಿ ಜಾತ್ರಾ ಮಹೋತ್ಸವದ ಅಂಗ ವಾಗಿ ಸೋಮವಾರ ನಡೆದ ಸಂಮಾನ ಹಾಗೂ ಬಹುಮಾನ ವಿತರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.



ಉತ್ತರಕರ್ನಾಟಕದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವೀರಶೈವ ಮಠಗಳಿದ್ದರೂ ಜಾತೀಯತೆ ಇನ್ನೂ ತಾಂಡವಾಡುತ್ತಿದೆ. ಇದಕ್ಕೆ ಕಾರಣ ಮಠಾಧೀಶರು ಸಹ ಬಸವತತ್ವವನ್ನು ಮರೆತಿರುವುದು. ಅಲ್ಲದೇ ವಿವಿಧ ಮಠಾಧೀಶರು ರಾಜ ಕಾರಣಿಗಳನ್ನು ಬೆಂಬಲಿಸುತ್ತಾ ಅವರು ಮಾಡುವ ತಪ್ಪುಗಳನ್ನು ಖಂಡಿಸದೇ ಮುಚ್ಚಿ ಹಾಕುತ್ತಿರುವುದು ಸಹ ಖಂಡನೀಯ ಎಂದರು.



ಬಸವತತ್ವವು ಅಂಬೇಡ್ಕರ ತತ್ವದಂತೆ ವಿಶ್ವದೆಲ್ಲೆಡೆ ಪಸರಿಸದೆ ಇರುವುದಕ್ಕೆ ಕಾರಣವೆಂದರೆ ವಚನಗಳು ಹೆಚ್ಚಾಗಿ ಇಂಗ್ಲಿಷ್‌ಗೆ ಅನುವಾದಗೊಳದೆ ಇರು ವುದು. ಇದರಿಂದಾಗಿ ಬಸವಣ್ಣನ ತತ್ವವು ಕರ್ನಾಟಕದ ಗಡಿಯನ್ನು ಬಿಟ್ಟು ಹೊರಗಡೆ ಸರಿಯಾಗಿ ತಲುಪಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ಅನು ಷ್ಠಾನಗೊಳ್ಳಬೇಕಾಗಿದೆ ಎಂದರು. 



ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶಕುಮಾರ, ನೀಲಮ್ಮ ಮಲ್ಲಿ ಕಾರ್ಜುನ ಕೋಣನವರ ಅವರನ್ನು ಸನ್ಮಾನಿಸಲಾಯಿತು.



ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಇಳಕಲ್ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ, ನಾಗನಸೂರಿನ ರೇವಣಸಿದ್ಧ ಸ್ವಾಮೀಜಿ, ಪಾಂಡವ ಮಟ್ಟಿಯ ಗುರುಬಸವ ಸ್ವಾಮೀಜಿ, ಶಿರೂರಿನ ಬಸವಲಿಂಗ ಸ್ವಾಮೀಜಿ, ಮರಬದ ಶಿವಬಸವ ಸ್ವಾಮೀಜಿ, ಗುರುಬಸಯ್ಯ ದೇವರು, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಡಾ.ವಿ.ಎಸ್. ಜಕ್ಕಣ್ಣನವರ, ಡಾ. ಸಿ.ಎಸ್. ರಾಮ ಚಂದ್ರ, ಡಾ. ವಿ.ಜಿ. ಬಂಡಿ, ಡಾ. ಎಸ್. ಜಿ. ಕೋನಾಪೂರ, ಮತ್ತಿತರರು ಹಾಜ ರಿದ್ದರು. ಮೃತ್ಯುಂಜಯ ಹಿರೇಮಠ ಪ್ರಾರ್ಥಿಸಿದರು. ಪ್ರೊ. ಕೆ.ಎಚ್. ಬೇಲೂರ ಸ್ವಾಗತಿಸಿದರು. ಐ.ಕೆ. ಕಮ್ಮೋರ ಪ್ರಾಸ್ತಾವಿಕ ನುಡಿ ಆಡಿದರು. ಎಂ.ಎಸ್. ಪಾಟೀಲ ವಂದಿಸಿದರು. ಜಿ.ಪಿ.ಕಟ್ಟಿ ಮನಿ, ಗೀತಾಂಜಲಿ ಮೆಣಸಿನಕಾಯಿ ನಿರೂಪಿಸಿ ದರು.



ರೂಪಕ: ಇಲಕಲ್‌ನ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ  ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ನೌಕರ ವರ್ಗದವರು ಕೂಡಿ ಕೊಂಡು ಅಭಿನಯ ನೀಡಿದ ~ಮಹಾಂತ ಜೋಳಿಗೆ~ ರೂಪಕವು ಜನಮನಸೂರೆ ಗೊಂಡಿತು. ಮಹಾಂತ ಸ್ವಾಮೀಜಿ ರೂಪಕವನ್ನು ರಚಿಸಿದ್ದು, ರಂಗಕರ್ಮಿ- ಚಲನಚಿತ್ರ ನಟ ಅಶೋಕ ಬಾದರದಿನ್ನಿ  ನಿರ್ದೇಶನ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.