ಬುಧವಾರ, ಜೂನ್ 16, 2021
23 °C
ಯುವತಿ ಜತೆ ಅನುಚಿತ ವರ್ತನೆ

ಬಸ್‌ ಚಾಲಕ ಸೇರಿ ಮೂವರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಉತ್ತರಪ್ರದೇಶ  ಮೂಲದ  ಯುವತಿಯೊಂದಿಗೆ  ಅನು ಚಿತವಾಗಿ  ವರ್ತಿಸಿದ  ಆರೋಪ ಎದು  ರಿಸುತ್ತಿರುವ  ಬಿಎಂ ಟಿಸಿ ಬಸ್‌ ಚಾಲಕ ಸಿದ್ದಾರ್ಥ್‌ ಸೇರಿ­ದಂತೆ ಮೂರು ಮಂದಿಯನ್ನು ಸೇವೆ­ಯಿಂದ ಅಮಾನತು ಮಾಡಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.‘ಪ್ರಕರಣ ಸಂಬಂಧ ಚಾಲಕ ಸಿದ್ದಾರ್ಥ್‌, ಪೀಣ್ಯ ಡಿಪೊ ಸಂಚಾರ ನಿರೀಕ್ಷಕ ಪುಟ್ಟರಾಜು ಮತ್ತು ಕೆಂಪೇ­ಗೌಡ ಬಸ್‌ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ಪರ ಮೇಶ್ವ­ರಯ್ಯ ಅವರನ್ನು ಅಮಾನತು ಮಾಡ­ಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾ­ಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ದಾರ್ಥ್‌ನ ದುರ್ವತನೆಯಿಂದ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಯ ಉತ್ತರ ವಿಭಾ ಗೀಯ ನಿಯಂತ್ರಣಾಧಿಕಾರಿ ಅವ ರಿಂದ ಇಲಾಖಾ ತನಿಖೆ ಮಾಡಿ ಸಲಾಗುತ್ತಿದೆ’ ಎಂದು ಹೇಳಿದ್ದಾರೆ.‘ಘಟನಾ ದಿನವಾದ ಮಾ. 13ರಂದು ಮಧ್ಯಾಹ್ನ 2 ಗಂಟೆಗೆ ಸಿದ್ದಾರ್ಥ್‌ ಡಿಪೊದಿಂದ ಬಸ್‌ ತೆಗೆದುಕೊಂಡು ಹೋಗಿದ್ದ. ರಾತ್ರಿ 10 ಗಂಟೆಗೆ ಆತನ  ಪಾಳಿಯ ಅವಧಿ ಕೊನೆಗೊಳ್ಳಬೇಕಿತ್ತು. ಆದರೆ, ರಾತ್ರಿ 12.15ಕ್ಕೆ ಮೆಜೆಸ್ಟಿಕ್‌ನಿಂದ ಬನ­ಶಂಕರಿ ಮಾರ್ಗವಾಗಿ ಕುಮಾರ ಸ್ವಾಮಿ ಲೇಔಟ್‌ಗೆ ಹೋಗಬೇಕಿದ್ದ ಬೇರೊಂದು ಬಸ್‌ ಅನಿವಾರ್ಯ ಕಾರಣದಿಂದ ಬರಲಿಲ್ಲ. ಈ ವೇಳೆ ಬನಶಂಕರಿ ಕಡೆಗೆ ಹೋಗಲು ಸುಮಾರು 45 ಮಂದಿ ಪ್ರಯಾಣಿ ಕರು ಮೆಜೆಸ್ಟಿಕ್‌ನಲ್ಲಿ ಕಾಯುತ್ತಿದ್ದರು.ಹೀಗಾಗಿ ಪರ ಮೇಶ್ವರಯ್ಯ ಅವರು ಸಿದ್ದಾರ್ಥ್‌ನ ಕೆಲಸದ ಅವಧಿ ಮುಗಿದಿದ್ದರೂ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವಂತೆ ಸೂಚಿಸಿ ಆತ ನನ್ನು ಆ ಮಾರ್ಗಕ್ಕೆ ಕಳುಹಿ ಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪಾಳಿಯ ಬಸ್‌ಗಳಿಗೆ ಚಾಲಕರ ಜತೆ ಕಡ್ಡಾಯ ವಾಗಿ ನಿರ್ವಾಹಕರನ್ನು ಕಳುಹಿಸ ಬೇಕೆಂದು 2013ರ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ಆ ಆದೇಶವನ್ನು ಪಾಲಿಸದ ಪರಮೇ ಶ್ವರಯ್ಯ ಅವರು ನಿರ್ವಾಹಕನಿಲ್ಲದೆ ಚಾಲಕ ಸಿದ್ದಾರ್ಥ್‌ನನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಪರ್ವೇಜ್‌ ತಿಳಿಸಿದ್ದಾರೆ.

ಹಿಂದೆಯೂ ದೂರು

‘ಸಿದ್ದಾರ್ಥ್‌ ಈ ಹಿಂದೆ ನಿರ್ವಾ ಹಕಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದ. ಈ ಸಂಬಂಧ ನಿರ್ವಾ ಹಕಿ ದೂರು ನೀಡಿದ್ದರು. ಆ ದೂರು ಆಧರಿಸಿ ಆತನ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸ ಲಾಗಿತ್ತು. ಆದರೆ, ತನಿಖೆ ಆರಂಭಿ ಸುತ್ತಿದ್ದಂತೆ ನಿರ್ವಾಹಕಿ ದೂರು ಹಿಂಪಡೆದಿದ್ದರು. ಇದರಿಂದಾಗಿ ಇಲಾಖಾ ತನಿಖೆಯನ್ನು ಕೈಬಿಡ ಲಾಗಿತ್ತು. ಇದೀಗ ಆ ಪ್ರಕರಣದ ಬಗ್ಗೆಯೂ ತನಿಖೆ ಮಾಡಲಾ­ಗುತ್ತದೆ’ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಸಿದ್ದಾರ್ಥ್‌ 2008ರಲ್ಲಿ ಸಂಸ್ಥೆಗೆ ಸೇರಿದ್ದ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.