ಬುಧವಾರ, ಮೇ 25, 2022
22 °C

ಬಿಎಂಟಿಸಿ ಗಮನಿಸುತ್ತದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಕನ್ನಡದ ನಾಮಫಲಕ ಎಷ್ಟು ಮುಖ್ಯವೊ ಹಾಗೆ, ಬೆಂಗಳೂರು ಬಸ್ಸುಗಳಲ್ಲಿ ಕನ್ನಡದ ಮಾರ್ಗಸೂಚನೆ ಫಲಕ ಅಷ್ಟೆ ಮುಖ್ಯ. ಅದರಲ್ಲಿ ತಪ್ಪುಗಳಿದ್ದರೆ ಪರಿಶೀಲಿಸಿ ಸರಿಪಡಿಸುವುದು ಮೇಲಧಿಕಾರಿಗಳ ಕರ್ತವ್ಯ.

ಆದರೆ ಆ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಅಂತದೊಂದು ಸಮಸ್ಯೆ ಬೆಂಗಳೂರನ್ನೇ ಸುತ್ತಿ ಬರುವ, ಬೆಂಮಸಾಸಂ ಬಸ್ಸಿನಲ್ಲಿದೆ. ಒಮ್ಮೆ ನಾನು ಎಚ್‌ಎಎಲ್‌ನ ಇಎಸ್‌ಐ ಲೋಕಲ್ ಆಫೀಸಿಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೋಗುತ್ತಿರುವಾಗ ಮುಂದೆ ಹೋಗುತ್ತಿದ್ದ ಬಸ್ ಬೋರ್ಡ್ ನೋಡಿ ಬೇಸರಗೊಂಡೆ.

ಬನಶಂಕರಿ- ಚಂದಾಪುರ ಬಸ್ಸಿನ (ಮಾರ್ಗ ಸಂಖ್ಯೆ 600ಎಫ್, ನಂ. ಕೆಎ 01, ಎಫ್- 8859, ವಿಭಾಗ 32, ಬಣ್ಣ ನೀಲಿ) ಎಲೆಕ್ಟ್ರಾನಿಕ್ ಫಲಕದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬದಲಾಗಿ ‘ಎಲೆಕ್ಟಾನಿಚಕ್’ ಎಂದು ಬರೆದಿತ್ತು. ನಾನು ಬೊಮ್ಮನಹಳ್ಳಿಯವರೆಗೂ ಗಮನಿಸಿದ್ದೇನೆ. ದಯವಿಟ್ಟು ಬೆಂಮಸಾಸಂ ಮೇಲಾಧಿಕಾರಿಗಳು ಇದನ್ನು ಸರಿಪಡಿಸಬೇಕಾಗಿ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.