ಸೋಮವಾರ, ಏಪ್ರಿಲ್ 19, 2021
25 °C

ಬಾಲಕನ ಕೊಲೆ ಪ್ರಕರಣ: ಮಹತ್ವದ ಸುಳಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ತಾಲ್ಲೂಕಿನ ಹಳೇ ಇಕ್ಕೇರಿ ಗ್ರಾಮದ ಜಯಂತ್ ಯಾನೆ ಜಯರಾಮ್ ಎಂಬ ಬಾಲಕನ ಕೊಲೆ  ಪ್ರಕರಣವನ್ನು ಭೇದಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಾಲಕನ ಮಲತಾಯಿ ಸರಸ್ವತಿ ತನ್ನ ಪ್ರಿಯಕರ ಭದ್ರಾವತಿ ತಾಲ್ಲೂಕು ಗುಡಮಘಟ್ಟ ಗ್ರಾಮದ ರವಿ ಯಾನೆ ರೇವಣೇಶ ಎಂಬಾತನೊಂದಿಗೆ ಸೇರಿಕೊಂಡು ಜಯಂತ್‌ನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ  ಹಂತದ ತನಿಖೆಯಿಂದ ತಿಳಿದುಬಂದಿದೆ.ಯಡಜಿಗಳಮನೆಯ ಪ್ರೌಢಶಾಲೆ ಯಲ್ಲಿ 8ನೇ ತರಗತಿ ಓದುತ್ತಿದ್ದ ನಾರಾಯಣ ಗೌಡರ ಮಗ ಜಯಂತ್ ಕಳೆದ ವಿಜಯದಶಮಿ ಹಬ್ಬದ ದಿನದಿಂದ ನಾಪತ್ತೆಯಾಗಿದ್ದು, ಮಜ್ಜಿಗೆರೆ ಕಾಡಿನಲ್ಲಿ ಅ. 29ರಂದು ಆತನ ಶವ  ಪತ್ತೆಯಾಗಿತ್ತು. ಶವದ ಬಳಿ ವಿಷದ ಬಾಟಲ್‌ಗಳು ದೊರಕಿದ್ದು  ಬಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಭಾವನೆ ಮೂಡಿಸುವ ಸಲುವಾಗಿ ಕೊಲೆಗಡುಕರು ಆ ರೀತಿ ಮಾಡಿದ್ದರು ಎನ್ನಲಾಗಿದೆ.ನಾರಾಯಣ ಗೌಡರ ಆಸ್ತಿ ಲಪಟಾಯಿಸುವ ಸಂಚಿನ ಭಾಗವಾಗಿ ಜಯಂತ್‌ನ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಸರಸ್ವತಿ ಹಾಗೂ ರವಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದು ಗುರುವಾರ ಪ್ರಕರಣದ ಸಂಪೂರ್ಣ ವಿವರ ಬೆಳಕಿಗೆ ಬರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.