ಸೋಮವಾರ, ಮೇ 23, 2022
25 °C

ಬಸ್ ನಿಲ್ದಾಣವನ್ನು ಪ್ರಾರಂಭಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಶಂಕರಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯವು ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಪ್ರಾರಂಭವಾಗಿಲ್ಲ. ಪ್ರಯಾಣಿಕರು ಮಳೆಯಲ್ಲಿ, ಬಿಸಿಲಲ್ಲಿ, ಸೂರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಲ್ದಾಣವನ್ನು ಆದಷ್ಟು ಶೀಘ್ರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಸಂಬಂಧಿಸಿದವರಲ್ಲಿ ವಿನಂತಿ.

-ಎಸ್. ಗುರುದತ್ತರಾವ್ಫುಟ್‌ಪಾತ್ ಅವಸ್ಥೆ

ಮಹಾಲಕ್ಷ್ಮಿ ಲೇಔಟ್‌ಗೆ ಸೇರಿದ ಡಾ. ಮೋದಿ ಕಣ್ಣಾಸ್ಪತ್ರೆ ರಸ್ತೆಯಲ್ಲಿರುವ ಫುಟ್‌ಪಾತನ್ನು ನೋಡಿದರೆ ಯಾರಿಗಾದರೂ ಗಾಬರಿ ಉಂಟಾಗುತ್ತದೆ. ಇವುಗಳ ಮೇಲೆ ಕಾಲೂರಲು ಎರಡು ಸಲ ಯೋಚಿಸಬೇಕು, ಸಂಬಂಧಪಟ್ಟವರು ಇದರ ದುರಸ್ಥಿಗೆ ಕ್ರಮ ಕೈಗೊಳ್ಳುವುದು ಅಗತ್ಯ.

 

ಅಲ್ಲದೆ ಇದೇ ರಸ್ತೆಯಲ್ಲಿರುವ ಬಸ್ ತಂಗು ನಿಲ್ದಾಣಗಳಲ್ಲಿ ಕುಳಿತುಕೊಳ್ಳುವ ಸುಸಜ್ಜಿತ ಆಸನಗಳು ಇದ್ದವು. ಆದರೆ ಈಗ ಅವುಗಳು ಮಾಯವಾಗಿ ವೃದ್ಧ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದುದರಿಂದ ಸಂಬಂಧಪಟ್ಟವರು ಇದನ್ನು ಸರಿಪಡಿಸಬೇಕೆಂದು ವಿನಂತಿ.

-ಎಚ್.ಡಿ. ಲಕ್ಷ್ಮೀನಾರಾಯಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.