ಗುರುವಾರ , ಜೂಲೈ 2, 2020
22 °C

ಬಾಚಿಹಲ್ಲಿನ ಕ್ಯಾಪಿಬರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಚಿಹಲ್ಲಿನ ಕ್ಯಾಪಿಬರಾ

ಬಾಚಿ ಹಲ್ಲು ಇರುವ ವಿಶ್ವದ ದೊಡ್ಡ ಪ್ರಾಣಿ ಕ್ಯಾಪಿಬರಾ. ಇದು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ  ಪ್ರಾಣಿ. ಗಿನಿ ಹಂದಿಗಳ ಸಂಬಂಧಿ ಎನಿಸಿಕೊಂಡರೂ ಶುದ್ಧ ಸಸ್ಯಾಹಾರಿ.1.22 ಮೀಟರ್ ಎತ್ತರ ಮತ್ತು 65 ಕೆ.ಜಿ ತೂಕ ಇರುವ ಕ್ಯಾಪಿಬರಾಗಳು ಹುಲ್ಲು, ಗಿಡ, ಹಣ್ಣು, ಮರದ ತೊಗಟೆಗಳನ್ನು ತಿನ್ನುತ್ತವೆ. ವಯಸ್ಕ ಕ್ಯಾಪಿಬಾರಾಗಳು ದಿನಕ್ಕೆ ಮೂರೂವರೆ ಕಿಲೋ ಹುಲ್ಲು ತಿನ್ನುತ್ತವೆ. ಕೆಂಪು ಹಳದಿ ಕೂದಲ ನಿರುಪದ್ರವಿ ಕ್ಯಾಪಿಬರಾಗಳಿಗೆ ಬಾಲ ಇರುವುದಿಲ್ಲ.

 

20 ಬಾಚಿ ಹಲ್ಲುಗಳ ಕ್ಯಾಪಿಬರಾದ ಹಿಂದಿನ ಕಾಲುಗಳು ಮುಂದಿನವಕ್ಕಿಂತ ಕೊಂಚ ಎತ್ತರ ಇರುತ್ತದೆ. ಹೆಣ್ಣು ಗಂಡಿಗಿಂತ ಕೊಂಚ ಹೆಚ್ಚು ತೂಕ ಇರುತ್ತದೆ. ಆಯ್ದ ಸಸ್ಯಗಳನ್ನು ಮಾತ್ರ ಸೇವಿಸುವ ಇವುಗಳ ಮಾಂಸಕ್ಕೆ ದಕ್ಷಿಣ ಅಮೆರಿಕ ಮತ್ತು ವೆನಿಜುವೆಲಾದಲ್ಲಿ ಭಾರಿ ಬೇಡಿಕೆ ಇದೆ. ಅದೇ ಇವಕ್ಕೆ ಕುತ್ತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.