ಬೆಂಗಳೂರು: ಚಿಕ್ಕಪೇಟೆಯ ಬಟ್ಟೆ ಅಂಗಡಿಯಲ್ಲಿ ₨ 13 ಲಕ್ಷ ನಗದು ಕಳವು ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಭಾರತ–ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಪ್ರಸನ್ಜೀತ್ ದಾಸ್ (24) ಹಾಗೂ ಅನೀಕ್ (23) ಬಂಧಿತರು. ಆರೋಪಿಗಳು, ಚಿಕ್ಕಪೇಟೆ ಮುಖ್ಯರಸ್ತೆಯಲ್ಲಿರುವ ‘ನಾಕೋಡ ಟೆಕ್ಸ್ಟೈಲ್ಸ್’ ಎಂಬ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಫೆ.9ರಂದು (ಭಾನುವಾರ) ಮಧ್ಯಾಹ್ನದವರೆಗೆ ವಹಿವಾಟು ನಡೆಸಿದ ಮಾಲೀಕರು, ನಂತರ ಅಂಗಡಿ ಬಾಗಿಲು ಹಾಕುವಂತೆ ಕೆಲಸಗಾರರಿಗೆ ಹೇಳಿ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು, ಗಲ್ಲಾ ಪೆಟ್ಟಿಗೆಯಲ್ಲಿದ್ದ ₨ 13 ಲಕ್ಷ ಹಣ ದೋಚಿ ಪರಾರಿಯಾಗಿದ್ದರು.

ಮರುದಿನ ಬೆಳಿಗ್ಗೆ ಅಂಗಡಿಗೆ ಬಂದ ಮಾಲೀಕರು, ಬಾಗಿಲು ತೆರೆದು ಗಲ್ಲಾ ಪೆಟ್ಟಿಗೆಯನ್ನು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ವೇಳೆಗಾಗಲೇ ಪ್ರಸನ್ಜೀತ್ ಹಾಗೂ ಅನೀಕ್ನ ಮೊಬೈಲ್ಗಳು ಸ್ವಿಚ್ ಆಫ್ ಆಗಿದ್ದವು. ನಂತರ ಅವರು ಚಿಕ್ಕಪೇಟೆ ಠಾಣೆಗೆ ದೂರು ಕೊಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಯಿತು. ಅವರಿಬ್ಬರೂ ನಗರದ ಕೆಂಪಾಪುರ ಅಗ್ರಹಾರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು ಎಂಬ ಮಾಹಿತಿ ಸಂಗ್ರಹಿಸಿದ ತನಿಖಾ ತಂಡ, ಅಲ್ಲಿಗೆ ತೆರಳಿ ಮನೆ ಮಾಲೀಕರನ್ನು ವಿಚಾರಣೆ ನಡೆಸಿದರೂ ಅವರ ಮೂಲ ವಿಳಾಸ ಪತ್ತೆಯಾಗಲಿಲ್ಲ.

ಆದರೆ, ಆರೋಪಿ ಅನೀಕ್ನ ಅಣ್ಣ ಒಂದು ವರ್ಷದ ಹಿಂದೆ ಅದೇ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿ ಸಿಕ್ಕಿತು. ನಗರದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು ಸಂಪರ್ಕಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಪಶ್ಚಿಮ ಬಂಗಾಳ ಜಿಲ್ಲೆ, ಕೂಚ್ ಬಿಹಾರ್ ಜಿಲ್ಲೆಯ ಸಿತಾಯ್ನಗರ್ ಗ್ರಾಮದವರು ಎಂದು ಗೊತ್ತಾಯಿತು. ಕೂಡಲೇ ಅಲ್ಲಿಗೆ ತೆರಳಿದ ಸಿಬ್ಬಂದಿ, ಫೆ.17ರ ರಾತ್ರಿ ಅವರನ್ನು ಬಂಧಿಸಿದರು. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗಾಗಿ ನಗರಕ್ಕೆ ಕರೆತಂದಿದ್ದಾರೆ.

ಬಂಧಿತರಿಂದ ₨ 13 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳವು ಮಾಡಿದ್ದಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ. ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.