ಕೆಂಪೇಗೌಡ ಬಸ್ ನಿಲ್ದಾಣದಿಂದ ಜೆ. ಪಿ. ನಗರಕ್ಕೆ ಹೋಗುವ 2, 2 ಎ, 2 ಇ ಬಸ್ಸುಗಳು ಮೊದಲು ಸೌತ್ ಎಂಡ್ ವೃತ್ತದ ಮಾರ್ಗವಾಗಿ ನಂದಾ ಬಸ್ಸ್ಟಾಪಿನಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ 4ನೇ ಬ್ಲಾಕ್ಗೆ ಹೋಗುತ್ತಿತ್ತು. ಆದರೆ ಇತ್ತೀಚೆಗೆ ಈ ಮಾರ್ಗ ಬದಲಿಸಿ ಸೌತ್ ಎಂಡ್ ವೃತ್ತದಿಂದಲೇ ಎಡಕ್ಕೆ ತಿರುಗಿ 3ನೇ ಬ್ಲಾಕ್ ಮೂಲಕ 4ನೇ ಬ್ಲಾಕ್ಗೆ ಹೋಗುತ್ತಿರುವುದರಿಂದ ಹಾಗೂ ಬಸ್ ನಂಬರ್ ಪ್ಲೇಟನ್ನು ಮೇಲೆ ಹಾಕುವ ಬದಲು ಕೆಳಗೆ ಹಾಕಿರುವುದರಿಂದ ಬಸ್ ನಂಬರ್ ಸರಿಯಾಗಿ ತಿಳಿಯುವುದಿಲ್ಲ.

ಆದ್ದರಿಂದ ನಂದಾ ಬಸ್ಸ್ಟಾಪಿನ ಸಮೀಪದ ಪ್ರಯಾಣಿಕರಿಗೆ ಅದರಲ್ಲೂ ವಯಸ್ಸಾದವರು ಮತ್ತು ಮಹಿಳೆಯರಿಗೆ 4ನೇ ಬ್ಲಾಕಿಗೆ ಹೋಗುವುದಕ್ಕೆ ಬಸ್ಸಿಲ್ಲದೆ ತುಂಬಾ ತೊಂದರೆಯಾಗಿದೆ. ಆದ ಪ್ರಯುಕ್ತ ದಯವಿಟ್ಟು ಸಾರಿಗೆ ಅಧಿಕಾರಿಗಳು ಮೇಲ್ಕಂಡ ಬಸ್ಸುಗಳನ್ನು ಸೌತ್ ಎಂಡ್ ವೃತ್ತದಿಂದ ನೇರವಾಗಿ ಹೋಗಿ ನಂದಾ ಸ್ಟಾಪ್ ಮುಖಾಂತರ ಮೊದಲಿನಂತೆ ಹೋಗಲು ಅವಕಾಶ ಮಾಡಿಕೊಟ್ಟು ಅಲ್ಲಿರುವ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
- ಲಕ್ಷ್ಮೀಪತಿ ಮಾವಳ್ಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.