ಶನಿವಾರ, ಜೂನ್ 12, 2021
24 °C

ಬಹಿರಂಗಗೊಂಡದ್ದು ಸಿಎಜಿ ವರದಿಯೇ ಅಲ್ಲ: ಪ್ರಣವ್ ಮುಖರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾದ ಶೇಕಡಾ 90ರಷ್ಟು ವಿಷಯಗಳನ್ನು ಆರಂಭದ ಹಂತದಲ್ಲೇ ಕೈಬಿಡಲಾಗಿದೆ ಎಂಬುದಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿಕೆ ನೀಡುವುದರೊಂದಿಗೆ ಕಲ್ಲಿದ್ದಲು ಗಣಿ ಹಂಚಿಕೆಗೆ ಸಂಬಂಧಿಸಿದ ಭಾರತದ ಮಹಾ ಲೇಖಪಾಲ (ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ - ಸಿಎಜಿ) ವರದಿಯ ಕರಡು ಪ್ರತಿ ವಿಚಾರವನ್ನು ಸರ್ಕಾರ ಶನಿವಾರ ಗೌಣಗೊಳಿಸಿತು.~ಸಚಿವಾಲಯಗಳಿಂದ ಟಿಪ್ಪಣಿ ಪಡೆದ ಬಳಿಕ, ಮಹಾಲೇಖಪಾಲ ವರದಿಯಲ್ಲಿ ಪ್ರಸ್ತಾಪಿಸಲಾದ ಶೇಕಡಾ 90ರಷ್ಟು ವಿಷಯಗಳನ್ನು ಕೈಬಿಡಲಾಗಿದೆ. ಇದು ಕಳೆದ 150 ವರ್ಷಗಳಿಂದ ಅನುಸರಿಸಲಾಗುತ್ತಿರುವ ಸಾಮಾನ್ಯ ವಿಧಾನ~ ಎಂದು ಹಣಕಾಸು ಸಚಿವರು ಇಲ್ಲಿನ ನಡೆದ ಫಿಕ್ಕಿ ಸಭೆಯೊಂದರಲ್ಲಿ ತಿಳಿಸಿದರು.~ಮಹಾಲೇಖಪಾಲವು ಬ್ರಿಟಿಷರ ಕಾಲದಲ್ಲೇ ರೂಪಿಸಲಾದ ಸಾಂವಿಧಾನಿಕ ಸಂಸ್ಥೆ. ಸರ್ಕಾರದ ತಪ್ಪುಗಳನ್ನು ಪತ್ತೆ ಹಚ್ಚುವುದೇ ಇದರ ಕೆಲಸ~ ಎಂದು ಮುಖರ್ಜಿ ನುಡಿದರು.~ಸರ್ಕಾರದ ತಪ್ಪುಗಳನ್ನು ಪತ್ತೆ ಹಚ್ಚುವುದೇ ಮಹಾಲೇಖಪಾಲದ ಕೆಲಸ ಹೊರತು ಸರ್ಕಾರವು ಒಳ್ಳೆಯ ಕೆಲಸ ಮಾಡುತ್ತಿದೆ ಎಂಬುದಾಗಿ ಪ್ರಮಾಣ ಪತ್ರ ನೀಡುವುದು ಅದರ ಕೆಲಸವಲ್ಲ ಎಂದು ಸಾರಿ ಹೇಳಿದ್ದೇನೆ. ಯಾಕೆ .. ಅನಗತ್ಯವಾಗಿ ಇದನ್ನು ಉದ್ರೇಕಿಸಲಾಗುತ್ತಿದೆ?~ ಎಂದು ಪ್ರಶ್ನಿಸಿದ ಪ್ರಣವ್, ~ಮಹಾಲೇಖಪಾಲ ವರದಿಯಲ್ಲಿ ಅಕ್ರಮಗಳ ವಿಚಾರ ಬಂದರೆ ಹೊಸದೇನಿದೆ? ಇವುಗಳನ್ನು ಸಂಸತ್ತು ನೋಡಿಕೊಳ್ಳುತ್ತದೆ~ ಎಂದು ಹೇಳಿದರು.ಮಹಾಲೇಖಪಾಲ ಕರಡು ವರದಿಯನ್ನು ಉಲ್ಲೇಖಿಸಿದ ಹಣಕಾಸು ಸಚಿವರು ~ಕೆಲವು ಪತ್ರಿಕೆಗಳು ಕಲ್ಲಿದ್ದಲು ಗಣಿ ಹಂಚಿಕೆಯ ಪರಿಣಾಮವಾಗಿ ಸರ್ಕಾರಿ ಬೊಕ್ಕಸಕ್ಕೆ 10 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂಬುದಾಗಿ ಕೆಲವು ಪತ್ರಿಕೆಗಳು ವರದಿ ಮಾಡಿವೆ. ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ಪತ್ರಿಕೆಯಲ್ಲಿ ಬಂದ ವರದಿ ದಾರಿತಪ್ಪಿಸುವಂತಹುದು ಎಂಬುದಾಗಿ ಮಹಾಲೇಖಪಾಲರು ಬರೆದ ಸ್ಪಷ್ಟನೆಯ ಪತ್ರವನ್ನೂ  ಪ್ರಧಾನ ಮಂತ್ರಿಗಳ ಸಚಿವಾಲಯ ಬಿಡುಗಡೆ ಮಾಡಿದೆ~ ಎಂದು ವಿವರಿಸಿದರು.ಮಹಾಲೇಖಪಾಲ ವರದಿಗಳನ್ನು ತರಿಸಿಕೊಂಡು ಪರಾಮರ್ಶಿಸಬೇಕಾದ್ದು ಸಂಸತ್ತಿನ ಕೆಲಸ. ವಾಸ್ತವಾಂಶ ಏನೆಂದರೆ ಅದು ವರದಿಯೇ ಅಲ್ಲ, ಮಹಾಲೇಖಪಾಲ ಇನ್ನೂ ತನ್ನ ವರದಿಯನ್ನು ಅಂತಿಮಗೊಳಿಸಿಯೇ ಇಲ್ಲ ಎಂದು ಮುಖರ್ಜಿ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.