ರೋಣ: ಕಳೆದ ಎರಡು ವರ್ಷದಿಂದ ರೈತರಿಗೆ ಮಳೆಯು ಕಾಡುತ್ತಿದ್ದು ಸರಿ ಯಾದ ಸಮಯದಲ್ಲಿ ಮಳೆಯು ಆಗದೇ ಇರುವುದರಿಂದ ಕಂಗಾಲಾಗಿ ರುವ ರೈತ ಸಮೂಹಕ್ಕೆ ಸರ್ಕಾರ ಸುವರ್ಣ ಭೂಮಿ ಯೋಜನೆಯನ್ನು ಜಾರಿಗೆ ತಂದು ಮೊದಲ ಕಂತಿನ ಹಣ ವನ್ನು ಕಳೆದ ವರ್ಷ ಕೊಟ್ಟದ್ದರಾ ದರೂ ಅದರ ಎರಡನೇ ಕಂತಿನ ಹಣ ಇನ್ನು ಬಿಡುಗಡೆಯಾಗದೇ ಇರುವುದರಿಂದ ತಾಲ್ಲೂಕಿನ ರೈತ ಸಮೂಹ ಕಂಗಾಲಾ ಗಿದೆ.

ಸುವರ್ಣ ಭೂಮಿ ಯೋಜನೆಯ ಮೊದಲನೇ ಕಂತಿನ ಹಣವನ್ನು ಪಡೆದ ರೈತರು ಎರಡನೇ ಕಂತಿನ ಹಣಕ್ಕಾಗಿ ಕಚೇರಿಗೆ ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ. ಅಲ್ಲಿ ಅಧಿಕಾರಿಗಳು ಇಲ್ಲಿಯವರೆಗೆ ಎರಡನೇ ಕಂತಿನ ಹಣವು ಬಂದಿರುವುದಿಲ್ಲ. ಅದೂ ಬಂದ ನಂತರ ತಕ್ಷಣ ಕೊಡುತ್ತೇವೆ ಎಂದು ಸಾಗುಹಾಕುತ್ತಿದ್ದಾರೆ. ಬರಗಾಲದಿಂದ ಕಂಗಾಲಾದ ರೈತರಿಗೆ ವಿನಾಕಾರಣ ಕಾಲ ಹರಣ ಮಾಡುವ ಯೋಜನೆ ಯಾಗಿ ರೈತರನ್ನು ಕಚೇರಿಗೆ ಅಲೆದಾ ಡಿಸುವಂತಹ ಯೋಜನೆ ಇದಾಗಿದೆ.

ಏನಿದು ಸುವರ್ಣ ಭೂಮಿ ಯೋಜನೆ: ಕಳೆದ ವರ್ಷ ಜಾರಿಗೆ ತಂದ ಈ ಯೋಜನೆ ರೈತರಿಗೆ ಅನುಕೂಲ ವಾಗಲಿ ಎನ್ನುವ ಸದುದ್ದೇಶದಿಂದ 4 ಎಕರೆ ವಿಸ್ತೀರ್ಣದ ಒಳಗಿನ ಚಿಕ್ಕ ಹಿಡುವಳಿ ರೈತರಿಗಾಗಿ ಮುಂಗಾರಿಗೆ 5000 ಹಿಂಗಾರಿಗೆ 5000 ರೂಪಾಯಿಗಳನ್ನು ಬೀಜ, ಗೊಬ್ಬರ ಇತ್ಯಾದಿಗಳನ್ನು ಖರೀದಿಸಲು ಅನು ಕೂಲವಾಗಲಿ ಎನ್ನುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆಗೆ ಸುವರ್ಣ ಭೂಮಿ ಯೋಜನೆ ಎಂದು ಹೆಸರು ಇಟ್ಟು ಜಾರಿಗೆ ತರಲಾಗಿದೆ. ಆದರೆ ಮುಂಗಾರಿನ ಹಣವನ್ನು ವಿತರಿ ಸಲಾಗಿದೆ. ಆದರೆ ಹಿಂಗಾರಿನ ಹಣ ವನ್ನು ಇಲ್ಲಿಯವರೆಗೆ ವಿತರಿಸಿಲ್ಲದಿರು ವುದೇ ರೈತರಿಗೆ ಬೇಸರಕ್ಕೆ ಕಾರಣ ವಾಗಿದೆ.

ಫಲಾನುಭವಿಗಳ ಆಯ್ಕೆ: ಈ ಯೋಜನೆಯಲ್ಲಿ ಯಾವುದೇ ಚಿಕ್ಕ ಹಿಡು ವಳಿದಾರ ರೈತರಿಗೆ ಅನ್ಯಾಯವಾಗ ಬಾರದು ಎನ್ನುವ ಹಿತ ದೃಷ್ಟಿಯಿಂದ ಎಲ್ಲ ರೈತರ ಎದುರಿನಲ್ಲೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಪಾರದರ್ಶಕತೆಯಿಂದ ಕೈಗೊಳ್ಳಲಾ ಯಿತು. ಲಾಟರಿಯಲ್ಲಿ ಸಣ್ಣ ಪುಟ್ಟ ಲೋಪ ದೊಷಗಳು ಕಾಣದಂತೆ ನಡೆದು ಹೋದವು. ಏನೇ ಆಗಲಿ ಲಾಟರಿಯಲ್ಲಿ ಆಯ್ಕೆಯಾದ ವರಿಗೆ ಸುವರ್ಣ ಭೂಮಿಯ ಎರಡನೇ ಕಂತಿನ ಹಣ ಇನ್ನು ಕೈಸೇರದೇ ಇರುವು ದರಿಂದ ರೈತರಿಗೆ ಬೇಸರವಾಗಿದೆ.

ರೋಣ ತಾಲೂಕಿನ ರೈತರಿಗೆ ಬರ ಬೇಕಾದ ಸುವರ್ಣ ಭೂಮಿ ಯೋಜ ನೆಯಲ್ಲಿ,ಲಾಟರಿಯಲ್ಲಿ ಆಯ್ಕೆಯಾದ ಚಿಕ್ಕ ಹಿಡುವಳಿದಾರ ಫಲಾನುಭವಿ ಗಳಿಗೆ ತಾಲೂಕಿನ ಅನುದಾನ 56.81 ಲಕ್ಷ ಇದ್ದರೆ, 1176 ಫಲಾನುಭವಿ ಗಳಿದ್ದಾರೆ.

ಸುವರ್ಣ ಭೂಮಿಯೋಜನೆಯಲ್ಲಿ ಜಿಲ್ಲೆಯ ರೈತರಿಗೆ ಬರಬೇಕಾದ ಸರ್ಕಾರದ ಪ್ರೋತ್ಸಾಹ ಧನ ಲಾಟರಿ ಯಲ್ಲಿ ಆಯ್ಕೆಯಾಗಿ ವರ್ಷ ಕಳೆದರೂ ಸರ್ಕಾರದಿಂದ ಹಣ ಬಿಡುಗಡೆಯಾಗ ದಿರುವುದರ ಅರ್ಥವಾದರೂ ಏನು? ಎನ್ನುವುದು ಜಿಲ್ಲೆಯ ಚಿಕ್ಕ ಹಿಡುವಳಿ ದಾರ ರೈತರ ಚಿಂತೆಯಾಗಿದೆ.

ರಾಜ್ಯ ಬಿ.ಜೆ.ಪಿ ಸರಕಾರಕ್ಕೆ ರೈತರ ನೋವು ಅರಿವುವಲ್ಲಿ ಸಂಪೂರ್ಣ ವಿಫಲವಾಗಿದೆ.
ಸುವರ್ಣ ಭೂಮಿಯ ಪ್ರೋತ್ಸಾಹ ಹಣ ಬರಗಾಲದಲ್ಲಿರುವ ಸಣ್ಣ ರೈತರಿಗೆ ತಲುಪಿದ್ದರೆ ಏನೂ ಒಂದು ಅನೂಕೂಲ ವಾಗುತ್ತಿತ್ತು. ಆ ಆಶೆಗೆ ಸರಕಾರ ತಣ್ಣಿ ರೆರಚುತ್ತಿದೆ. ಆದ ಕಾರಣ ಎರಡನೇ ಕಂತಿನ ಹಣವನ್ನು ಬೇಗನೇ ಬಿಡುಗಡೆ ಮಾಡಬೇಕು ಎಂದು ಹೊಳೆಆಲೂರ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬಸವ ರಾಜ ಸುಂಕದ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.