ಭಾನುವಾರ, ಮಾರ್ಚ್ 7, 2021
28 °C

ಬಹುಭಾಷಾ ನಟಿ ಜ್ಯೋತಿಲಕ್ಷ್ಮಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಭಾಷಾ ನಟಿ ಜ್ಯೋತಿಲಕ್ಷ್ಮಿ ನಿಧನ

ಚೆನ್ನೈ (ಪಿಟಿಐ): ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ  ನಟಿ ಜ್ಯೋತಿಲಕ್ಷ್ಮಿ    (63) ಸೋಮವಾರ ತಡ ರಾತ್ರಿ  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.   ಅವರು ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 70 ಮತ್ತು 80ರ ದಶಕದಲ್ಲಿ  ಜ್ಯೋತಿಲಕ್ಷ್ಮಿ ನಾಯಕಿಯಾಗಿ ಹಾಗೂ ಕ್ಯಾಬರೆ ಡ್ಯಾನ್ಸರ್‌  ಆಗಿ ಜನಪ್ರಿಯವಾಗಿದ್ದರು.ದ್ವಾರಕೀಶ್‌ ಅಭಿನಯದ ‘ಕುಳ್ಳ ಏಜೆಂಟ್ 000’ ‘ಬೆಂಗಳೂರು ಮೇಲ್‌’ ಮತ್ತು ‘ರಕ್ತಕಣ್ಣೀರು’ ಸೇರಿದಂತೆ ಹಲವು ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿ ನಟಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.