ಬುಧವಾರ, ಜನವರಿ 29, 2020
27 °C

ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಮತ್ತು ಚಾಮರಾಜ ನಗರ ಜಿಲ್ಲೆ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಗಳ ಜಂಟಿ ಆಶ್ರಯದಲ್ಲಿ ಶನಿವಾರ ಮತ್ತು ಭಾನುವಾರ ರಾಜ್ಯ ಸೀನಿಯರ್‌ ಬಾಲ್‌ಬ್ಯಾಡ್ಮಿಂಟನ್‌ ಲೀಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ತಂಡಗಳು ಶುಕ್ರವಾರ ಸಂಜೆ 4ಗಂಟೆಗೆ ಚಾಮರಾಜನಗರದ ಅಂಬೇಡ್ಕರ್‌ ಕ್ರೀಡಾಂಗಣದ ಬಳಿ ಹಾಜರಿರಬೇಕು ಎಂದು ರಾಜ್ಯ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಪುರುಷರ ವಿಭಾಗದಲ್ಲಿ ಸುಮಾರು 24 ಮತ್ತು ಮಹಿಳಾ ವಿಭಾಗದಲ್ಲಿ 15 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಟೂರ್ನಿಯಲ್ಲಿ ತೋರುವ ಸಾಮರ್ಥ್ಯದ ಆಧಾರದ ಮೇಲೆ ಮುಂಬರುವ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ ಮತ್ತು ಫೆಡರೇಷನ್‌ ಕಪ್‌ ಟೂರ್ನಿಗಳಿಗೆ ರಾಜ್ಯ ತಂಡವನ್ನು ಆಯ್ಕೆ ನಡೆಸಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)