ಹುನಗುಂದ: ಈ ವರ್ಷದ ಮುಂಗಾರು ಮರೆತು ಹೋಗುವ ಸಮಯ ಬಂದರೂ ಮುನಿಸಿಕೊಂಡ ಮಳೆರಾಯ ಇನ್ನೂ ಬಾರದಿರುವುದು ತಾಲ್ಲೂಕಿನ ರೈತರು ಮತ್ತು ಜನಸಾಮಾನ್ಯರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಈ ವರ್ಷ ಸಂಪೂರ್ಣ ಮಳೆ ಕೈಕೊಟ್ಟಿದೆ. ಪ್ರತಿವರ್ಷ ಜುಲೈ ಆರಂಭಕ್ಕೆ ತುಂಬಿಕೊಳ್ಳುತ್ತಿದ್ದ ಕೃಷ್ಣೆ ಮತ್ತು ಮಲಪ್ರಭೆಯರು ಎದೆತೆರೆದು ಮಳೆಹನಿಗಾಗಿ ಕಾಯ್ದು ನಿಂತಿದ್ದಾರೆ. ದಿನದಿಂದ ದಿನಕ್ಕೆ ಆತಂಕ ಮನೆ ಮಾಡುತ್ತಿದೆ.

ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ತಾಲ್ಲೂಕಿನಲ್ಲಿ ವಾಡಿಕೆಯಂತೆ ಮುಂಗಾರಿಗೆ 207.9 ಮಿಮೀ ಮಳೆ ಬೇಕು. ಅದರಲ್ಲೂ ಜೂನ್ ಅಂತ್ಯಕ್ಕೆ 171 ಮಿ.ಮೀ. ಮಳೆಯಾಗಬೇಕು. ಆದರೆ ಕೇವಲ 43.09 ಮಿ.ಮೀ. ಆಗಿದೆ. ಜುಲೈ 16ಕ್ಕೆ ತಾಲ್ಲೂಕಿನಲ್ಲಿ ಸರಾಸರಿ 8.4 ಮಿ.ಮೀ. ಆಗಿದ್ದು ವರದಿಯಾಗಿದೆ. ಇಡಿ ತಾಲ್ಲೂಕಿನಲ್ಲಿ ಮುಂಗಾರು ಬೆಳೆಯಾಗಿ ಏನನ್ನೂ ಬಿತ್ತಿಲ್ಲ. ನೀರಾವರಿ ಆಶ್ರಿತ ಪ್ರದೇಶದಲ್ಲಿ 200 ಹೆಕ್ಟೇರ್ ಹೈಬ್ರಿಡ್ ಜೋಳ, 120 ಹೆಕ್ಟೇರ್ ಸೂರ್ಯಕಾಂತಿ, 60 ಹೆಕ್ಟೇರ್ ಹತ್ತಿ, 300 ಹೆಕ್ಟೇರ್ನಲ್ಲಿ ನಾಟಿ ಮಾಡಿದ ಕಬ್ಬು ಸಂಪೂರ್ಣ ಒಣಗಿದೆ.

ಒಣ ಬೇಸಾಯವನ್ನೇ ನಂಬಿದ ತಾಲ್ಲೂಕಿನ ರೈತರು ಇಲ್ಲದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬಿತ್ತನೆಗಾಗಿ ಗೊಬ್ಬರ ಮತ್ತು ಬೀಜ ಸಂಗ್ರಹಿಸಿಟ್ಟದ್ದರೂ ಪ್ರಯೋಜನಾವಾಗಿಲ್ಲ ಭಾನುವಾರ ಬಿದ್ದ ಮಳೆ ಒಂದಿಷ್ಟು ಆಸೆ ಮೂಡಿಸಿದೆ. ಹುನಗುಂದ 16 ಮಿ.ಮೀ., ಇಳಕಲ್ 10 ಮಿ.ಮೀ., ಗುಡೂರದಲ್ಲಿ 15.4 ಮಿ.ಮೀ. ಬಿದ್ದಿದೆ.

ಉಳಿದೆಡೆ ಮುಖ ತೋರಿಲ್ಲ. ಎರಡು ದಿನಗಳಲ್ಲಿ ಮೋಡ ಬಲವಾಗಿದ್ದು ಬಂದರೆ ರೈತರ ಮುಖದಲ್ಲಿ ಸಂತಸ ಕಾಣಬಹುದು. ಹಿಂಗಾರು ಬಿತ್ತನೆಯ ಪೂರ್ಣ ತಯಾರಿಯನ್ನು ಮಾಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗೋಪಿನಾಯಕ ಪ್ರಜಾವಾಣಿಗೆ ತಿಳಿಸಿದರು.

ಹುನಗುಂದ-ಇಳಕಲ್ ನಗರಗಳಿಗೆ ನೀರು ಸರಬರಾಜು ಮಾಡುವ ಕೃಷ್ಣೆ ಒಣಗಿದ್ದು ಈಗಾಗಲೇ ನೀರಿನ ತೊಂದರೆ ಕಂಡಿದೆ. ಸುಸೂತ್ರವಾಗಿದ್ದ ನೀರು ಸರಬರಾಜು ನಾಲ್ಕು ದಿನಕ್ಕೊಮ್ಮೆ ಬಂದಿದ್ದು ಹೀಗೆ ಆದರೆ ಪರಿಸ್ಥಿತಿ ಗಂಭೀರವಾಗಬಹುದು ಎನ್ನಲಾಗಿದೆ. ಕನಿಷ್ಠ ಕುಡಿಯುವ ನೀರಿಗೂ ತತ್ವಾರ ತಂದ ಮಳೆರಾಯ ಮುನಿಸಿಕೊಂಡಿದ್ದು, ಮುಂದಿನ ಗತಿ ಏನು ಎಂದು ಹಿರಿಯ ರೈತರಾದ ಶಿವಪುತ್ರಗೌಡ ಪೈಲ ಮತ್ತು ಮುತ್ತಣ್ಣ ಮನ್ನಾಪುರ ಪತ್ರಿಕೆಯ ಮುಂದೆ ಆತಂಕ ವ್ಯಕ್ತಪಡಿಸುತ್ತಾರೆ.

ಮಳೆ ಕೊರತೆಯಿಂದ ಬಹಳಷ್ಟು ಕಡೆ ನೀರಿನ ಮೂಲಗಳಾದ ಕೆರೆ, ಬಾವಿ ಮತ್ತು ಕೊಳವೆ ಬಾವಿಗಳು ಬತ್ತಿ ಹೋಗಿವೆ. ನೀರಾವರಿ ಕ್ಷೇತ್ರದಲ್ಲಿ ಹಾಕಿದ ಬೆಳೆಗಳು ಒಣಗಿವೆ. ಸರ್ಕಾರ ಮತ್ತು ತಾಲ್ಲೂಕು ಆಡಳಿತ ಎಲ್ಲ ಕುಡಿಯುವ ನೀರು ಸರಬರಾಜು ಚೆನ್ನಾಗಿದೆ ಎಂಬ ಸಬೂಬು ಕೊಟ್ಟರೂ ಅಲ್ಲಲ್ಲಿ ನೀರಿನ ತೊಂದರೆ ಉಲ್ಬಣಿಸಿದೆ.

ಕೆಲವರು ಅನಿವಾರ್ಯ ಜನರು ಟ್ಯಾಂಕರ್ಗೆ ಮೊರೆ ಹೋದರೆ ಮತ್ತೆ ಬಹಳಷ್ಟು ಜನ ಕುಡಿಯಲು ಅರ್ಹವಿಲ್ಲದ ಉಪ್ಪು ನೀರನ್ನು ಕುಡಿಯುತ್ತಿದ್ದಾರೆ. ಭಾನುವಾರ ದಿಂದ ಒಂದಿಷ್ಟು ಆಸೆ ಹುಟ್ಟಿಸಿದ ಮಳೆರಾಯ ತಾಲ್ಲೂಕಿನಾದ್ಯಂತ ಸುರಿದರೆ ಒಳ್ಳೆಯದು ಎಂದು ಹಲವರು. ಅಧಿಕಾರಕ್ಕಾಗಿ ಬಡಿದಾಡುತ್ತಿರುವ ರಾಜ್ಯದ ನಾಯಕರು, ರೈತರತ್ತ, ಬರಗಾಲದ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.